Ad Widget

ಕುಕ್ಕೆ ಸುಬ್ರಹ್ಮಣ್ಯ : ಕುಮಾರಧಾರ ಸೇತುವೆ ತಡೆಬೇಲಿ ಲೋಕಾರ್ಪಣೆ ; “ಪರಿಸರ ಹಾಗೂ ಸ್ವಚ್ಛತೆಗೆ ನೀಡುವ ದೊಡ್ಡ ಸೇವೆ ಇದಾಗಿದೆ” : ಲ| ಕುಡುಪಿ ಅರವಿಂದ ಶೆಣೈ

ಸುಬ್ರಹ್ಮಣ್ಯ ಜನವರಿ 19 : ಲಯನ್ಸ್ ಜಿಲ್ಲೆ 317 ಡಿ ಇದರ ಪ್ರಾಂತೀಯ 8ರ ವತಿಯಿಂದ ವಿವಿದ ದಾನಿಗಳು ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ ಕುಮಾರಧಾರ ಸೇತುವೆ ಮೇಲೆ ಎರಡು ಬದಿಗಳಲ್ಲಿ ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಿಸಲಾದ ತಡೆ ಬೇಲಿಯನ್ನು ರವಿವಾರ ಲಯನ್ಸ್ ಜಿಲ್ಲಾ 317 ಡಿ ಯ  ಗವರ್ನರ್ ಕುಡುಪಿ ಅರವಿಂದ ಶೆಣೈ ಉದ್ಘಾಟಿಸಿದರು.
ಅವರು ಮಾತನಾಡುತ್ತಾ “ಪರಿಸರಕ್ಕೆ ಹಾಗೂ ಸಮಾಜಕ್ಕೆ ಅಲ್ಲದೆ ಸ್ವಚ್ಛತೆಗೆ ನೀಡುವಂತ ದೊಡ್ಡ ಸೇವೆ ಇದಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತಾದಿಗಳು ವರ್ಷದಲ್ಲಿ ಬಂದು ಹೋಗುತ್ತಾರೆ. ಸೇತುವೆ ಮೇಲೆ ಹೋಗುವಂತ ಭಕ್ತಾದಿಗಳಿಗೆ ಯಾವುದೇ ತ್ಯಾಜ್ಯ, ಕಸ, ಕಡ್ಡಿ, ಪ್ಲಾಸ್ಟಿಕ್ ಬಾಟಲ್, ಪ್ಲೇಟ್ ಇತ್ಯಾದಿಗಳನ್ನು ಹೊಳೆಗೆ ಎಸೆಯಂತೆ ಇಂಥ ತಡೆ ಬೇಲಿ ಅತ್ಯವಶ್ಯಕವಾಗಿದೆ. ಇಂಥ ಯೋಜನೆಯನ್ನು ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನವರ ಸಹಯೋಗದೊಂದಿಗೆ ಪ್ರಾಂತೀಯ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್ ಎಲ್ಲರ ಸಹಕಾರದೊಂದಿಗೆ ಪ್ರಾಂತೀಯ ಸಮ್ಮೇಳನದ ಸವಿನೆನಪಿಗಾಗಿ ಮಾಡಿರುವಂತಹ ದೊಡ್ಡ ಸೇವೆ. ಅಲ್ಲದೆ ಇದು ಲಯನ್ಸ್ ಡಿಸ್ಟ್ರಿಕ್ಟ್ ಪಬ್ಲಿಕ್ ಇಮೇಜ್ ಅಲ್ಲಿ ಕೂಡ ಎಲ್ಲರೂ ಗಮನಿಸಬೇಕಾದಂತ ಮತ್ತು ದಾಖಲಿಸುವಂತಹ ಸೇವೆಯಾಗಿದೆ. ಇದರಿಂದ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್, ಪ್ರಾಂತೀಯ ಅಧ್ಯಕ್ಷರ ಹಾಗೂ ನಮ್ಮ ಹೆಸರು ಶಾಶ್ವತವಾಗಿ ಉಳಿಯುವಂತೆ ಆಗಿದೆ”  ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಲಯನ್ಸ್  ಕ್ಲಬ್ ನ ನಾಯಕರುಗಳಾದ ಜಯರಾಮ ದೇರಪ್ಪಜ್ಜನಮನೆ, ಶಶಿಧರ ಪಳಂಗಾಯ, ಡಾl ಶಿವಕುಮಾರ ಹೊಸಳಿಕೆ, ಲಯನ್ಸ್ ಅಧ್ಯಕ್ಷೆ ವಿಮಲಾ ರಂಗಯ್ಯ, ನಿತ್ಯಾನಂದ ಮುಂಡೋಡಿ, ಪ್ರೊ. ಬಾಲಚಂದ್ರ ಗೌಡ ಹಾಗೂ ವಿವಿಧ ಕ್ಲಬ್ ಗಳಾದ ಪಂಜ, ಗುತ್ತಿಗಾರು, ಕಡಬ ಹಾಗೂ ಸುಳ್ಯದ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಸಾರ್ವಜನಿಕರು ಹಾಜರಿದ್ದರು.

ಲಯನ್ಸ್ ಪ್ರಾಂತ 8ರ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್ ಎಲ್ಲರನ್ನು ಸ್ವಾಗತಿಸಿದರು.

ಜಯರಾಮ್ ದೇರಪ್ಪಜ್ಜನಮನೆ ನಿರೂಪಣೆಯೊಂದಿಗೆ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading