Ad Widget

ಶಾಸಕರಿಗೆ ಅವಮಾನ ಖಂಡಿಸಿ ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ ; “ಪ್ರಕರಣದ ಗಂಭೀರತೆ ಅರಿತು ಪೋಲಿಸರು ಕ್ರಮ ಕೈಗೊಳ್ಳಬೇಕಿತ್ತು” – ಕಂದಡ್ಕ – “ಶಾಸಕರ ಜನಪ್ರಿಯತೆ ಸಹಿಸದೇ ಈ ರೀತಿ ಮಾಡಿದ್ದಾರೆ” – ಕಂಜಿಪಿಲಿ – “ಸಾಮಾಜಿಕ ನ್ಯಾಯ ಕೊಡಲು ಸರಕಾರ ವಿಫಲ” – ವಳಲಂಬೆ

ಶಾಸಕಿ ಕು. ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆದ ಅಘಾತಕಾರಿ ಘಟನೆಯ ವಿರುದ್ಧ ಬಿಜೆಪಿ ಸುಳ್ಯ ಮಂಡಲದ ವತಿಯಿಂದ ಜ.09 ರಂದು ಬೆಳಿಗ್ಗೆ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಬೃಹತ್  ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರ.ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ, ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿದರು.

“ಪ್ರಕರಣದ ಗಂಭೀರತೆ ಅರಿತು ಪೋಲಿಸರು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಎಸ್.ಪಿ ಕಛೇರಿಯಲ್ಲಿ ದೂರು ನೀಡಿದಾಗ ಇಂತಹ ಹಲವು ಕೇಸು ಇದೆ. ಹತ್ತರೊಟ್ಟಿಗೆ ಹನ್ನೊಂದು ಎಂಬಂತೆ ಈ ಪ್ರಕರಣವನ್ನು ಸೇರಿಸಿರುವುದು ನಮಗೆ ಸರಿ ಕಾಣಲಿಲ್ಲ. ಮಹಿಳಾ ಹಾಗೂ ದಲಿತ ಶಾಸಕಿಗೆ ಅವಮಾನ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಂಡು ಇಂತಹ ಪ್ರವೃತ್ತಿ ಯಾರು ಮಾಡದಂತೆ ಆಗಬೇಕು. ಪೋಲೀಸರಿಗೆ ತಾಕತ್ತು ಇದೆ ಆದರೆ ಸರಕಾರದ ಒತ್ತಡಕ್ಕೆ ಒಳಗಾಗದೇ ಕ್ರಮಕೈಗೊಳ್ಳಬೇಕು” ಎಂದು ಬಿಜೆಪಿ ಸುಳ್ಯ ಮಂಡಲದ ಪ್ರ.ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಹೇಳಿದರು.

“ಸುಳ್ಯದ ಕಾರ್ಯಕರ್ತರಿಗೆ ಉಗ್ರವಾಗಿ ಪ್ರತಿಭಟಿಸುವ ತಾಕತ್ತು ಇದೆ. ಬೆಳ್ಳಾರೆಯ ಸಾಮಾನ್ಯ ನಾಗರಿಕ ಸಚಿವರಿಗೆ ಫೋನ್ ಮಾಡಿ ಕರೆಂಟ್ ಕೇಳಿದ್ದಕ್ಕೆ ಆರೆಸ್ಟ್ ಮಾಡಿಸುತ್ತಾರೆ. ಆದರೇ ಬಡ ಕುಟುಂಬದ ದಲಿತ ಶಾಸಕರಿಗೆ ಅವಮಾನವಾದಾಗ ಸರಕಾರ ನಿರ್ಲಕ್ಷ್ಯ ಮಾಡುತ್ತದೆ.  ಶಾಸಕರ ಉತ್ತಮ ಕೆಲಸ ಕಾರ್ಯ ಹಾಗೂ ಜನಪ್ರಿಯತೆ ಸಹಿಸದೇ ಈ ರೀತಿ ಮಾಡುತ್ತಿದ್ದಾರೆ” ಎಂದು ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು.

“ಕೈಲಾಗದವ ಮೈ ಪರಚಿಕೊಂಡ ಎಂಬಂತೆ ಮುಂದೆ ಬಂದು ಎದುರಿಸಲಾಗದವರು ಇಂತಹ ಕೆಲಸ ಮಾಡುತ್ತಾರೆ. ಎಸ್.ಪಿ.ಯವರು ಸಮಜಾಯಿಸಿ ಉತ್ತರ ಕೊಟ್ಟರೇ ಸಾಲದು. ಮಹಿಳಾ ಶಾಸಕಿಯವರನ್ನು ಮಾನಸಿಕವಾಗಿ ಕುಗ್ಗಿಸದೇ,  ಅವರಿಗಾದ ಅವಮಾನಕ್ಕೆ ಕಠಿಣ ಶಿಕ್ಷೆ ನೀಡಿ ಮುಂದೆ ಯಾರು ಇಂತಹ ಅವಹೇಳನ ಪೋಸ್ಟ್ ಹಾಕದಂತೆ ಆಗಬೇಕು ಎಂದು” ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ ಹೇಳಿದರು.

“ಜನಪ್ರತಿನಿಧಿಗಳಿಗೆ ಅವಮಾನ ಮಾಡಿದರೂ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡುತ್ತಿದೆ. ಸಾಮಾಜಿಕ ನ್ಯಾಯ ಕೊಡಲು ಸರಕಾರ ವಿಫಲವಾಗಿದೆ. ದೂರು ನೀಡಲು ಹೋದರೆ ಹಳೆಯ ಕೇಸುಗಳನ್ನು ತೋರಿಸುವುದು ಸಮಾಜಕ್ಕೆ ಮಾಡುವ ದ್ರೋಹ. ಎಸ್.ಪಿ ಯವರಿಗೆ ಗೌರವ ಇದೆ. ನೀವು ಸರಿಯಾದ ಶಿಕ್ಷೆ ನೀಡಿದಾಗ ಗೌರವ ಇನ್ನಷ್ಟೂ ಎತ್ತರಕ್ಕೆ  ಏರುತ್ತದೆ. ಕೂಡಲೇ ಆತನನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಆಗ ಮಾತ್ರ ಸುಳ್ಯದ ದಲಿತ ಸಮಾಜಕ್ಕೆ ನ್ಯಾಯ ಸಿಕ್ಕಿದಂತಾಗುತ್ತದೆ” ಎಂದು ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು. 

ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ವೆಂಕಟ್ ದಂಬೆಕೋಡಿ, ಎಸ್.ಎನ್. ಮನ್ಮಥ, ಚನಿಯ ಕಲ್ತಡ್ಕ, ಸಂತೋಷ್ ಕುತ್ತಮೊಟ್ಟೆ, ಸುರೇಶ್ ಕಣೆಮರಡ್ಕ, ಶ್ರೀಕಾಂತ್ ಮಾವಿನಕಟ್ಟೆ, ಸುಭೋದ್ ಶೆಟ್ಟಿ ಮೇನಾಲ, ಕೃಷ್ಣಯ್ಯ ಮೂಲೆತೋಟ, ಸಂತೋಷ್ ಜಾಕೆ, ಶಶಿಕಲಾ ನೀರಬಿದ್ರೆ, ಕುಸುಮಾಧರ ಎ.ಟಿ, ಶಂಕರ ಪೆರಾಜೆ, ವಿಕ್ರಂ ಅಡ್ಪಂಗಾಯ, ಚಂದ್ರ ಕೋಲ್ಚಾರ್, ಕೇಶವ ಅಡ್ತಲೆ, ಅಬ್ದುಲ್ ಕುಂಞ ನೇಲ್ಯಡ್ಕ, ಚಂದ್ರಹಾಸ ಶಿವಾಲ, ನಾಗೇಶ್ ಅಡ್ಕಾರ್, ಕಿಶನ್ ಜಬಳೆ, ಗುಣವತಿ ಕೊಲ್ಲಂತಡ್ಕ, ಪುಷ್ಪಾ ಮೇದಪ್ಪ, ರಾಜೇಶ್ ಎನ್.ಎಸ್, ಸುಬ್ರಹ್ಮಣ್ಯ ಕುಳ, ರಾಜೇಶ್ ಶೆಟ್ಟಿ ಮೇನಾಲ,ಸುನಿಲ್ ಕೇರ್ಪಳ ಸೇರಿದಂತೆ ನೂರಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸಿದ್ದರು.‌

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading