Ad Widget

ಬೆಳ್ಳಾರೆ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮದ ಪೂರ್ವಭಾವಿ ಸಭೆ

ಬೆಳ್ಳಾರೆ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮವು ಫೆ.01ರಂದು ಜರುಗಲಿದ್ದು, ಇದರ ಪೂರ್ವಭಾವಿ ಸಭೆಯು ಜ.25 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಬೆಳ್ಳಾರೆ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಈ ಮಂಡಲದ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಯಿತು.
ಹಿಂದೂ ಸಮಾಜದ ಪ್ರಮುಖರಿಗೆ, ಸಮಾಜಕ್ಕೆ ಸೇವಾ ಮನೋಭಾವದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲು ಪ್ರಮುಖರು ನಿರ್ಣಯವನ್ನು ಕೈಗೊಂಡರು.
ಬೆಳ್ಳಾರೆ ಮಂಡಲದ ಹಿಂದೂ ಸಂಗಮದ ಕಾರ್ಯಕ್ರಮದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡುವ ದೃಷ್ಟಿಯಿಂದ ಈ ಪೂರ್ವಭಾವಿ ಸಭೆಯ ಕಾರ್ಯ ನಡೆಯಿತು.
ಈ ಹಿಂದೂ ಸಂಗಮದ ದಿನದಂದು ಸಂಜೆ 3:00 ಘಂಟೆಗೆ ಬೆಳ್ಳಾರೆಯ ಮಾಸ್ತಿಕಟ್ಟೆಯಿಂದ ಮುಖ್ಯರಸ್ತೆಯಲ್ಲಿ ಕುಣಿತ ಭಜನೆ, ಚೆಂಡೆ, ವಾದ್ಯ ಹಾಗೂ ವೇಷ-ಭೂಷಣಗಳಿಂದ ಮೆರವಣಿಗೆ ಆರಂಭಗೊಂಡು ವಿಜೃಂಭಣೆಯಿಂದ ನಡೆಯಲಿದ್ದು, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading