Ad Widget

42 ಕಿಲೋಮೀಟರ್ ಫುಲ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾ ಹರೀಶ್ ಬಂಗಾರಕೋಡಿ

ವಿದ್ಯಾ ಹರೀಶ್ ಬಂಗಾರಕೋಡಿ ಅವರು ಮಂಗಳೂರಿನಲ್ಲಿ ನಡೆದ ಸಮುದ್ರ ಹಬ್ಬದ ಪ್ರಯುಕ್ತ ನಡೆದ 42 ಕಿಲೋಮೀಟರ್ ಫುಲ್ ಮ್ಯಾರಥಾನ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
5 ರಿಂದ 21 ಕಿಲೋಮೀಟರ್ ನ ಹಲವಾರು ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡ ಇವರು ಇದೀಗ ಪ್ರಪ್ರಥಮ ಬಾರಿಗೆ 42 ಕಿಲೋಮೀಟರ್ ಫುಲ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ರಂಗತ್ತಮಲೆ ಆರ್.ಕೂಸಪ್ಪ ಹಾಗೂ ಸಣ್ಣಮ್ಮ ದಂಪತಿಗಳ ಪುತ್ರಿಯಾಗಿರುವ ಇವರು ಸ್ವರ್ಣಶ್ರೀ ಶಕ್ತಿ ಸಂಘದ ಸದಸ್ಯೆ, ಶ್ರೀ ಶಕ್ತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯೆ, ಅರಂತೋಡು ತೊಡಿಕಾನ ಅಕ್ಷಯ ಗೋಂಚಲಿನ ಸದಸ್ಯೆ ಹಾಗೂ ಕೋಟೆ ಪೆರಾಜೆಯ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ ಸದಸ್ಯೆಯಾಗಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading