Ad Widget

ಸುಬ್ರಹ್ಮಣ್ಯ : ನದಿಯಲ್ಲಿ ಯುವಕರಿಬ್ಬರು ಮುಳುಗಿ ಮೃತಪಟ್ಟ ಪ್ರಕರಣ ; ರಕ್ಷಿಸಲು ಹೋದಾತನೂ ನೀರಿನಲ್ಲಿ ಮುಳುಗಿ ಸಾವು – ಕೊಲ್ಲಮೊಗ್ರು ಗ್ರಾಮದಲ್ಲಿ ನೀರವ ಮೌನ

ಸುಬ್ರಹ್ಮಣ್ಯದ ಕುಮಾರಧಾರ ನದಿಗೆ ಸ್ನಾನಕ್ಕೆ ತೆರಳಿದ್ದ ಯುವಕರಿಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು(ಜ.18) ನಡೆದಿದ್ದು, ಸುಬ್ರಹ್ಮಣ್ಯದ ಕಾಲೇಜು ಹತ್ತಿರದಲ್ಲಿ ಕಾರ್ಯಾಚರಿಸುತ್ತಿರುವ ಅನುಗ್ರಹ ಹಾರ್ಡ್ ವೇರ್ ಸಂಸ್ಥೆಯ ಮ್ಹಾಲಕರಾದ ಕೊಲ್ಲಮೊಗ್ರದ ಹರಿಪ್ರಸಾದ್ ಮಲ್ಲಾಜೆ ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದ ಕೊಲ್ಲಮೊಗ್ರದ ಸುಜಿತ್ ಗೋಳ್ಯಾಡಿ ಎಂಬುವವರು ಇಂದು ಕುಲ್ಕುಂದ ಸಮೀಪದ ಕುಮಾರಧಾರ ನದಿಗೆ ಸ್ನಾನ ಮಾಡಲೆಂದು ತೆರಳಿದ್ದು, ಈ ಸಂದರ್ಭದಲ್ಲಿ ಸುಜಿತ್ ರವರು ನೀರಿನಲ್ಲಿ ಮುಳುಗಿದ್ದು, ಆವರನ್ನು ರಕ್ಷಿಸಲು ಹರಿಪ್ರಸಾದ್ ರವರು ಮುಂದಾದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ತಿಳಿದ ತಕ್ಷಣ ಮೇಲೆತ್ತುವ ಕಾರ್ಯ ನಡೆಸಲಾಗಿದ್ದರೂ ಅದಾಗಲೇ ಅವರಿಬ್ಬರು ಪ್ರಾಣ ಕಳೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಇಬ್ಬರೂ ಕೂಡ ಅವಿವಾಹಿತರಾಗಿದ್ದರು. ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading