Ad Widget

ಬೆಳ್ಳಾರೆ – ಬೂಡು ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ಳಾರೆ ಗ್ರಾಮದ ಬೂಡು ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಮತ್ತು ಸಪರಿವಾರ ದೈವಗಳ ನೇಮೋತ್ಸವವು ಮಾ. 14 ಹಾಗೂ 15ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಜ.14ರಂದು ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿ ಬೂಡು ಇಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬೆಳ್ಳಾರೆ ಜಲದುರ್ಗಾ ದೇವಿ ಅರ್ಥ್ ಮೂವರ್ಸ್ ಮತ್ತು ಬೋರ್ವೆಲ್ಸ್ ಮಾಲಕರಾಗಿರುವ ಪದ್ಮನಾಭ ಬೂಡು ಇವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಶರತ್ ಜಬಳೆ, ಲಿಖಿತ್ ಅತ್ರಪ್ಪಾಡಿ, ಪ್ರಗತಿಪರ ಕೃಷಿಕರಾದ ಪ್ರಕಾಶ್ ದಾಸನಮಜಲು, ಕರ್ನಾಟಕ ಮೊಗೇರ ಸಂಘ(ರಿ.) ಇದರ ರಾಜ್ಯಾಧ್ಯಕ್ಷರಾದ ನಂದರಾಜ್ ಸಂಕೇಶ್, ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಸಮಿತಿ ಬೂಡು ಇದರ ಆಡಳಿತ ಸಮಿತಿ ಅಧ್ಯಕ್ಷರಾದ ಸುಂದರ ತೊಡಿಕಾನ, ನೇಮೋತ್ಸವ ಸಮಿತಿ ಬೂಡು ಇದರ ಗೌರವ ಸಲಹೆಗಾರರಾದ ಹರೀಶ್ ದರ್ಖಾಸ್ತು, ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿ ಬೂಡು ಇದರ ಮೂಲ ಪೂಜಾರಿಯಾದ ಜನಾರ್ಧನ ಕಲ್ಲೋಣಿ, ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಸಮಿತಿ ಬೂಡು ಇದರ ಉಸ್ತುವಾರಿ 
ಅಧ್ಯಕ್ಷರಾದ ಪ್ರಸಾದ್ ಬೂಡು, ನೇಮೋತ್ಸವ ಸಮಿತಿ ಬೂಡು ಇದರ ಅಧ್ಯಕ್ಷರಾದ ವಿಜಯ್ ಪಾಟಾಜೆ, ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿ ಮತ್ತು ಸಪರಿವಾರ ದೈವಸ್ಥಾನದ ಪೂಜಾರಿ
ಚೋಮ ಪಾಟಾಜೆ, ಈ ಗರಡಿಯ ಉಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಗಣೇಶ್ ಪಳ್ಳಿಮಜಲು, ಉಸ್ತುವಾರಿ ಸಮಿತಿಯ ಕಾರ್ಯದರ್ಶಿ ಹರೀಶ್ ಬೂಡು, ಉಪ ಕಾರ್ಯದರ್ಶಿ ವಿಶ್ವನಾಥ್ ಬೂಡು, ಕೋಶಾಧಿಕಾರಿ ದಿನೇಶ್ ಬೂಡು, ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಬೂಡು ಇದರ ನೇಮೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಕೂಸಪ್ಪ ಪುಡ್ಕಜೆ, ಪ್ರಚಾರ ಸಮಿತಿಯ ಸಾಗರ್ ಬೆಳ್ಳಾರೆ, ಅಮರ ಸುಳ್ಯ ಸುದ್ದಿ ವಾರಪತ್ರಿಕೆಯ ವರದಿಗಾರರಾದ ಎಂ.ಎ.ಮುಸ್ತಫಾ ಬೆಳ್ಳಾರೆ, ಇನ್ನಿತರರಾದ ಉಮೇಶ್ ಕಜೆ, ಮಂಜುನಾಥ್ ಕಾವಿನಮೂಲೆ, ಯಶವಂತ ಕಲಾಯಿ, ಐತ್ತಪ್ಪ ನೇಲ್ಯಮಜಲು, ಫಕೀರ ಚೀಮುಳ್ಳು, ಸನತ್ ಹಾಗೂ ಭಕ್ತಾಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಕರ ಸಂಕ್ರಮಣದ ಪ್ರಯುಕ್ತ ಸಪರಿವಾರ ದೈವಗಳಿಗೆ ಅಗೇಲು ಸೇವೆ ಹಾಗೂ ಹರಕೆಯ ಅಗೇಲು ಸೇವೆ ನಡೆಯಿತು.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading