Ad Widget

ಕಲ್ಕುಡ ದೈವಸ್ಥಾನದ ಜೀರ್ಣೋದ್ದಾರಕ್ಕೆ
ಅಂಗವಾಗಿ ಮನವಿ ಪತ್ರ ಬಿಡುಗಡೆ

ಸುಳ್ಯದ ನಾವೂರಿನ ಶ್ರೀ ಕಲ್ಕುಡ ದೈವಸ್ಥಾನದ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ಮರದ ಕೆತ್ತನೆ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಪುನ‌ರ್ ಪ್ರತಿಷ್ಠಾ ಕಾರ್ಯಕ್ಕೆ ಭಕ್ತಾದಿಗಳು ಸಹಕರಿಸುವಂತೆ ಕೋರಿ ಮನವಿ ಪತ್ರ ಬಿಡುಗಡೆ  ಜ.14 ರಂದು ದೈವಸ್ಥಾನದಲ್ಲಿ ನಡೆಯಿತು.

ದೈವಸ್ಥಾನದ ಆಡಳಿತ ಸಮಿತಿಯ ಧರ್ಮದರ್ಶಿ ಪಿ.ಕೆ ಉಮೇಶ್ ರವರು ಪ್ರಾರ್ಥನೆ ನೆರವೇರಿಸಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಮನವಿ ಪತ್ರ ಮತ್ತು ದೇಣಿಗೆ ರಶೀದಿ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಪಿ.ಆ‌ರ್, ಸದಸ್ಯರಾದ ಕೆ.ಸೋಮನಾಥ ಪೂಜಾರಿ, ಕೆ.ಪ್ರಕಾಶ್ ಹೆಗ್ಡೆ, ಕೇಶವ ನಾಯಕ್, ಹರೀಶ್ ಬೂಡುಪನ್ನೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ ಪ್ರಭು, ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕೋಶಾಧಿಕಾರಿ ಅವಿನಾಶ್ ಕುರುಂಜಿ, ಉಪಾಧ್ಯಕ್ಷರಾದ ಸದಾನಂದ ಮೂಲೆಮಜಲು, ಶಶಿಕಲಾ ನೀರಬಿದಿರೆ, ದೈವಸ್ಥಾನದ ಪೂಜಾರಿ ಮೋನಪ್ಪ ಗೌಡ ಕೆರೆಮೂಲೆ, ತಿಮ್ಮಪ್ಪ ಗೌಡ ನಾವೂರು, ಜಗದೀಶ್ ಕೆ, ಗುರುದತ್ ಶೇಟ್, ದಾಮೋದರ ಮಂಚಿ, ನವೀನ್ ಕಾಯರ್ತೋಡಿ, ಪ್ರಣೀತ್ ಕಣಕ್ಕೂರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading