Ad Widget

ಪಂಜ: ರಾಜ್ಯಮಟ್ಟದ ಯುವ ಸಂಭ್ರಮ ಚಾಲನೆ – ಕೃಷಿ, ಆಹಾರ, ವಾಹನ ಹಾಗೂ ಪ್ರಾಚ್ಯ ವಸ್ತು ಮೇಳಕ್ಕೆ ಚಾಲನೆ – ಯುವ ಸಂಭ್ರಮದ ಮೂಲಕ ಭಾರತೀಯ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಿದೆ – ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಕಟೀಲ್


ಯುವ ಸಂಭ್ರಮದ ಮೂಲಕ ಭಾರತೀಯ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಸುಳ್ಯದ ಯುವಜನ ಸಂಯುಕ್ತ ಮಂಡಳಿ ನೇತೃತ್ವದಲ್ಲಿ ಜ.17 ರಂದು ಪಂಜದಲ್ಲಿ ನಡೆದ ರಾಜ್ಯಮಟ್ಟದ ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವಜನ ಮೇಳಗಳಿಗೆ ಇತ್ತೀಚೆಗೆ ಸರಕಾರದ ಪ್ರೋತ್ಸಾಹ ಕಡಿಮೆ ಆಗಿದೆ. ಯುವಜನ ಮೇಳಗಳು ಗ್ರಾಮೀಣ ಪ್ರತಿಭೆಗಳನ್ನು ಬೆಳೆಸಲು ಸಹಕಾರಿಯಾಗಿತ್ತು. ಪಂಜದ ಜನತೆ ಉತ್ತಮ ಕಾರ್ಯಕ್ರಮ ಮಾಡುವ ಮೂಲಕ ರಾಜ್ಯಸರ್ಕಾರದ ಕಣ್ಣು ತೆರೆಸಿದೆ. ರಾಜಕೀಯ ಮರೆತು ಸಂಘಟಿತವಾಗಿ ಪಂಜದ ಜನತೆ ಕೆಲಸ ಮಾಡಿದೆ. ದೈವರಾಧನೆ ಹಾಗೂ ಯಕ್ಷಗಾನ, ಕಂಬಳ ನಂಬಿಯಿಂದಲೇ ಉಳಿದು ಬೆಳೆದು ಬಂದಿದೆ. ನಂಬಿಕೆಯಿದ್ದಾಗ ಮಾತ್ರ ಎಲ್ಲಾ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬಹುದು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಎನ್ ಎಸ್.ಎನ್. ಮನ್ಮಥ ಮಾತನಾಡಿ ಯುವಕರು ಒಗ್ಗೂಡಿ ಕೆಲಸ ಮಾಡಿದ್ದರಿಂದ ಇಂತಹ ಒಳ್ಳೆಯ ಕಾರ್ಯಕ್ರಮ ಆಗಿದೆ. ಇದು ರಾಜ್ಯಕ್ಕೆ ಒಳ್ಳೆಯ ಸಂದೇಶ ನೀಡಿದೆ ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಈಗಿನ ಯುವ ಜನತೆಗೆ ವಸ್ತು ಪ್ರದರ್ಶನ ಮೂಲಕ ಕಲೆ ಸಾಹಿತ್ಯ ಸಂಸ್ಕೃತಿಯನ್ನು ತಿಳಿದುಕೊಳ್ಳುವ ಅವಕಾಶವಾಗಿದೆ.ಇದರಿಂದ ಕಲೆ ಸಂಸ್ಕೃತಿ ಬೆಳೆಸುವ ಕೆಲಸ ಆಗಿದೆ ಎಂದರು.
ಅನ್ನಪೂರ್ಣೇಶ್ವರೀ ಕ್ಷೇತ್ರ ಯೋಗೀಶ್ವರಿ ಸಿದ್ದ ಮಠ ಮರ್ಕಂಜ ಇದರ ದರ್ಮದರ್ಶಿ ರಾಜೇಶನಾಥ್ ಜೀ ಶುಭಹಾರೈಸಿದರು.‌ ಯುವ ಸಂಭ್ರಮದ ಸಂಘಟನಾ ಸಮಿತಿ ಅಧ್ಯಕ್ಷ ದಿಲೀಪ್ ಬಾಬುಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಡಾ.ದೇವಿ ಪ್ರಸಾದ್ ಕಾನತ್ತೂರು, ಪಂಜ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಪಂಜ ಗ್ರಾ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಜಳಕದಹೊಳೆ, ಕೆ.ಎಂ.ಎಫ್ ನಿರ್ದೇಶಕ ಭರತ್ ನೆಕ್ರಾಜೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಉದ್ಯಮಿಗಳಾದ ವಿಜಯಕುಮಾರ್ ಸೊರಕೆ, ಕಲ್ಮಡ್ಕ ಗ್ರಾ.ಪಂ.ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಮಂಗಳೂರು ಅರಣ್ಯ ಸಂಚಾರಿ ದಳ ಇದರ ವಲಯಾರಣ್ಯಾಧಿಕಾರಿ,
ಸಂತೋಷ್ ಕುಮಾರ್ ರೈ , ಲಯನ್ಸ್ ಕ್ಲಬ್ ಅಧ್ಯಕ್ಷ ಗಣೇಶ್ ಕಿನ್ನಿಕುಮೇರಿ, ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ಸೂಡಿಮುಳ್ಳು, ಯುವಜನ ಸಂಯುಕ್ತ ಮಂಡಳಿಯ ಪ್ರ.ಕಾರ್ಯದರ್ಶಿ ಮುರಳಿ ನಳಿಯಾರು, ಕೋಶಾಧಿಕಾರಿ ಲೋಹಿತ್ ಬಾಳಿಕಳ ಹಾಗೂ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಯುವಜನ ಸಂಯುಕ್ತ ಮಂಡಳಿ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸ್ವಾಗತ ಸಮಿತಿ ಸಂಚಾಲಕ ಮಾಧವ ಗೌಡ ಜಾಕೆ ಸ್ವಾಗತಿಸಿ, ಯುವ ಸಂಭ್ರಮದ ಸಂಘಟನಾ ಸಮಿತಿ ಪ್ರ.ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ ವಂದಿಸಿದರು. ತೀರ್ಥಾನಂದ ಕೊಡಂಕೇರಿ, ಸೋಮಶೇಖರ ನೇರಳ ಕಾರ್ಯಕ್ರಮ ನಿರೂಪಿಸಿದರು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading