Ad Widget

ಮಡಪ್ಪಾಡಿ : ಫೆ.01 ರಿಂದ 4 ರವರೆಗೆ ಶೀರಡ್ಕದಲ್ಲಿ ಶ್ರೀ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವ

ಮಡಪ್ಪಾಡಿ ಗ್ರಾಮದ ಶೀರಡ್ಕ ಶ್ರೀ ಉಳ್ಳಾಕುಲು ಮತ್ತು ಮಲೆಭೂತಗಳ ದೈವಸ್ಥಾನದಲ್ಲಿ ಶ್ರೀ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವವು ಫೆ.01ನೇ ಆದಿತ್ಯವಾರದಿಂದ ಫೆ.04ನೇ ಬುಧವಾರದವರೆಗೆ ನಡೆಯಲಿದ್ದು, ಫೆ.01ರಂದು ಬೆಳಿಗ್ಗೆ 7:00 ಗಂಟೆಗೆ ಗಣಹೋಮ, 8:00 ಗಂಟೆಗೆ ನಾಗತಂಬಿಲ, 9:00 ಗಂಟೆಗೆ ವನದುರ್ಗಾಪೂಜೆ, 9:30ಗೆ ಉಪಹಾರ, 10:00 ಗಂಟೆಗೆ ಚಾವಡಿಯಲ್ಲಿ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.
ಫೆ.02ರಂದು ಅಪರಾಹ್ನ 3:00 ಗಂಟೆಯಿಂದ ಊರವರ ವಂತಿಗೆ ನೋಂದಾವಣೆ, ಸಂಜೆ 6:00 ಗಂಟೆಗೆ ಚಾವಡಿಯಿಂದ ಭಂಡಾರ ಹಿಡಿದು ಮಾಡಕ್ಕೆ ಹೊರಡುವುದು.
ಫೆ.03ರಂದು ಪ್ರಾತಃಕಾಲ 5:00 ಗಂಟೆಯಿಂದ ಶ್ರೀ ಉಳ್ಳಾಕುಲು ದೈವದ ನೇಮ, ಪೂರ್ವಾಹ್ನ 10:00 ಗಂಟೆಯಿಂದ ಶ್ರೀ ಪುರುಷ ದೈವದ ನೇಮ, ಗಂಧಪ್ರಸಾದ ವಿತರಣೆ, ಅಪರಾಹ್ನ 1:00 ಗಂಟೆಯಿಂದ ಅನ್ನಸಂತರ್ಪಣೆ, 3:00 ಗಂಟೆಯಿಂದ ಶ್ರೀ ಮಲೆಚಾಮುಂಡಿ ದೈವದ ನೇಮ, ಸಂಜೆ 6:00 ಗಂಟೆಯಿಂದ ಪಿಲಿಚಾಮುಂಡಿ ದೈವದ ನೇಮ, ರಾತ್ರಿ 8:00 ಗಂಟೆಯಿಂದ ಶ್ರೀ ಅಜ್ಜಿ ದೈವದ ನೇಮ, ಗಂಧಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಫೆ.04ರಂದು ಮದ್ಯಾಹ್ನ 12:00 ಗಂಟೆಯಿಂದ ಬದಿಪೂಜೆ ಹಾಗೂ ಕೋಳಿ ಕೊಯ್ಯುವ ಕಾರ್ಯಕ್ರಮ, ರಾತ್ರಿ 7:00 ಗಂಟೆಯಿಂದ ಶ್ರೀ ಗುಳಿಗ ದೈವದ ನೇಮ ನಡೆಯಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading