Ad Widget

“ಇನ್ನೊಬ್ಬರಿಗೆ ಅವಮಾನ ಮಾಡುವ ಮನೋರೋಗಿಗಳು ಸಮಾಜದ ನಡುವೆ ಇರಲು ಯೋಗ್ಯರಲ್ಲ”  – ಎನ್.ಎ ರಾಮಚಂದ್ರ

“ಕಡುಬಡತನದ ನಡುವೆ ತನ್ನ ಕಠಿಣ ಪರಿಶ್ರಮದ ಮೂಲಕ ಓರ್ವ ಕಾರ್ಯಕರ್ತೆಯಾಗಿ ಪ್ರಾರಂಭಿಸಿ, ಗ್ರಾಮ ಪಂಚಾಯತ್ ,ಜಿಲ್ಲಾ ಪಂಚಾಯತ್ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಇಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ,  ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿರುವ ನಮ್ಮ ನೆಚ್ಚಿನ ಶಾಸಕಿ ಕು. ಭಾಗೀರಥಿ ಮುರುಳ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಾಲಗೆ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಜಿಲ್ಲಾ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ. ತನ್ನ ಕ್ಷೇತ್ರದ ದಲಿತರ ಬಗ್ಗೆ ವಿಶೇಷ ಕಾಳಜಿವಹಿಸಿ ಕೆಲಸ ಮಾಡುತ್ತಿರುವ ನಮ್ಮ ಶಾಸಕಿಯ ಬಗ್ಗೆ “ಭಾವಪೂರ್ಣ ಶ್ರದ್ಧಾಂಜಲಿ” ಎಂಬ ಪೋಸ್ಟ್ ಹಾಕಿದ್ದು ಆ ಕಿಡಿಗೇಡಿಯ ಹೀನ ಮನಸ್ಥಿತಿಯನ್ನು  ತೋರಿಸುತ್ತದೆ. ಇಂಥ ಮನೋರೋಗಿಗಳು ಸಮಾಜದ ನಡುವೆ ಇರಲು ಯೋಗ್ಯರಲ್ಲ. ನಮ್ಮ ಶಾಸಕರು ಅಥವಾ ಪಕ್ಷದ ವಿರುದ್ಧ ಈ ರೀತಿಯ ಅವಹೇಳನ ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಸುಳ್ಯ ಬಿಜೆಪಿ ಮತ್ತು ಜಿಲ್ಲಾ ಬಿಜೆಪಿಯ ಕಾರ್ಯಕರ್ತರಾದ  ನಾವೆಲ್ಲರೂ ಶಾಸಕಿಯ ಜೊತೆ  ಗಟ್ಟಿಯಾಗಿ ನಿಲ್ಲುತ್ತೇವೆ. ತಕ್ಷಣವೇ ಪೊಲೀಸರು ಈ ಬಗ್ಗೆ ನಿಷ್ಪಕ್ಷಪಾತವಾಗಿ ಸ್ವಯಂಪ್ರೇರಿತರಾಗಿ ಕ್ರಮ ಕೈಗೊಂಡು ಕಿಡಿಗೇಡಿಯನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೆ ನಾವು ಸದಾ ಸಿದ್ಧ” ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ ರಾಮಚಂದ್ರ ಹೇಳಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading