Ad Widget

ಪೆರಾಜೆ ಚಿಗುರು ಯುವಕಮಂಡಲ ಪೆರಾಜೆ ಇದರ ಸಂಕ್ರಾಂತಿ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ

ಪೆರಾಜೆ : ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲ(ರಿ.) ಇದರ ವತಿಯಿಂದ ಸಂಕ್ರಾಂತಿ ಸಂಭ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಹಾಗೂ ಗ್ರಾಮಸ್ಥರ ಕ್ರೀಡಾ ಸ್ಪರ್ಧೆಗಳು ಮತ್ತು ಗ್ರಾಮದ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜ.18 ಭಾನುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಾಜೆ ಕುಂಬಳಚೇರಿ ಇಲ್ಲಿ ಆಯೋಜಿಸಲಾಗಿದೆ. ಇದರ ಪ್ರಯುಕ್ತ ಕಾರ್ಯಕ್ರಮದ ಅಧಿಕೃತ ಆಮಂತ್ರಣ ಪತ್ರಿಕೆ ಹಾಗೂ ಸಂಘದ ಸದಸ್ಯರ ಟೀ-ಶರ್ಟ್ ಬಿಡುಗಡೆ ಸಮಾರಂಭವು ಇತ್ತೀಚೆಗೆ ಶ್ರೀ ವಯನಾಟ್ ಕುಲವನ್ ಸಭಾಂಗಣದಲ್ಲಿ ನಡೆಯಿತು.
    
ಈ ಸಂದರ್ಭದಲ್ಲಿ ಶ್ರೀ ವಯನಾಟ್ ಕುಲವನ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಪದ್ಮಯ್ಯ ಕುಂಬಳಚೇರಿ ಹಾಗೂ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಯುವಕರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಶ್ಲಾಘಿಸಿ ಕಾರ್ಯಕ್ರಮದ ಯಶಸ್ಸಿಗೆ ಶುಭಹಾರೈಸಿದರು.
          
ಕಾರ್ಯಕ್ರಮದಲ್ಲಿ ಶ್ರೀ ವಯನಾಟ್ ಕುಲವನ್ ಆಡಳಿತ ಮಂಡಳಿಯ ಕಾರ್ಯದರ್ಶಿ ವಿಶ್ವನಾಥ್ ಮಜಿಕೋಡಿ, ಶ್ರೀ ಶಿರಾಡಿ ರಾಜನ್ ದೈವದ ಆಡಳಿತ ಕಾರ್ಯದರ್ಶಿ ಪುರುಷೋತ್ತಮ ಮಜಿಕೋಡಿ, ಚಿಗುರು ಯುವಕ ಮಂಡಲದ ಕಾರ್ಯದರ್ಶಿ ಯತಿಶ್ಯಾಂ ಕುಂಬಳಚೇರಿ, ಖಜಾಂಚಿ ಹರ್ಷಿತ್ ಮಜಿಕೋಡಿ ಸೇರಿದಂತೆ ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲ ಪೆರಾಜೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
         
ಸಭೆಯನ್ನು ಯತಿಶ್ಯಾಂ ಕುಂಬಳಚೇರಿ ಅವರು ಸ್ವಾಗತಿಸಿ, ಕಿರಣ್ ಕುಂಬಳಚೇರಿ ಅವರು ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading