Ad Widget

“ನಾರಾಯಣ ಗುರುಗಳು ಸರ್ವ ಸಮಾಜದ ಗುರು” : ಕುಸುಮಾಕರ ಕುಂಪಲ ; ಸುಳ್ಯ ಯುವವಾಹಿನಿ ವತಿಯಿಂದ “ಗುರುಸ್ಫೂರ್ತಿ” ಕಾರ್ಯಕ್ರಮ

“ಮನುಷ್ಯರೆಲ್ಲರೂ ಒಂದೇ ಜಾತಿ ಎಂದು ತಿಳಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಸರ್ವ ಜಾತಿಯವರಿಗೂ ತಿಳಿಸುವ ಕಾರ್ಯ ಮಾಡಬೇಕಿದೆ. ನಾರಾಯಣ ಗುರು ತತ್ವಗಳನ್ನು ಪ್ರತಿ ದಿನ ಜೀವನದಲ್ಲಿ ಅಳವಡಿಸಿಕೊಂಡು ಸಂಘಟಿತರಾದಾಗ ಯಶಸ್ಸು ಸಾಧ್ಯ” ಎಂದು ಯುವವಾಹಿನಿ ಕೊಲ್ಯ ಘಟಕದ ಪೂರ್ವಾಧ್ಯಕ್ಷ ಕುಸುಮಾಕರ ಕುಂಪಲ ಹೇಳಿದರು.
ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಸುಳ್ಯ ಘಟಕದ ಸ್ಥಾಪಕಾಧ್ಯಕ್ಷ ಶಿವಪ್ರಸಾದ್ ಕೆ.ವಿ ಅವರ ಮನೆಯಲ್ಲಿ ನಡೆದ ಗುರುಸ್ಪೂರ್ತಿ ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿದರು.

ಸುಳ್ಯ ಘಟಕದ ಅಧ್ಯಕ್ಷ ಮಹೇಶ್ ಕಲ್ಪಣೆ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕಡಬ, ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಲೋಹಿತ್ ರೆಂಜಾಳ, ತಾಲೂಕು ಘಟಕದ ನಾರಾಯಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ರಮೇಶ್ ಜಯನಗರ, ತಾಲೂಕು ಘಟಕದ ಸ್ಥಾಪಕಾಧ್ಯಕ್ಷ ಶಿವಪ್ರಸಾದ್ ಕೆ.ವಿ ಉಪಸ್ಥಿತರಿದ್ದರು.

ಉಪಾಧ್ಯಕ್ಷೆ ನೂತನ ಪ್ರವೀಣ್ ನೆಟ್ಟಾರ್ ವಂದಿಸಿದರು. ಚಂದ್ರಶೇಖರ ಹೈದಂಗೂರು ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಮೊದಲು ಭಜನಾ ಕಾರ್ಯಕ್ರಮ ನಡೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading