Ad Widget

ಪೆರುವಾಜೆ : ಜ.16 ರಿಂದ‌ 21 ರ ತನಕ ವಾರ್ಷಿಕ ಜಾತ್ರೆ- ಜ.19 ಬ್ರಹ್ಮರಥೋತ್ಸವ

ಪೆರುವಾಜೆ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ  ಬ್ರಹ್ಮರಥೋತ್ಸವವು ಜ.16 ರಿಂದ ಜ.21 ರ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಜ.16 ರಂದು ಹಸುರು ಹೊರೆಕಾಣಿಕೆ ಮೆರವಣಿಗೆ : ಜ.16 ರಂದು ಬೆಳಗ್ಗೆ 10 ಗಂಟೆಗೆ ಜಾತ್ರೆಯ ಉಗ್ರಾಣ ಮುಹೂರ್ತ, ಮಹಾಪೂಜೆ, ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ‌ 3:00 ಗಂಟೆಗೆ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಳಿಯಿಂದ‌ ಹಸುರು‌ ಹೊರೆಕಾಣಿಕೆ ‌ಮೆರವಣಿಗೆ, ರಾತ್ರಿ 7:00ಕ್ಕೆ ದೇವತಾ ಪ್ರಾರ್ಥನೆ, ಧ್ವಜಾರೋಹಣ ನಡೆಯಲಿದೆ. ನಂತರ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಶ್ರೀ ಭೂತ ಬಲಿ ನಡೆಯಲಿದೆ.

ಜ.17 ರಂದು ಪೇಟೆ ಸವಾರಿ : ಜ.17  ರಂದು ಬೆಳಗ್ಗೆ ಗಂಟೆ 8.30ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮದ್ಯಾಹ್ನ 12:00ಕ್ಕೆ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5:00ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಪೇಟೆ ಸವಾರಿ, ಮಹಾಪೂಜೆ, ಶ್ರೀ ಭೂತ ಬಲಿ ನಡೆಯಲಿದೆ.

ಜ.18 ರಂದು ದೀಪೋತ್ಸವ, ಪಲ್ಲಕ್ಕಿ ಉತ್ಸವ : ಜ.18 ರಂದು ಬೆಳಗ್ಗೆ 8.30 ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ,ಶ್ರೀ ಉಳ್ಳಾಕುಲು ದೈವದ ಭಂಡಾರ ಬರುವುದು, ದರ್ಶನ ಬಲಿ,ಬಟ್ಟಲು ಕಾಣಿಕೆ, ಪ್ರಸಾದ, ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂಟೆ 7.00 ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ದೀಪೋತ್ಸವ, ಪಲ್ಲಕ್ಕಿ ಉತ್ಸವ, ವಸಂತ ಕಟ್ಟೆ ಪೂಜೆ, ನೃತ್ಯ ಬಲಿ, ಮಹಾಪೂಜೆ, ಶ್ರೀ ಭೂತಬಲಿ ನಡೆಯಲಿದೆ. ರಾತ್ರಿ 6:00ಕ್ಕೆ ಪಾವಂಜೆ ಮೇಳದವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ತುಳಸಿ ಬಯಲಾಟ ಪ್ರದರ್ಶನಗೊಳ್ಳಲಿದೆ.

ಜ.19 ರಂದು ಬ್ರಹ್ಮರಥೋತ್ಸವ, ಪೆರುವಾಜೆ ಬೆಡಿ ಪ್ರದರ್ಶನ : ಜ.19 ರಂದು ಬೆಳಿಗ್ಗೆ 8.30 ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ 12:00 ಕ್ಕೆ ಶ್ರೀ ದೇವರಿಗೆ ಕಲಶಾಭಿಷೇಕ, ಪಲ್ಲಕ್ಕಿ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 7:00ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ,ವ್ಯಾಘ್ರಚಾಮುಂಡಿ ದೈವ(ಪಿಲಿಭೂತ)ದ ಭಂಡಾರ ಬರುವುದು. ಅನಂತರ ಬ್ರಹ್ಮರಥೋತ್ಸವ, ಪೆರುವಾಜೆ ಬೆಡಿ ಪ್ರದರ್ಶನ ನಡೆಯಲಿದೆ.  ಆ ಬಳಿಕ ಮಹಾಪೂಜೆ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ.

ಜ.20 ರಂದು ಶ್ರೀ ದೇವರ ಅವಭೃತ : ಜ.20 ರಂದು ಬೆಳಗ್ಗೆ 7:00 ಕ್ಕೆ ಕವಾಟೋದ್ಘಾಟನೆ, ಶ್ರೀ ದೇವರಿಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ತುಲಾಭಾರ ಸೇವೆ, ಯಾತ್ರಾ ಹೋಮ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 7:00 ಕ್ಕೆ ಶ್ರೀ ದೇವರ ಬಲಿ ಹೊರಟು ಕಟ್ಟೆಪೂಜೆ, ಅವಭೃತ ಸ್ನಾನ ಧ್ವಜಾವರೋಹಣ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಉಳ್ಳಾಕುಲು, ಮೈಷಂತಾಯ, ಶ್ರೀ ವ್ಯಾಘ್ರಚಾಮುಂಡಿ ದೈವದ ಭಂಡಾರ ತೆಗೆಯುವುದು.

ಜ.21 ರಂದು ದೈವಗಳ ನೇಮ : ಜ.21 ರಂದು ಬೆಳಿಗ್ಗೆ ಮಹಾಗಣಪತಿ ಹೋಮ,ಕಲಶ ಪೂಜೆ, ಶ್ರೀ ಉಳ್ಳಾಕುಲು ಮತ್ತು ಮೈಷಂತಾಯ ದೈವಗಳ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿರುವುದು. ಮದ್ಯಾಹ್ನ ಶ್ರೀ ದೇವರಿಗೆ ಸಂಪ್ರೋಕ್ಷಣೆ, ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿರುವುದು. ಮಧ್ಯಾಹ್ನ  ಶ್ರೀ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 7:00 ಕ್ಕೆ ಶ್ರೀ ಕಲ್ಲುರ್ಟಿ, ಕಲ್ಕುಡ ದೈವದ ನೇಮೋತ್ಸವ ನಡೆಯಲಿದೆ. ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ವಿವಿಧ ಭಜನ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading