Ad Widget

ಅಡಿಕೆ ಕೃಷಿಕರು ಸಂಕಷ್ಟದಲ್ಲಿದ್ದು ಸರಕಾರ ಬೆಳೆ ಸಾಲ ಮನ್ನಾ ಹಾಗೂ ಬಡ್ಡಿ ಮನ್ನಾ ಮಾಡುವಂತೆ ಬೆಳೆಗಾರರ ಸಂಘ ಒತ್ತಾಯ – ಎಲೆಚುಕ್ಕಿ ಬಾಧಿತ ರೈತರ ಸಮೀಕ್ಷೆ ನಡೆಸಲು ತೀರ್ಮಾನ

ಸುಳ್ಯ ತಾಲೂಕು ಕೃಷಿ ಪ್ರಧಾನವಾಗಿದ್ದು ಶೇ80 ಕ್ಕೂ ಹೆಚ್ಚು ಜನ ಅಡಿಕೆ ಕೃಷಿಯನ್ನೇ ನಂಬಿದ್ದಾರೆ. ಆದರೇ ಇದೀಗ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ, ಸುಳಿ ಕೊರೆಯುವ ಹುಳು ಸಮಸ್ಯೆ ಸೇರಿದಂತೆ ರೈತರು ಸಂಕಷ್ಟದಲ್ಲಿದ್ದು ಸರಕಾರ ಸರಕಾರ ರೈತರ ನೆರವಿಗೆ ಬರಬೇಕು. ರೈತರ ಸಂಪೂರ್ಣ ಬೆಳೆಸಾಲ, ದೀರ್ಘಾವಧಿ ಸಾಲದ ಬಡ್ಡಿ ಮನ್ನಾ ಮಾಡುವಂತೆ ಹಾಗೂ ಅಸಲು ಪಾವತಿಗೆ 2 ವರ್ಷ ಅವಧಿ ವಿಸ್ತರಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸುಳ್ಯ ತಾಲೂಕು ಅಡಿಕೆ ಕೃಷಿಕರ ಘಟಕದ ಸಂಚಾಲಕ ಯಂ. ಡಿ. ವಿಜಯಕುಮಾರ್ ಹೇಳಿದರು.

. . . . . . . . .

ಅವರು ಸುಳ್ಯದ ಪ್ರಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.‌ ಶತಮಾನದಿಂದ ರೈತರ ಜೀವನಾಡಿಯಾಗಿರುವ ಅಡಿಕೆ ಬೆಳೆ ಇತ್ತೀಚಿನ ವರ್ಷಗಳಲ್ಲಿ “ಎಲೆಚುಕ್ಕಿ” ಎಂಬ ಮಹಾರೋಗ ಆಡಿಕೆಗೆ ಭಾದಿಸಿ ನಮ್ಮ ತಾಲೂಕಿನ ಅಡಿಕೆ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅಡಿಕೆ ಫಸಲು ನಷ್ಟದ ಜೊತೆಗೆ ಅಡಿಕೆ ತೋಟಗಳೇ ನಾಶವಾಗುತ್ತಿದೆ. ಇದನ್ನು ಮನಗಂಡು ಸಂಘದ ಸುಳ್ಯ ಘಟಕದ ವತಿಯಿಂದ ನಡೆದ ಸಭೆ ನಡೆದು ಆರ್ಥಿಕ ಹೊಡೆತವನ್ನು ನಿಭಾಯಿಸುವ ಬಗ್ಗೆ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪ್ರಮುಖವಾಗಿ ಅಡಿಕೆ ಬೆಳೆಗಾರರು ಪಡೆದಿರುವ ಬೆಳೆಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ದೀರ್ಘಾವಧಿ ಸಾಲದ ಮೇಲಿನ 3% ಬಡ್ಡಿಯನ್ನು ಮನ್ನಾ ಮಾಡಬೇಕು. ತೀವ್ರ ಆರ್ಥಿಕ ಹೊಡೆತದ ಹಿನ್ನಲೆಯಲ್ಲಿ ದೀರ್ಘಾವಧಿ ಸಾಲದ ಅಸಲು ಮರುಪಾವತಿಯನ್ನು ಕನಿಷ್ಠ 2 ವರ್ಷಗಳ ಕಾಲ ತಡೆಹಿಡಿಯುವ ಆದೇಶವನ್ನು ತಕ್ಷಣ ಮಾಡಬೇಕು ಎಂದು ಒತ್ತಾಯಿಸಿದರು.‌ ಇದರ ಜೊತೆಗೆ ತಾಲೂಕಿನ “ಎಲೆಚುಕ್ಕಿ” ಬಾಧಿದಿತ ರೈತರ ಸಮೀಕ್ಷೆಯನ್ನು ಕೈಗೊಂಡು ರೈತರಿಗಾಗಿರುವ ನಷ್ಟದ ಪ್ರಮಾಣ ಅಂದಾಜಿಸಿ ಸರಕಾರಕ್ಕೆ ಸಲ್ಲಿಸುವ ಬಗ್ಗೆಯೂ ನಿರ್ಣಯಿಸಲಾಯಿತು ಎಂದರು.
ಸುಳ್ಯ ತಾಲೂಕು ಸಹಕಾರಿ ಯೂನಿಯನ್‌ನವರ ಸಹಕಾರ ಪಡೆದು ಸಹಕಾರ ಸಂಘಗಳ ಮುಖಾಂತರ ಸಮೀಕ್ಷೆ ಅರ್ಜಿಗಳನ್ನು ವಿತರಿಸಿ ರೈತರಿಂದ ಮಾಹಿತಿ ಸಂಗ್ರಹ ಮಾಡುತ್ತೇವೆ. ಕೂಡಲೇ ಎಲ್ಲಾ ಬಾಧಿತ ರೈತರು ಸಮೀಕ್ಷೆಗೆ ಬೇಕಾದ ಮಾಹಿತಿಯನ್ನು ಜ.31 ರ ಒಳಗೆ ಸಹಕಾರಿ ಸಂಘದಲ್ಲಿ ನೀಡಬೇಕು. ನಮ್ಮ ಬೇಡಿಕೆ ಹಾಗೂ ಸಮೀಕ್ಷೆಯ ಮಾಹಿತಿಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಸಲ್ಲಿಸುತ್ತೇವೆ ಎಂದರು.

. . . . . . .

ಶೂನ್ಯ ಬಡ್ಡಿಯ ಬೆಳೆಸಾಲ ಹಾಗೂ 3% ಬಡ್ಡಿಯಲ್ಲಿ ದೀರ್ಘಾವಧಿ ಸಾಲಗಳನ್ನು ನೀಡಿ ರೈತರ ಪರ ಇರುವ ಸರಕಾರ ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿದ ಅಡಿಕೆ ಕೃಷಿಕರ ನೆರವಿಗೆ ಬರುವುದರಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ಈ ಹಿಂದೆಯೂ ಎಲ್ಲಾ ಸರಕಾರಗಳು ರೈತರ ಸಾಲ ಮನ್ನಾ ಮಾಡಿದೆ.‌ 2018 ರಲ್ಲಿ ಎಲ್ಲಾ ಕಡೆ ಕೋಳೆರೋಗ ಬಂದಾಗ ಸರಕಾರ ರೈತರ ನೆರವಿಗೆ ಬಂದಿತ್ತು. ಬೆಳೆ ವಿಮೆ ಕಡಿತ, ಕೋವಿ ಪರವಾನಿಗೆ ಸಮಸ್ಯೆ ಜತೆಗೆ ಎಲೆಚುಕ್ಕಿ ರೋಗದಿಂದ ತೋಟಗಳು ಸರ್ವನಾಶ ವಾಗುತ್ತಿದ್ದು ಸರಕಾರ ಕೂಡಲೇ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಭರವಸೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಸ್ಥಿತಿ ನಿರ್ಮಾಣವಾಗಬಹುದು ಎಂದರು.

ಪ್ರತಿಕಾಗೋಷ್ಠಿಯಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸುಳ್ಯ ತಾಲೂಕು ಅಡಿಕೆ ಬೆಳೆಗಾರರ ಕೃಷಿಕರ ಘಟಕದ ಅಧ್ಯಕ್ಷ ಜಯರಾಮ ಹಾಡಿಕಲ್ಲು, ಸದಸ್ಯರುಗಳಾದ ಹರೀಶ್ ಕಂಜಿಪಿಲಿ, ಮಾಧವ ಗೌಡ ಜಾಕೆ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading