Ad Widget

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ.24ರಿಂದ ಫೆ.09 ರವರೆಗೆ ವರ್ಷಾವಧಿ ಜಾತ್ರೋತ್ಸವ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ.24ರಿಂದ ಫೆ.09 ರವರೆಗೆ ವರ್ಷಾವಧಿ ಜಾತ್ರೋತ್ಸವ ನಡೆಯುತ್ತಿದ್ದು, ಜ.24ರಂದು ಗೊನೆ ಮುಹೂರ್ತ ನೆರವೇರಿತು.
ಫೆ.01ರಂದು ಪೂರ್ವಾಹ್ನ 9:00 ರಿಂದ ವೇದ ಪಾರಾಯಣ ಆರಂಭ, ಮದ್ಯಾಹ್ನ 12:30ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆದು ಸಂಜೆ 6:00 ಗಂಟೆಗೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಸಂಜೆ 7:00 ಗಂಟೆಗೆ ಧ್ವಜಾರೋಹಣ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಫೆ.02ರಂದು ಪೂರ್ವಾಹ್ನ 7:00 ಗಂಟೆಗೆ ನಾಗತೀರ್ಥದ ಮೂಲಸ್ಥಾನ ಬಂಟಮಲೆಯಿಂದ ಶ್ರೀ ದೇವಾಲಯಕ್ಕೆ ತೀರ್ಥ ತರುವುದು, ಪೂರ್ವಾಹ್ನ 10:00 ಗಂಟೆಯಿಂದ ರುದ್ರ ಹವನ, ಮದ್ಯಾಹ್ನ 12:30ಕ್ಕೆ ಮಹಾಪೂಜೆ, ನಿತ್ಯಬಲಿ ಹಾಗೂ ಅನ್ನಸಂತರ್ಪಣೆ ನಡೆದು ಸಂಜೆ 6:00 ಗಂಟೆಗೆ ಶ್ರೀ ರಕ್ತೇಶ್ವರಿ ದೈವದ ಸನ್ನಿಧಿಯಲ್ಲಿ ತಂಬಿಲ ಸೇವೆ ಹಾಗೂ ಭಂಡಾರ ತೆಗೆಯುವುದು, ರಾತ್ರಿ 7:30ಕ್ಕೆ ದೇಗುಲದಲ್ಲಿ ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ ನಡೆದು ರಾತ್ರಿ 8:00 ರಿಂದ ಶ್ರೀ ರಕ್ತೇಶ್ವರಿ ದೈವದ ನೇಮೋತ್ಸವ ನಡೆಯಲಿದೆ.
ಫೆ.03ರಂದು ಪೂರ್ವಾಹ್ನ 8:00 ಗಂಟೆಗೆ ಮಹಾಪೂಜೆ, ಪೂರ್ವಾಹ್ನ 8:30ರಿಂದ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಹಸಿರು ಕಾಣಿಕೆಗಳನ್ನು ತರಲು ಹೊರಡುವುದು, ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ನಿತ್ಯಬಲಿ ಹಾಗೂ ಅನ್ನಸಂತರ್ಪಣೆ ನಡೆದು ಸಂಜೆ 4:00 ಗಂಟೆಯಿಂದ ವಿವಿಧ ಊರುಗಳಿಂದ ಸಂಗ್ರಹಣೆ ಮಾಡಿದ ಹಸಿರು ಕಾಣಿಕೆಗಳನ್ನು ಮೆರವಣಿಗೆಯಲ್ಲಿ ಪುತ್ಯ ಸತ್ಯಕಟ್ಟೆಯಿಂದ ದೇವಳಕ್ಕೆ ತರುವುದು, ಸಂಜೆ 6:00 ಗಂಟೆಯಿಂದ ಉಗ್ರಾಣ ತುಂಬಿಸುವುದು, ರಾತ್ರಿ 7:30ಕ್ಕೆ ಮಹಾಪೂಜೆ, ದಂಡಮಾಲೆ ಹಾಕಿ ಬಲಿ ಹೊರಡುವುದು, ಬೇತಾಳಗಳು ಇಳಿಯುವುದು ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಫೆ.04ರಂದು ಪೂರ್ವಾಹ್ನ 8:00 ಗಂಟೆಗೆ ಮಹಾಪೂಜೆ, ಶ್ರೀ ದೇವರ ಉತ್ಸವ, ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಶ್ರೀ ದೇವರ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆದು ರಾತ್ರಿ 7:30ಕ್ಕೆ ಮಹಾಪೂಜೆ, ಶ್ರೀ ದೇವರ ಉತ್ಸವ,ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಫೆ.05ರಂದು ಪೂರ್ವಾಹ್ನ 8:00 ಗಂಟೆಗೆ ಮಹಾಪೂಜೆ, ಶ್ರೀ ದೇವರ ಉತ್ಸವ, 11:30ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆದು ರಾತ್ರಿ ದೀಪೋತ್ಸವ, ಮಹಾಪೂಜೆ, ಶ್ರೀ ದೇವರ ಉತ್ಸವ, ಬೀದಿಕಟ್ಟೆ ಪೂಜೆ, ಕಾಚುಕುಜುಂಬ, ಶಿರಾಡಿ, ರುದ್ರಚಾಮುಂಡಿ ದೈವಗಳ ನರ್ತನ ಸೇವೆ, ವಸಂತ ಕಟ್ಟೆಪೂಜೆ, ಶ್ರೀ ದೇವರ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಫೆ.06ರಂದು ಪೂರ್ವಾಹ್ನ 8:00 ಗಂಟೆಗೆ ಮಹಾಪೂಜೆ, ಶ್ರೀ ದೇವರ ಉತ್ಸವ, ಮಧ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಶ್ರೀ ದೇವರ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆದು ರಾತ್ರಿ ಗಂಟೆ 7:00 ಗಂಟೆಗೆ ಶ್ರೀ ದೇವರ ಉತ್ಸವ, ರಾತ್ರಿ 11:00 ಗಂಟೆಯಿಂದ ಬ್ರಹ್ಮ ರಥೋತ್ಸವ, ಕಾಚುಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ, ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಫೆ.07ರಂದು ಮುಂಜಾನೆ 6:00 ಗಂಟೆಗೆ ಕವಾಟೋದ್ಘಾಟನೆ, ದೇವರಿಗೆ ಅಭಿಷೇಕ, ಮಹಾಪೂಜೆ, ಪೂರ್ವಾಹ್ನ 8:00 ಗಂಟೆಗೆ ಗರಡಿಬೈಲು ಮೂಲನಾಗನಕಟ್ಟೆಯಲ್ಲಿ ತಂಬಿಲಸೇವೆ, ಪೂರ್ವಾಹ್ನ 9:00 ಗಂಟೆಯಿಂದ ಬಲಿ ಹೊರಟು ಕಾಚುಕುಜುಂಬ ದೈವದ ನರ್ತನ ಸೇವೆಯೊಂದಿಗೆ ನಾಗತೀರ್ಥ ಜಳಕದ ಹೊಳೆಯಲ್ಲಿ ಶ್ರೀ ದೇವರ ಅವಭೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆದು ಅಪರಾಹ್ನ 3:00 ಗಂಟೆಗೆ ದೇಗುಲದ ಭಂಡಾರ ಮನೆಯಿಂದ ಶ್ರೀ ಉಳ್ಳಾಕುಲು ಮತ್ತು ಕಾಚುಕುಜುಂಬದ ಭಂಡಾರವನ್ನು ಮೂಲಸ್ಥಾನ ಗರಡಿಬೈಲಿಗೆ ಮೆರವಣಿಗೆಯಲ್ಲಿ ತರುವುದು, ಸಂಜೆ 5:00 ಗಂಟೆಗೆ ಧ್ವಜಾರೋಹಣ, ಸಂಜೆ 6:00 ಗಂಟೆಯಿಂದ ಶ್ರೀ ಉಳ್ಳಾಕುಲು ದೈವದ ನೇಮ, ಸಂಜೆ 7:30ರಿಂದ ಅನ್ನಸಂತರ್ಪಣೆ, ರಾತ್ರಿ 8:00 ಗಂಟೆಯಿಂದ ಶ್ರೀ ಕಾಚುಕುಜುಂಬ ದೈವದ ನೇಮ, ಪ್ರಸಾದ ವಿತರಣೆ, ಧ್ವಜಾವರೋಹಣ ಹಾಗೂ ಶ್ರೀ ಉಳ್ಳಾಕುಲು ಮತ್ತು ಕಾಚುಕುಜುಂಬ ದೈವದ ಭಂಡಾರವನ್ನು ಮೆರವಣಿಗೆಯಲ್ಲಿ ದೇಗುಲದ ಭಂಡಾರ ಮನೆಗೆ ತರುವುದು.
ಫೆ.08ರಂದು ಪೂರ್ವಾಹ್ನ 8:00 ಗಂಟೆಗೆ ಮಹಾಪೂಜೆ, ಶ್ರೀ ದೇವಳದಲ್ಲಿ ಸಂಪ್ರೋಕ್ಷಣೆ, ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆದು ಸಂಜೆ 7:00 ಗಂಟೆಗೆ  ಪುತ್ಯದಿಂದ ಶಿರಾಡಿ ದೈವದ ಭಂಡಾರ ತರುವುದು ಹಾಗೂ ರುದ್ರಚಾಮುಂಡಿ ಭಂಡಾರ ತೆಗೆಯುವುದು.
ಫೆ.09ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ, ಶಿರಾಡಿ ದೈವ ಹಾಗೂ ರುದ್ರಚಾಮುಂಡಿ ದೈವಗಳ ನೇಮ, ಅನ್ನಸಂತರ್ಪಣೆ, ಶಿರಾಡಿ ದೈವದ ಭಂಡಾರ ಪುತ್ಯಕ್ಕೆ ತೆಗೆದುಕೊಂಡು ಹೋಗುವುದು.

ಅದೇ ರೀತಿ ಫೆ.01 ರಿಂದ ಫೆ`.07ರವರೆಗೆ ಪ್ರತೀದಿನ ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ.

ಹಾಗೆಯೇ ಫೆ.15ರಂದು ಮಹಾಶಿವರಾತ್ರಿ ಪ್ರಯುಕ್ತ ಭಜನೆ ಮತ್ತು ವಿಶೇಷ ಸೇವೆಗಳು ನಡೆಯಲಿವೆ.

ಮಾ.01ರಂದು ರಾತ್ರಿ 7:00 ಗಂಟೆಯಿಂದ ರಂಗಪೂಜೆ, ಬೀದಿನೇಮ, ಅನ್ನಸಂತರ್ಪಣೆ, ರಾತ್ರಿ 8:00 ಗಂಟೆಯಿಂದ ಪರಿವಾರ ದೈವಗಳಾದ ಉಳ್ಳಾಕುಲು, ಕಾಚುಕುಜುಂಬ, ಮಹಿಷಂತಾಯ, ವ್ಯಾಘ್ರ ಚಾಮುಂಡಿ, ಕುಪ್ಪೆ ಪಂಜುರ್ಲಿ, ವರ್ಣಾರ ಪಂಜುರ್ಲಿ, ಪುರುಷ ದೈವ, ಹೊಟ್ಟ ಭೂತ ಹಾಗೂ ಗುಳಿಗ ದೈವಗಳಿಗೆ ನರ್ತನ ಸೇವೆ ನಡೆಯಲಿವೆ.
ಮಾ.02ರಂದು ರಾತ್ರಿ 9:00 ಗಂಟೆಯಿಂದ ಆದಿಬೈದೇರುಗಳ ನೇಮೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading