Ad Widget

ರಂಗಮನೆಯಲ್ಲಿ ನಲಿದಾಡಿದ ವಿಶೇಷ ಚೇತನ ಮಕ್ಕಳು

ಸುಳ್ಯ ಹಳೆಗೇಟಿನಲ್ಲಿರುವ  ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರಕ್ಕೆ ಸುಳ್ಯ ತಾಲೂಕಿನ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿಶೇಷ ಅಗತ್ಯವುಳ್ಳ ಸುಮಾರು 40 ಮಕ್ಕಳು ತಮ್ಮ ಹೆತ್ತವರೊಂದಿಗೆ ಭೇಟಿ ನೀಡಿದರು.
   
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯು ಹಮ್ಮಿಕೊಂಡ ವಿಶೇಷ ಅಗತ್ಯವುಳ್ಳ ಮಕ್ಕಳ  ಕ್ಷೇತ್ರ ಭೇಟಿಯ ಅಂಗವಾಗಿ ರಂಗಮನೆಗೆ ಬಂದ ಮಕ್ಕಳು ಅಲ್ಲಿನ ಕಲಾತ್ಮಕ ಶಿಲ್ಪಗಳನ್ನು ಮುಗ್ಧರಾಗಿ ವೀಕ್ಷಿಸಿದರು. ಮನೆಯೊಳಗೆ ಹೊರಗೆ ವೇದಿಕೆ ಪ್ರೇಕ್ಷಾಂಗಣದಲ್ಲೆಲ್ಲ ಓಡಾಡಿ ನಲಿದಾಡಿದರು.
ರಂಗಮನೆಯ ರೂವಾರಿ ಜೀವನ್ ರಾಂ ಸುಳ್ಯರೊಂದಿಗೆ ಹಾಡಿದರು, ಅಭಿನಯಿಸಿದರು.
ಖಾಲಿ ಪಾತ್ರೆಯಲ್ಲಿ ಸೃಷ್ಟಿಯಾದ ಚಾಕಲೇಟ್ ರಾಶಿಯನ್ನು ಬೆರಗುಗಣ್ಣಿನಿಂದ ನೋಡಿದರು. ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಜೀವನ್ ರಾಂ ಮಕ್ಕಳ ಕೈಯ್ಯಲ್ಲೇ ಒಂದಷ್ಟು ಜಾದೂವನ್ನು ಮಾಡಿಸಿ ಅವರನ್ನು ಜಾದೂಗಾರರನ್ನಾಗಿಸಿದರು. ಆನೆ ಬಂದಿತ್ತು ಅಣ್ಣ ಆನೆ ಬಂದಿತ್ತು ಹಾಡಿಗೆ ಅಭಿನಯಿಸಿದರು. ಜೊತೆಗಿದ್ದ ಹೆತ್ತವರು ತಮ್ಮ ಮಕ್ಕಳ ಮುಗ್ಧ ಪ್ರತಿಭೆಯನ್ನು ನೋಡಿ ಕಣ್ತುಂಬಿಕೊಡು ಮೊಬೈಲ್ ನಲ್ಲಿ ಸೆರೆಹಿಡಿದರು. ಎಲ್ಲರೂ ಜೊತೆಯಲ್ಲೇ ಭೋಜನ ಸ್ವೀಕರಿಸಿದರು.
  
ಬಿ.ಐ.ಇ.ಆರ್.ಟಿ.ಯ ಎಂ.ಎಸ್.ದೇವರಾಜ್ ಮುತ್ಲಾಜೆ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ವಿಶೇಷ ಮಕ್ಕಳ ಅಭಿವೃದ್ಧಿ ಯೋಜನೆಯ ಶ್ರೀಮತಿ ಶಶಿಕಲಾ ಪಿ, ವೃತ್ತಿ ಮಾರ್ಗದರ್ಶಕರಾದ ಶ್ರೀಮತಿ ಕೃಪಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರಮ್ಯಾ ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ಕೆ. ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಜೀವನ್ ರಾಂ ಸುಳ್ಯ ರವರು “ಇದೊಂದು ಪುಣ್ಯದ ಕೆಲಸ ಅಂತ ತಿಳಿಯುತ್ತೇನೆ. ವಿಶೇಷ ಚೇತನ ಮಕ್ಕಳೊಂದಿಗೆ ಭಾಗವಹಿಸುವ ಭಾಗ್ಯ ನನ್ನದು. ಒಬ್ಬೊಬ್ಬರ ಗ್ರಹಿಕಾ ಸಾಮರ್ಥ್ಯ ಭಿನ್ನವಾದುದು. ಅದನ್ನರಿತು ಅಷ್ಟೇ ಮುಗ್ಧರಾಗಿ ಅವರೊಂದಿಗೆ ಬೆರೆಯುವುದು ನಮಗೊಂದು ಸವಾಲು. ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಚಟುವಟಿಕೆಗಳು ನಡೆಯಬೇಕು. ಹೆತ್ತವರು ಯಾವುದೇ ಅಳುಕಿಲ್ಲದೆ ಅವರನ್ನು ಮುನ್ನಲೆಗೆ ಬಿಡಬೇಕು. ವಿಶೇಷ ಮಕ್ಕಳ ಪಾದ ಸ್ಪರ್ಶದಿಂದ ರಂಗಮನೆ ನಿಜಕ್ಕೂ ಪಾವನವಾಯ್ತು” ಎಂದು ಹೇಳಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading