Ad Widget

ಸುಳ್ಯ : ರಥಬೀದಿಯಲ್ಲಿ ನೀರು ಸೋರಿಕೆ – ಸ್ಥಳೀಯಾಡಳಿತ ನಿರ್ಲಕ್ಷ್ಯ

“ಸುಳ್ಯ ನಗರ ರೋಟರಿ ಸ್ಕೂಲ್ ಮುಂಭಾಗದಲ್ಲಿ ಕಳೆದ ಹಲವು  ದಿನಗಳಿಂದ ಪೈಪಿನಿಂದ ನಿರಂತರವಾಗಿ ನೀರು ಸೋರಿಕೆಯಾಗುತ್ತಿದೆ. ಈ ಸಮಸ್ಯೆ ಬಗ್ಗೆ ಸಾರ್ವಜನಿಕರು ಗಮನ ಸೆಳೆದಿದ್ದರೂ ನಗರಾಡಳಿತದಿಂದ ಇದುವರೆಗೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ನೀರಿನ ಸೋರಿಕೆಯಿಂದ ರಸ್ತೆ ಉದ್ದಕ್ಕೂ ನೀರು ಹರಿಯುತ್ತಿದ್ದು, ನಡೆದುಕೊಂಡು ಹೋಗುವ ಸಾರ್ವಜನಿಕರಿಗೆ ಹಾಗೂ ರಿಕ್ಷಾ ಚಾಲಕರಿಗೆ ತೀವ್ರ ತೊಂದರೆ ಉಂಟಾಗಿದೆ. ಸುಳ್ಯದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲದಿರಬಹುದು, ಆದರೆ  ಅಮೂಲ್ಯ ನೀರು ವ್ಯರ್ಥವಾಗುತ್ತಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ಸ್ಥಳೀಯಾಡಳಿತ ತಕ್ಷಣವೇ ಗಂಭೀರವಾಗಿ ಪರಿಗಣಿಸಿ, ಸೋರಿಕೆಯನ್ನು ತಡೆಗಟ್ಟಬೇಕು” ಎಂದು ಸುಪ್ರೀತ್ ಮೋಂಟಡ್ಕ ಆಗ್ರಹಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading