Ad Widget

ಸುಳ್ಯದಿಂದ ಬಾಳುಗೋಡಿಗೆ ನೂತನ ಬಸ್ಸು ಸಂಚಾರ ಪ್ರಾರಂಭ ; ಬಾಳುಗೋಡು ಗ್ರಾಮ ಕಾಂಗ್ರೆಸ್ ವತಿಯಿಂದ ಸ್ವಾಗತ

ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮಕ್ಕೆ ಪ್ರಪ್ರಥಮ ಬಾರಿಗೆ ಸುಳ್ಯ ಕೇಂದ್ರ ಸ್ಥಾನದಿಂದ ಕೆ.ಎಸ್.ಆರ್.ಟಿ.ಸಿ ಬಸ್ಸು ಸೌಲಭ್ಯ ಪ್ರಾರಂಭ ಗೊಂಡಿರುವ ಹಿನ್ನೆಲೆಯಲ್ಲಿ
ಜ.21 ರಂದು ಬಾಳುಗೋಡು  ಗ್ರಾಮ ಕಾಂಗ್ರೆಸ್ ಸಮಿತಿ ಮತ್ತು ಗ್ರಾಮಸ್ಥರ ವತಿಯಿಂದ ಬೆಟ್ಟುಮಕ್ಕಿ ಬಸ್ಸು ತಿರುಗುತಾಣವಾದ ಬೆಟ್ಟಮಕ್ಕಿ ಕಾಲೊನಿಯಲ್ಲಿ ಗ್ರಾಮ ಸಮಿತಿ & ಗ್ರಾಮಸ್ಥರು ಸೇರಿ ನೂತನ ಬಸ್ಸು ಸಂಚಾರ ವ್ಯವಸ್ಥೆಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಂಡರು.
ಗ್ರಾಮದ ಹಿರಿಯರಾದ ಜಯರಾಮ ಗೌಡ ಆಲ್ಕಬೆ ಪ್ರಾಸ್ತಾವಿಕವಾಗಿ ಮಾತನಾಡಿ “ಈ ಭಾಗದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಅತಿ ಪ್ರಯೋಜನಕಾರಿ ಯೋಜನೆ ಎಂದರಲ್ಲದೆ ಗ್ರಾಮ ಸಮಿತಿ ಅಧ್ಯಕ್ಷರಾದ ರವಿಕುಮಾರ್ ಕಿರಿಭಾಗ ರವರು ಈ ನಿಟ್ಟಿನಲಿ ಕಳೆದ ಆರೇಳು ತಿಂಗಳ ಹಿಂದೆಯೇ ಗ್ಯಾರಂಟಿ ಯೋಜನೆ ಸಮಿತಿಗೆ, ಕೆ.ಎಸ್ ಆರ್.ಟಿ.ಸಿ ಅಧಿಕಾರಿಗಳಿಗೆ ಸಾರಿಗೆ ಸಚಿವರ ಮಟ್ಟಕ್ಕೂ ಯೋಜನೆಯ ಜಾರಿಗಾಗಿ ಪ್ರಯತ್ನ ಪಟ್ಟಿರುವುದನ್ನು” ನೆನಪಿಸಿದರು.
ನೂತನ ಬಸ್ಸು ಸಂಚಾರಕ್ಕೆ ಶಿಶಿರ್ ಕಟ್ಟೆಮನೆ ಇವರು ಬಸ್ಸಿನ ನೂತನ ಸಂಚಾರಕ್ಕೆ ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸುವ ಮುಖೇನ ಶುಭಾಶಯ ಕೋರಿದರು.

ಮುಖ್ಯ ಅತಿಥಿಗಳಾಗಿ  ಸರಕಾರದ ಗ್ಯಾರಂಟಿ ಸಮಿತಿ ಸದಸ್ಯರಾದ
ಮಣಿಕಂಠ ಕೊಳಗೆ ಮತ್ತು ವಿಜೇಶ್ ಹಿರಿಯಡ್ಕ ಕಾರ್ಯಕ್ರಮ ಚಾಲನೆಯಲ್ಲಿ ಭಾಗವಹಿಸಿದರು.
ಗ್ಯಾರಂಟಿ ಯೋಜನೆ ಸದಸ್ಯ ವಿಜೇಶ್ ಹಿರಿಯಡ್ಕ
ಮಾತನಾಡಿ “ಇದು ಸರಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮ
ವಾಗಿದ್ದು ಈ ಯೋಜನೆ ಗೊಲ್ಡನ್ ಆಪ್ ಬುಕ್ ನಲ್ಲಿ ದಾಖಲೆಯಾಗಿದಲ್ಲದೇ
ಈ ಭಾಗದಲ್ಲಿ ಬಸ್ಸಿನ ಬೇಡಿಕೆ ಕಳೆದ ಹತ್ತು ತಿಂಗಳ ಹಿಂದೆಯೆ ಗ್ರಾಮ ಸಮಿತಿ ಅಧ್ಯಕ್ಷರು ಸಲ್ಲಿಸಿದ್ದರು ಸಚಿವರ ಗಮನಕ್ಕೂ ತರುವಲ್ಲಿ ನಮ್ಮ ಗ್ಯಾರಂಟಿ ಸಮಿತಿ ಕಡೆಯಿಂದ ಮಾಡಿದ್ದೆವು. ಜೊತೆಗೆ ಈ ಪ್ರಸ್ತಾವನೆ ಬಗ್ಗೆ ಸಂಬಂಧ ಪಟ್ಟ ಎಲ್ಲಾ ಇಲಾಖೆಗಳಿಗೂ ಆದಾಗಲೆ ಮನವಿ ಜೊತೆ ಬೇಡಿಕೆಯ ಪಟ್ಟು ಹಿಡಿಯಲಾಗಿತ್ತು.
ಯಾವುದೇ ಯೋಜನೆ ಜಾರಿ ಕೇವಲ ಮನವಿ ನೀಡಿದ ಮರುದಿನ ಜಾರಿಯಾಗಲ್ಲ
ಅದಕ್ಕೆ ಅದರದ್ದೇ ಆದ ಪ್ರೊಸಿಜರ್ ಪ್ರಕಾರ  ಜಾರಿಯಾಗುತ್ತದೆ. ಇವತ್ತಿಂದ ನಾಳೆಗೆ ಮನವಿ ನೀಡಿ ಯೋಜನೆ ಜಾರಿಯಾಗುವುದಿದ್ದಲ್ಲಿ ಇವತ್ತಿಗೂ ಅದೆಷ್ಟೊ ಮೂಲಭೂತ ವ್ಯವಸ್ಥೆಯ ಬೇಡಿಕೆಯ ಮನವಿಗಳು ಬಾಕಿಯಾಗಿವೆ” ಎಂದರು.
ಈ ನಿಟ್ಟಿನಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬಸ್ಸು ಸಂಚಾರಕ್ಕೆ ಪ್ರಯತ್ನಿಸಿದ ಎಲ್ಲರಿಗೂ ಸಹ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಈ ಭಾಗದಲ್ಲಿ
ಬಸ್ಸಿನ ಚಾಲಕ ನಿರ್ವಾಹಕರಿಗೆ ತಂಗುದಾಣದಲ್ಲಿ ಶೌಚಾಲಯದ ಕೊರತೆ ಬಗ್ಗೆ ಗ್ರಾಮಸ್ಥರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಸುರೇಂದ್ರ ಕಾಯರ, ಅನಂತರಾಮ ಆಲ್ಕಬೆ, ಸುಂದರ ಪುಣೇರಿ
ಸುಂದರ ಬೆಟ್ಟುಮಕ್ಕಿ,
ವಸಂತಕುಮಾರ್ ಶಿವಾಲ,
ಗೋಪಾಲಕೃಷ್ಣ ಪೊಯ್ಯಗದ್ದೆ,
ಕರುಣಾಕರ್ ಪೊಯ್ಯಗದ್ದೆ ಅಲ್ಲದೆ ಆ ಭಾಗದ ಮಾತೆಯರು ಹಿರಿಯರು ಭಾಗವಹಿಸಿದರು.
ಕೊನೆಯಲ್ಲಿ ಸಿಹಿತಿಂಡಿವಿತರಿಸಲಾಯಿತು.
ತೇಜಕುಮಾರ್ ತಳೂರು ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading