Ad Widget

ಹರಿಹರ ಪಳ್ಳತ್ತಡ್ಕ : ಜ.31ರಂದು ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

ಹರಿಹರ ಪಳ್ಳತ್ತಡ್ಕ ಗ್ರಾಮದ ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ಜ.31ನೇ ಶನಿವಾರದಂದು ಶ್ರೀ ಗುಳಿಗರಾಜ ದೈವದ ವಾರ್ಷಿಕ ನೇಮೋತ್ಸವವು ನಡೆಯಲಿದ್ದು, ಬೆಳಿಗ್ಗೆ 7:00 ಗಂಟೆಗೆ ಗಣಹೋಮ, ಬೆಳಿಗ್ಗೆ 9:00 ಗಂಟೆಗೆ ಭಂಡಾರ ಹೊರಡುವುದು, ಬೆಳಿಗ್ಗೆ 9:30ಕ್ಕೆ ಶಿವಪೂಜೆ, ಬೆಳಿಗ್ಗೆ 10:00 ಗಂಟೆಗೆ ಬ್ರಹ್ಮ ರಾಕ್ಷಸ ಪೂಜೆ ಹಾಗೂ ಕಲಶಪೂಜೆ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ ಹಾಗೂ ಮದ್ಯಾಹ್ನ 1:00 ಗಂಟೆಗೆ ಅನ್ನಸಂತರ್ಪಣೆ ನಡೆದು ನಂತರ ಸಂಜೆ 6:00 ಗಂಟೆಗೆ ದೀಪಾರಾಧನೆ, ರಾತ್ರಿ 7:00 ಗಂಟೆಯಿಂದ ಯಕ್ಷಮಣಿ ಗಿರೀಶ್ ಗಡಿಕಲ್ಲು ಇವರ ನಿರ್ದೇಶನ ಮತ್ತು ಸಾರಥ್ಯದಲ್ಲಿ ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರ ಕಲಾಕ್ಷೇತ್ರ ಪಂಜ ಇದರ ವಿದ್ಯಾರ್ಥಿಗಳಿಂದ “ರಘುವಂಶದೀಪ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ನಂತರ ರಾತ್ರಿ 8:00 ಗಂಟೆಗೆ ಮಹಾತಂಬಿಲ ಹಾಗೂ ಅನ್ನಸಂತರ್ಪಣೆ ನಡೆದು ರಾತ್ರಿ 12:00 ಗಂಟೆಯಿಂದ ನೇಮೋತ್ಸವ ಪ್ರಾರಂಭಗೊಳ್ಳಲಿದ್ದು, ಮರುದಿವಸ ಫೆ.01ರಂದು ಬೆಳಿಗ್ಗೆ ಸಂಪ್ರೋಕ್ಷಣೆ ನಡೆಯುವುದರೊಂದಿಗೆ ನೇಮೋತ್ಸವವು ಸಂಪನ್ನಗೊಳ್ಳಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading