Ad Widget

ಜ.15 ರಿಂದ 17ರವರೆಗೆ ಇತಿಹಾಸ ಪ್ರಸಿದ್ಧ ಎಣ್ಮೂರು ಮಖಾಂ ಉರೂಸ್

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಐತಿಹಾಸಿಕ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಎಣ್ಮೂರು ರಹ್ಮಾನಿಯ ಕೇಂದ್ರ ಜುಮುಅ: ಮಸೀದಿಯ ವಠಾರದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ವಲಿಯತ್ತುಲ್ಲಾಹಿ ಮಶ್ಹೂರತ್ ಬೀವಿ(ರ.ಅ) ರವರ ಹೆಸರಿನಲ್ಲಿ ಮೂರು ವರುಷಗಳಿಗೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು ಜ.15ರಿಂದ 17ರವರೆಗೆ ಜರುಗಲಿರುವುದು.
ಜ.15ರಂದು ಬೆಳಿಗ್ಗೆ 9:30ಕ್ಕೆ ಜ ಮುಹಮ್ಮದ್ ಹನೀಫ್ ಐವತ್ತೊಕ್ಲು ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.
ಸಂಜೆ 7:00ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಹು ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಲ್ ಅಲ್ ಬುಖಾರಿ ದುಗ್ಗಲಡ್ಕ ದುಆಶೀರ್ವಚನ ನೀಡಲಿದ್ದಾರೆ.
ರಹ್ಮಾನಿಯಾ ಕೇಂದ್ರ ಜುಮುಅ: ಮಸೀದಿ ಎಣ್ಮೂರು ಇಲ್ಲಿನ ಖತೀಬರಾದ ಬಹು ಅಲ್ಹಾಜ್ ಅಬ್ದುಲ್ಲಾ ಮದನಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಅಧ್ಯಕ್ಷತೆಯನ್ನು ರಹ್ಮಾನಿಯಾ ಕೇಂದ್ರ ಜುಮುಅ: ಮಸೀದಿಯ ಅಧ್ಯಕ್ಷರಾದ ಜ ಇಸ್ಮಾಯಿಲ್ ಪಡ್ಪಿನಂಗಡಿ ವಹಿಸಲಿದ್ದಾರೆ.ಬಹು ಮುಹಮ್ಮದ್ ಇರ್ಷಾದ್ ಅಝ್ಹರಿ‌ ಮಲಪ್ಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.ಜ 16ರಂದು ಶುಕ್ರವಾರ ಜುಮುಅ: ನಮಾಝಿನ ಬಳಿಕ ಪಳ್ಳಿನೇರ್ಚೆ ನಡೆಯಲಿದೆ.
ಮುಸ್ಸಂಜೆ 7:00ಕ್ಕೆ ಬಹು ಅನ್ವರಿ ಅಲಿ ಹುದವಿ ಪುಲಿಯಕ್ಕೋಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಜ.17ರಂದು ಮುಸ್ಸಂಜೆ ಬಹು ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಲ್ ಅಲ್ ಬುಖಾರಿ ಎಣ್ಮೂರು ಮುಚ್ಚಿಲ ದುಆಶೀರ್ವಚನ ನೀಡಲಿದ್ದಾರೆ.
ಅಧ್ಯಕ್ಷತೆಯನ್ನು ಎಣ್ಮೂರು ಉರೂಸ್ ಸಮಿತಿ ಅಧ್ಯಕ್ಷರಾದ ಜ ಅಬ್ದುಲ್ ಗಫೂರ್ ಕಲ್ಮಡ್ಕ ವಹಿಸಲಿದ್ದಾರೆ.ಬಹು ಮುಳ್ಳೂರ್ ಕರ ಮುಹಮ್ಮದಲಿ ಸಖಾಫಿ ಮುಖ್ಯ ಪ್ರಭಾಷಣವನ್ನು ಮಾಡಲಿದ್ದಾರೆ.ಜ.17ರಂದು ಅಪರಾಹ್ನ ಘಂಟೆ 3:00ಕ್ಕೆ ಉಮರಾ ಸಮಾವೇಶ ನಡೆಯಲಿದ್ದು ಕರ್ನಾಟಕ ವಿಧಾನ ಸಭಾಧ್ಯಕ್ಷರಾದ
ಜ ಯು.ಟಿ.ಖಾದರ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.ಮಂಗಳೂರು ಯೇನೆಪೋಯ ವಿಶ್ವವಿದ್ಯಾಲಯದ ಕುಲಪತಿಗಳಾದ ಹಾಜಿ ವೈ.ಎಂ.ಕೆ ಅಬ್ದುಲ್ಲಾಹ್ ಕುಂಞಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಹಜ್ ಸಮಿತಿಯ ಮಾಜಿ ಸದಸ್ಯರಾದ ಬಹು ಅಬೂಬಖರ್ ಸ್ವಿದ್ದೀಖ್ ಮೋಂಟುಗೋಳಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಪೌರಾಡಳಿತ ಮತ್ತು ಹಜ್ ಸಚಿವರಾದ ಜ ರಹೀಂ ಖಾನ್, ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಜ ಸಲೀಂ ಅಹ್ಮದ್, ಕರ್ನಾಟಕ ಸರಕಾರದ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಮಂಡಳಿಯ ಅಧ್ಯಕ್ಷರಾದ ಜ ಟಿ.ಎಂ.ಶಹೀದ್, ಕರ್ನಾಟಕ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜ‌ ಎಂ.ಎ.ಗಫೂರ್, ಮಂಗಳೂರು ಓಶಿಯನ್ ಕನ್ಸ್ಟ್ರಕ್ಷನ್ ವ್ಯವಸ್ಥಾಪಕ ನಿರ್ದೇಶಕರಾದ ಜ ಇನಾಯತ್ ಅಲಿ, ಮಂಗಳೂರು ಕಣಚೂರು ಮೆಡಿಖಲ್ ಕಾಲೇಜಿನ ಅಧ್ಯಕ್ಷರಾದ ಹಾಜಿ ಯು.ಕೆ.ಮೋನು ಕಣಚೂರು, ಉಳ್ಳಾಲ ದರ್ಗಾ ಶರೀಫಿನ ಅಧ್ಯಕ್ಷರಾದ ಹಾಜಿ ಬಿ.ಜಿ.ಹನೀಫ್ ಹಾಗೂ ಹಲವಾಭರು ಪ್ರಮುಖ ನಾಯಕರು, ಉಲಮಾ,ಉಮರಾ ನೇತಾರರು ಭಾಗವಹಿಸಲಿದ್ದಾರೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading