Ad Widget

ಕುಲ್ಕುಂದ : ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ರಥಸಪ್ತಮಿಯಂದು 108 ಸೂರ್ಯ ನಮಸ್ಕಾರ

ಸುಬ್ರಹ್ಮಣ್ಯ ಜನವರಿ 26 :ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ರಥಸಪ್ತಮಿ ಪ್ರಯುಕ್ತ ಭಾನುವಾರ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಂಜಾನೆ 4:30ಕ್ಕೆ ವೆಂಕಟೇಶ ತಂಡದವರೊಂದಿಗೆ   ಆರಂಭವಾದ ಭಜನೆ  ಕಾರ್ಯಕ್ರಮ ಮೂರು ಹಂತಗಳಲ್ಲಿ ನಡೆದು 108 ಸೂರ್ಯ ನಮಸ್ಕಾರ ಬೆಳಿಗ್ಗೆ 7:15 ಗಂಟೆಗೆ ಸಂಪನ್ನಗೊಂಡಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ  ಶ್ರೀ ಬಸವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಗಣೇಶ್ ದೀಕ್ಷಿತ್ ಹಾಗೂ ಆಡಳಿತ ಮಂಡಳಿ ಅಧ್ಯಕ್ಷರಾದ ಗಿರಿಧರ್ ಸ್ಕಂದ, ಪ್ರಭಾಕರ್ ಪಡ್ರೆ ಸಂಚಾಲಕರು ಕುಕ್ಕೆ ಸುಬ್ರಹ್ಮಣ್ಯ ಪತಂಜಲಿ ಯೋಗ ಶಿಕ್ಷಣ ಸಮಿತಿ, ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.

ರಥ ಸಪ್ತಮಿಯಂದು ನಡೆದ ಸೂರ್ಯ ನಮಸ್ಕಾರದ ಬೌಧಿಕ್‌ಅನ್ನು ಯೋಗ ಬಂಧು  ನಿವೃತ ವಾಯು ಸೇನೆ ಅಧಿಕಾರಿ ಸುಬ್ರಹ್ಮಣ್ಯ  ಅವರು ನಡೆಸಿ ಕೊಟ್ಟರು.

ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ, ಗಣಪತಿ ನಮಸ್ಕಾರವನ್ನು ಶಿಕ್ಷಕರಾದ ಜಯಶ್ರೀ ಯವರು, ಸೂರ್ಯ ನಮಸ್ಕಾರವನ್ನು ಮೂರು  ಹಂತಗಳಲ್ಲಿ ಕ್ರಮವಾಗಿ ಯೋಗ ಬಂಧುಗಳಾದ ಪ್ರಭಾಕರ ಪಡ್ರೆ,ಬಾಲಕೃಷ್ಣ, ಜಯಲಕ್ಷ್ಮಿ ಹಾಗೂ ಯೋಗ ಬಂಧುಗಳು ನಡೆಸಿಕೊಟ್ಟರು.

ಅಮೃತ ಆಸನವನ್ನು ಆಶ್ವೀಜವರು ನಡೆಸಿಕೊಟ್ಟರು. ಸುಮಾರು 30 ಜನ ಯೋಗ ಬಂಧುಗಳು ಹಾಜರಿದ್ದರು.

ಅಗ್ನಿಹೋತ್ರ ಮಾಡಿ, ಅನ್ನಪೂರ್ಣೇಶ್ವರಿ ಮಂತ್ರದೊಂದಿಗೆ ಎಲ್ಲರಿಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು.

ಮೋನಪ್ಪ  ಕಾರ್ಯಕ್ರಮ ನಿರೂಪಣೆ ಮಾಡಿ ಕಾರ್ತಿಕ್ ವಂದನಾರ್ಪಣೆ ಮಾಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading