Ad Widget

“ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪುರಸ್ಕೃತ ಬೆಂಡೋಡಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತಾ ಕುಮಾರಿ ಬೆಂಡೋಡಿ ಇಂದು(ಜ.31) ನಿವೃತ್ತಿ

“ದ.ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪುರಸ್ಕೃತರು, ಮುಚ್ಚಿ ಹೋಗಿದ್ದ ಶಾಲೆಯನ್ನು ಮತ್ತೆ ತೆರೆಸಿ ಮುನ್ನಡೆಸಿದ ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತಾ ಕುಮಾರಿ ಬೆಂಡೋಡಿ ರವರು ಇಂದು(ಜ.31) ನಿವೃತ್ತಿ ಹೊಂದಲಿದ್ದಾರೆ.
ಕಳೆದ 31 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮೂಲತಃ ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಸಬಳೂರು ದಿ| ಕುಕ್ಕಪ್ಪ ಗೌಡ ಹಾಗೂ ದಿ| ಲಿಂಗಮ್ಮ ದಂಪತಿಗಳ ಪುತ್ರಿ.
1966ರಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಬಳೂರು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆತೂರಿನಲ್ಲಿ ಪಡೆದರು.
ನಂತರ ತಮ್ಮ ಪ್ರೌಢ ಶಿಕ್ಷಣವನ್ನು ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಪಡೆದ ಇವರು ಮಂಗಳೂರಿನ ರೋಸಾ ಮಿಸ್ತಿಕಾ ಮುಲ್ಲೂರು ಮಹಿಳಾ ಶಿಕ್ಷಣ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದರು.
1994ರಲ್ಲಿ ಕಂದ್ರಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು 10 ತಿಂಗಳುಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ 1995ರಲ್ಲಿ ಬಂಗ್ಲೆಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಅಲ್ಲಿ ಸಹ ಶಿಕ್ಷಕರಾಗಿ ಹಾಗೂ ಕಳೆದ ಮೂರು ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಒಟ್ಟು ಸುಮಾರು 23 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು(ಜ.31) ನಿವೃತ್ತಿ ಹೊಂದುತ್ತಿದ್ದಾರೆ.
ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಬ್ಯಾಗ್ ಹಾಗೂ ಸಮವಸ್ತ್ರಗಳನ್ನು ಕೊಡುಗೆಯಾಗಿ ನೀಡುತ್ತಾ ಬಂದಿರುವ ಇವರು ತಮ್ಮ ಅವಧಿಯಲ್ಲಿ ದಾನಿಗಳು, ಗ್ರಾಮ ಪಂಚಾಯತ್, ಪೋಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶಾಲಾ ಕಟ್ಟಡ ದುರಸ್ತಿ, ಮೈದಾನ ವಿಸ್ತರಣೆ, ಹೂದೋಟ, ತರಕಾರಿ ತೋಟ, ಶಾಲಾ ಆವರಣ ಗೋಡೆ ಹಾಗೂ ಸುಸಜ್ಜಿತ ಶೌಚಾಲಯದ ನಿರ್ಮಾಣ ಮಾಡಿಸುವಲ್ಲಿ ಸಫಲರಾಗಿದ್ದಾರೆ.
ಇವರ ಪತಿ ಸೋಮಸುಂದರ ರವರು ಕೊಲ್ಲಮೊಗ್ರು ಗ್ರಾಮದ ಬಂಗ್ಲೆಗುಡ್ಡೆ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಪುತ್ರ ಪವನ್ ಕೃಷಿಕರಾಗಿದ್ದಾರೆ. ಸೊಸೆ ಜ್ಯೋತಿ ಗೃಹಿಣಿ ಹಾಗೂ ಆಜ್ಞಾ.ಕೆ.ಪಿ ಮೊಮ್ಮಗಳು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading