Ad Widget

ಜ.24 ರಿಂದ 26ರವರೆಗೆ ಜಾಲ್ಸೂರು ಸಮೀಪದ ಮಾಪಳಡ್ಕ ಮಖಾಂ ಉರೂಸ್

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿಗೆ ಸಮೀಪ ಕಾಸರಗೋಡು ರಸ್ತೆ ಕಿನಾರೆಯ ಮಾಪಳಡ್ಕ ಮಖಾಂ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾತ್ಮರ ಹೆಸರಿನಲ್ಲಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಜ 24, 25 ಹಾಗೂ 26ರಂದು ಮಗ್ರಿಬ್ ನಮಾಝಿನ ಬಳಿಕ ಮಾಪಳಡ್ಕ ಮಖಾಂ ಶರೀಫ್ ವಠಾರದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.

ಜ 24ರಂದು ಬಹು ಅಸ್ಸಯ್ಯದ್ ಪೂಕುಂಞ ತಂಙಲ್ ದು:ಆ ಮತ್ತು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.ಖಿಲ್ರ್ ಮಸೀದಿ ಅಡ್ಕದ ಸದರ್ ಮುಅಲ್ಲಿಂ ಬಹು ನೌಶಾದ್ ಅಝ್ಹರಿ ಸ್ವಾಗತವನ್ನು ನೆರವೇರಿಸಲಿದ್ದಾರೆ.ಬದ್ರಿಯಾ ಜಮಾಅತ್ ಕಮಿಟಿ ಇರುವಂಬಲ್ಲ
ದರ್ಗಾ ಶರೀಫ್ ಮಾಪಳಡ್ಕದ ಗೌರವಾಧ್ಯಕ್ಷರಾದ ಜ ಎಸ್ ಎಸ್.ಇಬ್ರಾಹೀಂ ಸಂಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.ಬಹು ಮುಹಮ್ಮದ್ ಇರ್ಷಾದ್ ಅಝ್ಹರಿ
ಮಲಪ್ಪುರಂ ಮುಖ್ಯ ಪ್ರಭಾಷಣವನ್ನು ಮಾಡಲಿದ್ದಾರೆ.ವೇದಿಕೆಯಲ್ಲಿ ಬಿಲಾಲ್ ಮಸೀದಿ ಮೈತಡ್ಕದ ಸದರ್ ಮುಅಲ್ಲಿಂ ಬಹು ಜಿ.ಎಸ್ ಹಸೈನಾರ್ ಬಾಹಸನಿ,ಎಂ.ಐ.ಎ ಇರುವಂಬಳ್ಳದ ಅಧ್ಯಕ್ಷರಾದ ಕಯಬು ಅಡ್ಕ ಉಪಸ್ಥಿತರಿರಲಿದ್ದಾರೆ.

ಜ 25ರಂದು ದ್ಸಿಕ್ರ್ ನೇರ್ಚೆ ನಡೆಯಲಿದ್ದು, ಬಹು
ಅಸ್ಸಯ್ಯದ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಙಲ್ ಅಲ್ ಬುಖಾರಿ ದುಗ್ಗಲಡ್ಕ ದು:ಆ ಮತ್ತು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.ಬದ್ರಿಯಾ ಜುಮುಅ: ಮಸೀದಿ ಇರುವಂಬಳ್ಳದ ಖತೀಬರಾದ ಬಹು ಅಶ್ರಫ್ ನಈಮಿ ಸ್ವಾಗತ ನೆರವೇರಿಸಲಿದ್ದಾರೆ.ಇರುವಂಬಳ್ಳ ಬದ್ರಿಯಾ ಜುಮುಅ: ಮಸೀದಿ ಕೋಶಾಧಿಕಾರಿಯಾದ ಜ ಹಸೈನಾರ್ ಧರ್ಮತಣ್ಣಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಬಹು ಅಬೂಬಖರ್ ಸ್ವಿದ್ದೀಖ್ ಜಲಾಲಿ
ಕಕ್ಕಿಂಜೆ ಮುಖ್ಯ ಪ್ರಭಾಷಣವನ್ನು ಮಾಡಲಿದ್ದಾರೆ.ವೇದಿಕೆಯಲ್ಲಿ ಇರುವಂಬಳ್ಳದ ಬದ್ರಿಯಾ ಜುಮುಅ: ಮಸೀದಿಯ ಮುಅಝ್ಝಿನರಾದ ಬಹು ಅಬ್ದುಲ್ ಖಾದರ್ ಮದನಿ,ಮಾಪಳಡ್ಕ ದರ್ಗಾ ಶರೀಫಿನ ಗೌರವ ಸಲಹೆಗಾರರಾದ
ಜ ಎಸ್.ಅಬ್ದುರ್ರಹ್ಮಾನ್ ಸಂಕೇಶ್,ಖಿಲ್ರ್ ಮಸೀದಿ ಅಡ್ಕದ
ಮುಅಲ್ಲಿಂ ಬಹು ಜಿ.ಎಸ್.ಮುಹಮ್ಮದ್ ಮದನಿ ಉಪಸ್ಥಿತರಿರಲಿದ್ದಾರೆ.

ಜ 26 ರಂದು ಸಮಾರೋಪ ಸಮಾರಂಭ ನಡೆಯಲಿದ್ದು,ಬಹು ಸಯ್ಯಿದ್ ಅಬ್ದುರ್ರಹ್ಮಾನ್ ಮಶ್ಹೂದ್ ಅಲ್ ಅಝ್ಹರಿ ಕೂರತ್ ದು:ಆ ಮತ್ತು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.ದರ್ಗಾ ಶರೀಫ್ ಮಾಪಳಡ್ಕದ ಮುದರ್ರಿಸ್ ಬಹು ಹಾಫಿಲ್ ಅಬ್ದುಲ್ ಸಲಾಂ ನಿಝಾಮಿ ಸ್ವಾಗತವನ್ನು ನೆರವೇರಿಸಲಿದ್ದಾರೆ.ಇರುವಂಬಳ್ಳ ಬದ್ರಿಯಾ ಜಮಾಅತ್ ಕಮಿಟಿ,ದರ್ಗಾ ಶರೀಫ್ ಮಾಪಳಡ್ಕ ಇಲ್ಲಿನ ಅಧ್ಯಕ್ಷರಾದ ಬಹು ಎ.ಬಿ.ಅಶ್ರಫ್ ಸಅದಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಬಹು ರಾಶಿದ್ ಬುಖಾರಿ ಕುಟ್ಯಾಡಿ ಮುಖ್ಯ ಪ್ರಭಾಷಣವನ್ನು ಮಾಡಲಿದ್ದಾರೆ.ವೇದಿಕೆಯಲ್ಲಿ ಇರುವಂಬಳ್ಳ ಬದ್ರಿಯಾ ಜಮಾಅತ್ ಕಮಿಟಿ ಹಾಗೂ ದರ್ಗಾ ಶರೀಫ್ ಮಾಪಳಡ್ಕದ ಪ್ರಧಾನ ಕಾರ್ಯದರ್ಶಿಯಾದ ಜ ಟಿ.ಹೆಚ್.ಮುಹಮ್ಮದ್ ಕುಂಞ‌
ಹಾಜಿ ತುಪ್ಪಕಲ್,ಜ ಅನ್ವರ್ ಪಂಜಿಕಲ್ಲು ಉಪಸ್ಥಿತರಿರಲಿದ್ದಾರೆ.ಇನ್ನಿತರ ಉಲಮಾ,ಉಮರಾ,ಸಾದಾತುಗಳು,ಸಾಮಾಜಿಕ,ರಾಜಕೀಯ ಮುಂದಾಳುಗಳು ಭಾಗವಹಿಸಲಿದ್ದಾರೆ.ಉರೂಸಿನ ಅಂಗವಾಗಿ ಧ್ವಜಾರೋಹಣ,ಪರಿಸರ ಸ್ವಚ್ಛತೆ,ಮತ ಪ್ರಭಾಷಣ,ಅನ್ನದಾನ,ದ್ಸಿಕ್ರ್ ದು:ಆ ಸಂಗಮ,ಮೌಲೀದ್ ಪಾರಾಯಣ,ತಬರ್ರುಖ್ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading