Ad Widget

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ‌.ಜಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ಬೆಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಪಲ್ಲವಿ.ಜಿ ಕುಕ್ಕೆ ಸುಬ್ರಹ್ಮಣ್ಯ ಭೇಟಿ ಮಾಡಿ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.
ಕ್ಷೇತ್ರಕ್ಕೆ ಆಗಮಿಸಿದ ಇವರನ್ನು ದೇವಳದ ವತಿಯಿಂದ ವಿಶೇಷವಾಗಿ ಶಾಲು ಹೊದಸಿ ಪ್ರಸಾದ ನೀಡಿ ಗೌರವಿಸಲಾಯಿತು. ಹಾಗೂ ಸ್ಥಳೀಯ ಮಲೆ ಕುಡಿಯ ಸಮುಧಾಯದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಬಳಿಕ ಸುಬ್ರಹ್ಮಣ್ಯದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಸುಬ್ರಹ್ಮಣ್ಯ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪುಟಾಣಿ ಮಕ್ಕಳೊಂದಿಗೆ ಕೆಲ ಕಾಲ ಕಳೆದರು.
ಅಲ್ಲದೆ ಸುಬ್ರಹ್ಮಣ್ಯ ಆಸುಪಾಸಿನ ಮಲೆ ಕುಡಿಯ ಮನೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಿ ಜನಾಂಗದ ಸಮಸ್ಯೆಗಳನ್ನು ಕೇಳಿ ಪರಿಹಾರ ಹಾಗೂ ಸೂಕ್ತ ವ್ಯವಸ್ಥೆಗಳ ಭರವಸೆಯನ್ನು ನೀಡಿದರು.
ವಿಶೇಷವಾಗಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಲೆ ಕುಡಿಯ ಜನಾಂಗಕ್ಕೆ ಶೀಘ್ರದಲ್ಲಿ ಸಮುದಾಯ ಭವನ ನಿರ್ಮಾಣದ ಭರವಸೆ ನೀಡಿದರು.
ಈ ಸಂದರ್ಭ ದ.ಕ ಜಿಲ್ಲಾ ಮಲೆ ಕುಡಿಯ ಸಂಘದ ಉಪಾಧ್ಯಕ್ಷರು ಮತ್ತು ಸುಬ್ರಹ್ಮಣ್ಯ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಾಧವ ದೇವರಗದ್ದೆ, ಸಮುದಾಯದ ಪ್ರಮುಖರಾದ ಶಿವರಾಮ್ ಪರ್ವತಮುಖಿ, ಬೆಳ್ಯಪ್ಪ ಕುಲ್ಕುಂದ, ನಾರಾಯಣ ದೇವರಗದ್ದೆ, ಶ್ರೀಮತಿ ದಿವ್ಯಾ ಮಾಧವ, ಶಾಲಾ ಮೇಲ್ವಿಚಾರಕಾರದ ಬಸವರಾಜ್, ವಿಶೇಷ ಅಧಿಕಾರಿ ಆನಂದ್ ಕುಮಾರ್ ಮೊದಲದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading