- Saturday
- March 7th, 2026
ಇಂದು(ಜ.26) ಕೊಲ್ಲಮೊಗ್ರು ಗ್ರಾಮದ ಗಾಳಿಗನಮಜಲು-ಚಾಳೆಪ್ಪಾಡಿಯಲ್ಲಿ “ಶ್ರೀ ಅಗ್ನಿ ಗುಳಿಗ ರಾಜನ ನೇಮೋತ್ಸವ”ವು ನಡೆಯಲಿದ್ದು, ಸಂಜೆ 6:00 ಗಂಟೆಗೆ ಮಿತ್ತೊಡಿ ದೈವಸ್ಥಾನದಿಂದ ದೀವಟಿಗೆ ಮೂಲಕ ಭಂಡಾರ ತರುವುದು, ಸಂಜೆ 7:00 ಗಂಟೆಗೆ ಮೇಲೆರಿಗೆ ಅಗ್ನಿ ಸ್ಪರ್ಶ, ರಾತ್ರಿ 8:30ಕ್ಕೆ ಅನ್ನಸಂತರ್ಪಣೆ ಹಾಗೂ ರಾತ್ರಿ 10:00 ಗಂಟೆಯಿಂದ ಶ್ರೀ ದೈವದ ನೇಮೋತ್ಸವ ನಡೆದು ನಂತರ ಪ್ರಸಾದ ವಿತರಣೆ ನಡೆಯಲಿದೆ.
ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆ ಮೆತ್ತಡ್ಕ ರಸ್ತೆಯನ್ನು ರಸ್ತೆಯ ಪಲಾನುಭವಿಗಳಾದ ಕೃಷಿಕ ಮೆತ್ತಡ್ಕ ನರಸಿಂಹ ಗೌಡರು ದೀಪ ಬೆಳಗಿಸಿ ಉದ್ಘಾಟಿಸಿದರು. ಪಾರೆಪ್ಪಾಡಿ ಬೆಳ್ಯಪ್ಪ ಗೌಡರು ತೆಂಗಿನ ಕಾಯಿ ಒಡೆದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸದಸ್ಯರಾದ ದುರ್ಗಾದಾಸ್ ಮೆತ್ತಡ್ಕ, ರಾಜೇಶ್ವರಿ ಮಾವಿನಕಟ್ಟೆ, ಶರತ್ ಮೆತ್ತಡ್ಕ, ಅಬ್ದುಲ್ಲ ಮೆತ್ತಡ್ಕ,ಯಶವಂತ ಮೆತ್ತಡ್ಕ,ಅಶ್ವತ್ ಗೌಡ...
ಕನಕಮಜಲು : ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ.) ಕನಕಮಜಲು ಇದರ ಆಶ್ರಯದಲ್ಲಿ ಜ.22 ಮತ್ತು 23 ರಂದು ಕನಕಮಜಲು ಪೇಟೆಯಿಂದ ಶ್ರೀರಾಮ್ ಪೇಟೆ ಕನಕಮಜಲಿನವರೆಗೆ ಸ್ವಚ್ಛತಾ ಕಾರ್ಯಕ್ರಮ, ಆತ್ಮಾರಾಮ ಭಜನಾ ಮಂದಿರದ ಬಳಿಯಲ್ಲಿ ರಸ್ತೆಯ ಪಕ್ಕ ಮಣ್ಣು ಹಾಕಿ ಶ್ರಮದಾನ ನಡೆಸಲಾಯಿತು.ಈ ಸಂದರ್ಭದಲ್ಲಿ ಕನಕಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಧರ್ ಕುತ್ಯಾಳ, ಸದಸ್ಯ ಜಗನ್ನಾಥ...
ಚಿಗುರು ಗೆಳೆಯರ ಬಳಗ(ರಿ.) ಪಂಬೆತ್ತಾಡಿ ಇದರ ಆಶ್ರಯದಲ್ಲಿ ಮೂರನೇ ವರ್ಷದ ಚಿಗುರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಜ.25 ರಂದು ಪಂಬೆತ್ತಾಡಿ ಶಾಲಾ ಆಟದ ಮೈದಾನದಲ್ಲಿ ಜರುಗಿತು. ಇದರ ಅಧ್ಯಕ್ಷತೆಯನ್ನು ಚಿಗುರು ಗೆಳೆಯರ ಬಳಗದ ಅಧ್ಯಕ್ಷರಾದ ಅಶ್ವತ್ ಬಾಬ್ಲುಬೆಟ್ಟು ವಹಿಸಿದ್ದರು. ಉದ್ಘಾಟನೆಯನ್ನು ಕಲ್ಮಡ್ಕ ಗ್ರಾ.ಪಂ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ನೆರೆವೇರಿಸಿದರು.ಗೌರವ ಉಪಸ್ಥಿತಿಯಲ್ಲಿ...
ಉತ್ತರ ಕನ್ನಡದ ದಾಂಡೇಲಿಯಲ್ಲಿ ನಡೆದ ಸಾಯಿ ಸೂಪರ್ ಸಿಂಗರ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಸುಳ್ಯದ ಅಶ್ವಿಜ್ ಆತ್ರೇಯ
ದಾಂಡೇಲಿಯ ಪ್ರತಿಷ್ಠಿತ ಸಂಗೀತ ಸಂಸ್ಥೆಯಾದ ಸಾಯಿ ಮೆಲೋಡೀಸ್ ಇದರ 10ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಗರಸಭೆ ಮೈದಾನದಲ್ಲಿ ನಡೆದ ಸೂಪರ್ ಸಿಂಗರ್ ಸೀಸನ್ ವನ್ ಸ್ಪರ್ಧೆಯಲ್ಲಿ ಸುಳ್ಯದ ಅಶ್ವಿಜ್ ಆತ್ರೇಯ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.ನಿರ್ಣಾಯಕರಾಗಿ ಹುಬ್ಬಳ್ಳಿಯ ಆನಂದ ಗುರುಮಠ ಹಾಗೂ ಹಳಿಯಾಳದ ಮಹಾನಂದ ಗೋಸಾವಿ ಉಪಸ್ಥಿತರಿದ್ದರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್...
