Ad Widget

ಗುತ್ತಿಗಾರು ಪಿ.ಎಂ.ಶ್ರೀ ಹಿ.ಪ್ರಾ. ಶಾಲೆಯ ನೂತನ ಶಾಲಾ ಕೊಠಡಿಗೆ ಗುದ್ದಲಿ ಪೂಜೆ

ಗುತ್ತಿಗಾರು ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆಗೆ  ಪಿ.ಎಂ.ಶ್ರೀ ಅನುದಾನದಿಂದ 17 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಶಾಲಾ ಕೊಠಡಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು. ಹಾಗೂ ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಶೌಚಾಲಯ ಮತ್ತು ನೂತನ ಬೊರ್ ವೇಲ್ ಅನ್ನು ಉದ್ಘಾಟಿಸಿದರು.

ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಮೂಕಮಲೆ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗುತ್ತಿಗಾರು ಕ್ಲಸ್ಟರ್ ಸಿ.ಆರ್.ಪಿ ಕುಶಾಲಪ್ಪ ತುಂಬತ್ತಾಜೆ, ಗ್ರಾಮ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ವೆಂಕಟ್ ವಳಲಂಬೆ, ಸದಸ್ಯರಾದ ಜಗದೀಶ್ ಬಾಕಿಲ, ಪ್ರಮುಖರಾದ ಮಾಜಿ ತಾ.ಪಂಚಾಯತ್ ಅಧ್ಯಕ್ಷ ಮುಳಿಯ ಕೇಶವ ಭಟ್, ಸಹಕಾರಿ ಸಂಘದ ಉಪಾಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕವೃಂದ‌ ಮತ್ತು ಮಕ್ಕಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading