Ad Widget

ಹರಿಹರ ಪಳ್ಳತ್ತಡ್ಕ : ಜ.31 ಹಾಗೂ ಫೆ.01 ರಂದು ಬಾಳುಗೋಡಿನಲ್ಲಿ “ದಿ| ದಿವಾಕರ ಮುಂಡಾಜೆ ಅವರ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಕೂಟ”

“ದಿ| ದಿವಾಕರ ಮುಂಡಾಜೆ ಅವರ ಸ್ಮರಣಾರ್ಥ” ಜ.31 ಹಾಗೂ ಫೆ.01 ರಂದು ಹರಿಹರ ಪಳ್ಳತ್ತಡ್ಕ ಗ್ರಾಮದ ಬಾಳುಗೋಡು ಬೆಟ್ಟುಮಕ್ಕಿ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ 11 ಜನರ 12 ತಂಡಗಳ ಸೂರ್ಯ ಬೆಳಕಿನ ಲೀಗ್ ಮಾದರಿಯ “ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಕೂಟ” ನಡೆಯಲಿದ್ದು, ಪ್ರಥಮ ಬಹುಮಾನ 50 ಸಾವಿರ ರೂಪಾಯಿ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 30 ಸಾವಿರ ರೂಪಾಯಿ ಮತ್ತು ಟ್ರೋಫಿ, ತೃತೀಯ ಬಹುಮಾನ 15 ಸಾವಿರ ರೂಪಾಯಿ ಮತ್ತು ಟ್ರೋಫಿ ಹಾಗೂ ಚತುರ್ಥ ಬಹುಮಾನ 10 ಸಾವಿರ ರೂಪಾಯಿ ಮತ್ತು ಟ್ರೋಫಿ ದೊರೆಯಲಿದ್ದು, ಚಾಂಪಿಯನ್ಸ್ ತಂಡದ ಮಾಲೀಕರು ಚಿನ್ನದ ನಾಣ್ಯ ಹಾಗೂ ರನ್ನರ್ಸ್ ತಂಡದ ಮಾಲೀಕರು ಬೆಳ್ಳಿ ನಾಣ್ಯವನ್ನು ಪಡೆಯುತ್ತಾರೆ ಎಂದು ಆಯೋಜಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದು, ಪಂದ್ಯಕೂಟದ ಪ್ರವೇಶ ಶುಲ್ಕ 5 ಸಾವಿರ ರೂಪಾಯಿ ಹಾಗೂ ಆಟಗಾರರ ಶುಲ್ಕ 300 ರೂಪಾಯಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಂದ್ಯಕೂಟದ ನಿಯಮಗಳಿಗೆ ಹಾಗೂ ಪಂದ್ಯಕೂಟಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳಿಗಾಗಿ 9113639732, 9353563515 ಸಂಪರ್ಕಿಸಬಹುದಾಗಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading