Ad Widget

ರಾಜ್ಯ ಮಟ್ಟದ ಯುವ ಸಂಭ್ರಮ ಅಂಗವಾಗಿ ವಾಹನ,ಆಹಾರ, ಕೃಷಿ ಹಾಗೂ ಪ್ರಾಚ್ಯ ವಸ್ತು ಮೇಳ ಉದ್ಘಾಟನೆ

ರಾಜ್ಯ ಮಟ್ಟದ ಯುವ ಸಂಭ್ರಮ ಅಂಗವಾಗಿ ವಾಹನ,ಆಹಾರ, ಕೃಷಿ ಹಾಗೂ ಪ್ರಾಚ್ಯ ವಸ್ತು ಮೇಳ ಉದ್ಘಾಟನೆ ಇಂದು ಸಂಜೆ ನಡೆಯಿತು. ವಾಹನ ಮೇಳ ಉದ್ಘಾಟನೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಎನ್ ಮನ್ಮಥ, ವಸ್ತು ಮೇಳ ಉದ್ಘಾಟನೆಯನ್ನು ಶ್ರೀ ಅನ್ನಪೂರ್ಣೇಶ್ವರೀ ಕ್ಷೇತ್ರ ಯೋಗೀಶ್ವರಿ ಸಿದ್ದ ಮಠ ಮರ್ಕಂಜ ಇದರ ದರ್ಮದರ್ಶಿ ರಾಜೇಶನಾಥ್ ಜೀ, ಕೃಷಿ ಮೇಳ ಉದ್ಘಾಟನೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಆಹಾರ ಮೇಳವನ್ನು ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಡಾ.ದೇವಿ ಪ್ರಸಾದ್ ಕಾನತ್ತೂರು ಉದ್ಘಾಟಿಸಿದರು.

. . . . . . . . .

ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಯುವ ಸಂಭ್ರಮದ ಸಂಘಟನಾ ಸಮಿತಿ ಅಧ್ಯಕ್ಷ ದಿಲೀಪ್ ಬಾಬುಬೆಟ್ಟು, ಪಂಜ ಸಹಕಾರಿ ಸಂಘದ ಅಧ್ಯಕ್ಷ
ಚಂದ್ರಶೇಖರ ಶಾಸ್ತ್ರಿ, ಪಂಜ ಗ್ರಾ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಜಳಕದಹೊಳೆ, ಕೆ.ಎಂ.ಎಫ್ ನಿರ್ದೇಶಕ ಭರತ್ ನೆಕ್ರಾಜೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಉದ್ಯಮಿಗಳಾದ ವಿಜಯಕುಮಾರ್ ಸೊರಕೆ, ಕಲ್ಮಡ್ಕ ಗ್ರಾ.ಪಂ.ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಮಂಗಳೂರು ಅರಣ್ಯ ಸಂಚಾರಿ ದಳ ಇದರ ವಲಯಾರಣ್ಯಾಧಿಕಾರಿ ಸಂತೋಷ್ ಕುಮಾರ್ ರೈ , ಲಯನ್ಸ್ ಕ್ಲಬ್ ಅಧ್ಯಕ್ಷ ಗಣೇಶ್ ಕಿನ್ನಿಕುಮೇರಿ, ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ಸೂಡಿಮುಳ್ಳು, ಸ್ವಾಗತ ಸಮಿತಿ ಸಂಚಾಲಕ ಮಾಧವ ಗೌಡ ಜಾಕೆ , ಯುವಜನ ಸಂಯುಕ್ತ ಮಂಡಳಿ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ,  ಯುವಜನ ಸಂಯುಕ್ತ ಮಂಡಳಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading