Ad Widget

ಕೊಲ್ಲಮೊಗ್ರು : “ನ್ಯಾಯಕ್ಕಾಗಿ ಒಂದಾಗೋಣ” ಸಮಿತಿಯ ವತಿಯಿಂದ ವೈದ್ಯಾಧಿಕಾರಿಗಳಾದ ಡಾ| ಕುಲದೀಪ್.ಎಂ.ಡಿ ರವರಿಗೆ “ಅಭಿನಂದನಾ ಕಾರ್ಯಕ್ರಮ” ; “ಈ ಅಭಿನಂದನೆಯಿಂದ ನಾನು ಧನ್ಯನಾಗಿದ್ದೇನೆ” ಡಾ| ಕುಲದೀಪ್.ಎಂ.ಡಿ ; “ವೈದ್ಯರು ರೋಗಿಗಳನ್ನು ಬೆನ್ನು ತಟ್ಟಿ ಮಾತನಾಡಿಸಿದರೆ ಸಾಮಾನ್ಯ ಕಾಯಿಲೆ ವಾಸಿಯಾಗುತ್ತದೆ” : ಶಿವರಾಮ ಮಾಸ್ತರ್ ಕುಂಞೇಟಿ

ಕೊಲ್ಲಮೊಗ್ರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡುವರೆ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ| ಕುಲದೀಪ್.ಎಂ.ಡಿ ರವರು ಇಂದು(ಡಿ.17) ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ಕೊನೆಯ ಕರ್ತವ್ಯ ದಿನವನ್ನು ಪೂರೈಸುತ್ತಿದ್ದು, ಆ ಪ್ರಯುಕ್ತ “ನ್ಯಾಯಕ್ಕಾಗಿ ಒಂದಾಗೋಣ” ಸಮಿತಿಯ ಸದಸ್ಯರಿಂದ ಡಾ| ಕುಲದೀಪ್ ರವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಭಿನಂದನಾ ಸಮಾರಂಭ ನಡೆಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ| ಕುಲದೀಪ್ ರವರು “ವೈದ್ಯಕೀಯ ಕುಟುಂಬದಿಂದಲೇ ಬಂದ ನಾನು ಡಾ| ನಂದಕುಮಾರ್ ಬಾಳಿಕಳ ರವರ ಇವರ ಪ್ರೇರಣೆ ಹಾಗೂ ಮಾರ್ಗದರ್ಶನದಿಂದ ಈ ವೈದ್ಯಕೀಯ ಸೇವೆಗೆ ಬಂದಿದ್ದೇನೆ, ಹಾಗೂ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುವ ಭಾಗ್ಯ ನನಗೆ ಲಭಿಸಿದೆ. ಈ ಅಭಿನಂದನೆಯಿಂದ ನಾನು ಧನ್ಯನಾಗಿದ್ದೇನೆ, ಗ್ರಾಮಸ್ಥರ ಮೇಲಿನ ಅಭಿಮಾನ ನನಗೆ ಇನ್ನಷ್ಟು ಹೆಚ್ಚಾಗಿದೆ” ಎಂದು ಹೇಳಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯರಾದ ಶಿವರಾಮ ಮಾಸ್ತರ್ ಕುಂಞೇಟಿ ರವರು “ಸೈನಿಕರು ದೇಶ ಕಾಯುವ ಕೆಲಸ ಮಾಡಿದರೆ ವೈದ್ಯರು ರೋಗಿಗಳ ಜೀವ ಉಳಿಸುವ ಕೆಲಸ ಮಾಡುತ್ತಾರೆ. ವೈದ್ಯರು ರೋಗಿಗಳ ಬೆನ್ನು ತಟ್ಟಿ ಮಾತನಾಡಿದರೆ ಸಾಮಾನ್ಯ ಕಾಯಿಲೆ ವಾಸಿಯಾಗುತ್ತದೆ. ರೋಗಿಯ ಜೀವ ಉಳಿಸುವಲ್ಲಿ ವೈದ್ಯರ ಪಾತ್ರ ಹಿರಿದು” ಎಂದರು.
ನಂತರ ಮಾತನಾಡಿದ ಶೇಖರ್ ಅಂಬೆಕಲ್ಲು ಹಾಗೂ ಸತೀಶ್ ಟಿ.ಎನ್ ರವರು “ತುರ್ತು ಸಂದರ್ಭಗಳಲ್ಲಿ ಅತೀ ಹೆಚ್ಚು ಸೇವೆ ನೀಡಿದ ಹೆಗ್ಗಳಿಕೆ ಡಾ| ಕುಲದೀಪ್ ರವರಿಗೆ ಸಲ್ಲುತ್ತದೆ, ಹೆತ್ತವರ ಸಮ್ಮುಖದಲ್ಲಿ ಸನ್ಮಾನ ಪ್ರಶಂಸನೀಯ, ಕುಲದೀಪ್ ರವರ ಸೇವೆಯನ್ನು ಮರೆಯುವಂತಿಲ್ಲ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣೇಶ್ ಭಟ್ ಇಡ್ಯಡ್ಕ, ಗಣೇಶ್ ಭಟ್ ಪನ್ನೆ, ಡ್ಯಾನಿ ಯಳದಾಳು, ಮೇನಕಾ ಕೊಪ್ಪಡ್ಕ, ಬಾಲಸುಬ್ರಹ್ಮಣ್ಯ ಭಟ್, ಉದಯ ಶಿವಾಲ, ಹರೀಶ್ ಬಳ್ಳಡ್ಕ, ಸತೀಶ್ ದೋಲನಮನೆ, ಗಂಗಾಧರ ಮಿತ್ತೋಡಿ, ಹರಿಪ್ರಸಾದ್ ನಾಯರ್, ಸಚಿತ್ ಶಿವಾಲ, ಪ್ರಶಾಂತ್ ಚಾಳೆಪ್ಪಾಡಿ, ಸುಧಾಮಣಿ ಕುಂಞೇಟಿ ಹಾಗೂ ಗ್ರಾಮಸ್ಥರು, ಆಸ್ಪತ್ರೆಯ ಸಿಬ್ಬಂದಿವರ್ಗದವರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹರಿಪ್ರಸಾದ್ ಮಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಬಳ್ಳಡ್ಕ ಸ್ವಾಗತಿಸಿ ಉದಯ ಶಿವಾಲ ಧನ್ಯವಾದ ಸಮರ್ಪಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading