Ad Widget

ಅಮರ ಸಂಘಟನಾ ಸಮಿತಿ ವತಿಯಿಂದ ಪೈಲಾರು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಸುಳ್ಯ : ಜನವರಿ 10 ರಂದು ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇದರ ವತಿಯಿಂದ ಪೈಲಾರು ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿಕಾಂತ್ ಮಿತ್ತೂರು ಅಧ್ಯಕ್ಷರು ಅಮರ ಸಂಘಟನಾ ಸಮಿತಿ ಸುಳ್ಯ ಇವರು ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೈಲಾರು ಒಕ್ಕೂಟ ಇದರ ಅಧ್ಯಕ್ಷರಾದ ದಯಾನಂದ ಗುಡ್ಡೆಮನೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ಇದರ ಉಪಾಧ್ಯಕ್ಷರಾದ ನಾರಾಯಣ ಕೊಡ್ತುಗುಳಿ, ಪ್ರಗತಿಪರ ಜೇನು ಕೃಷಿಕರಾದ ವಿವೇಕ್ ಪಡ್ಪು, ಸಂಘಟನೆಯ ಕೋಶಾಧಿಕಾರಿ ಜಯಪ್ರಸಾದ್ ಸಂಕೇಶ, ಅಂಗನವಾಡಿ ಕಾರ್ಯಕರ್ತೆ, ಚಂದ್ರವಾತಿ ಕೆರೆಮೂಲೆ ಅಂಗನವಾಡಿ ಕೇಂದ್ರ ಪೈಲಾರು ಇವರು ವಹಿಸಿ ಶುಭ ಹಾರೈಸಿದರು.
ಜಯಪ್ರಸಾದ್ ಸಂಕೇಶ ಸ್ವಾಗತಿಸಿ, ಮಿಥುನ್ ಪೈಲಾರು ವಂದಿಸಿದರು. ಚೇತನ್ ಎಲಿಮಲೆ ಕಾರ್ಯಕ್ರಮ ನಿರೂಪಿಸಿದರು.
ಅಮರ ಸಂಘಟನಾ ಸಮಿತಿಯಯ ಸ್ಥಾಪಕಾಧ್ಯಕ್ಷ ಪ್ರದೀಪ್ ಬೊಳ್ಳೂರು, ಸಂಚಾಲಕರಾದ ಹರ್ಷಿತ್ ದಾತಡ್ಕ,ಸದಸ್ಯರಾದ ಹಿತೇಶ್ ನಾರ್ಕೊಡು, ಮನೀಶ್ ಕಡಪಳ ಇವರುಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading