Ad Widget

“ಎ.ಬಿ.ವಿ.ಪಿ ಸಂಘಟನೆಯ ಹೇಳಿಕೆ ಅವರ ನಿಜವಾದ ಮನಸ್ಥಿತಿಯನ್ನು ಬಿಂಬಿಸುತ್ತದೆ” – ಎನ್.ಎಸ್.ಯು.ಐ

“ಹಿಂದೆ ವಿದ್ಯಾರ್ಥಿಗಳು ಬಸ್ಸಿನ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದಾಗ ಎ.ಬಿ.ವಿ.ಪಿ ನಾಯಕರು ಸಂಪೂರ್ಣ ಮೌನ ವಹಿಸಿದ್ದರು. ಇಂದು ಸರ್ಕಾರದ ಶಕ್ತಿ ಯೋಜನೆಯ ಮೂಲಕ ಆ ಸಮಸ್ಯೆಗೆ ಪರಿಹಾರ ದೊರೆತಾಗ, ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ವಿದ್ಯಾರ್ಥಿನಿಯರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಅವರ ದ್ವಂದ್ವ ನೀತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಪ್ರತಿಭಟನೆ ಎನ್ನುವುದು ನಾಟಕವಲ್ಲ ; ಅದು ವಿದ್ಯಾರ್ಥಿಗಳ ನೈಜ ಸಮಸ್ಯೆಗಳ ಪ್ರತಿಬಿಂಬ. ಆ ಸತ್ಯವನ್ನು ಜನರ ಮುಂದೆ ತಂದಿರುವುದನ್ನೇ ಪ್ರಶ್ನಿಸುವ ಮೂಲಕ, ಎ.ಬಿ.ವಿ.ಪಿ ನಾಯಕರು ತಮ್ಮ ರಾಜಕೀಯ ಅಸಹನೆಯನ್ನು ಬಹಿರಂಗಪಡಿಸುತ್ತಿದ್ದಾರೆ. ವಿದ್ಯಾರ್ಥಿಗಳ ಹಿತಾಸಕ್ತಿಗಿಂತ ತಮ್ಮ ರಾಜಕೀಯ ಅಜೆಂಡಾಗಳೇ ಇವರಿಗೆ ಮುಖ್ಯವಾಗಿವೆ ಎಂಬುದು ಅತ್ಯಂತ ವಿಷಾದಕರ ಸಂಗತಿ.
ಇಂದು ಸಾವಿರಾರು ವಿದ್ಯಾರ್ಥಿನಿಯರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡು ನಿರ್ಭಯವಾಗಿ ಕಾಲೇಜುಗಳಿಗೆ ತೆರಳಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ಇದನ್ನು ನಿರಾಕರಿಸುವುದು ಅಥವಾ ಕಡಿಮೆ ಮಾಡಿ ಮಾತನಾಡುವುದು ಮಹಿಳಾ ಸಬಲೀಕರಣದ ವಿರುದ್ಧದ ಮನೋಭಾವವನ್ನು ತೋರಿಸುತ್ತದೆ.
ವಿದ್ಯಾರ್ಥಿ ಸಂಘಟನೆಗಳು ಸರ್ಕಾರದ ಉತ್ತಮ ಯೋಜನೆಗಳನ್ನು ಬೆಂಬಲಿಸುವ ಧೈರ್ಯ ಹೊಂದಿರಬೇಕು. ಆದರೆ ಎ.ಬಿ.ವಿ.ಪಿ ಸಂಘಟನೆ ಸದಾ ವಿರೋಧದ ರಾಜಕೀಯವನ್ನೇ ಮಾಡುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ರಾಜಕೀಯ ಪ್ರಚಾರವನ್ನೇ ಮುಖ್ಯವಾಗಿಟ್ಟುಕೊಂಡಿರುವುದು ಸ್ಪಷ್ಟವಾಗಿದೆ.
ಎನ್.ಎಸ್.ಯು.ಐ ಸದಾ ವಿದ್ಯಾರ್ಥಿಗಳ ಹಕ್ಕುಗಳು, ಸೌಲಭ್ಯಗಳು ಹಾಗೂ ಸಮಾನ ಅವಕಾಶಗಳಿಗಾಗಿ ಹೋರಾಡುತ್ತ ಬಂದಿದೆ ಮತ್ತು ಮುಂದೆಯೂ ಈ ಹೋರಾಟವನ್ನು ಮುಂದುವರಿಸಲಿದೆ. ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಒಳಪಡಿಸುವ ಯಾವುದೇ ಸುಳ್ಳು ಆರೋಪಗಳು ಅಥವಾ ರಾಜಕೀಯ ಪ್ರೇರಿತ ಹೇಳಿಕೆಗಳಿಗೆ ನಾವು ಎಂದಿಗೂ ತಲೆಬಾಗುವುದಿಲ್ಲ” ಎಂದು ಎನ್.ಎಸ್.ಯು.ಐ ಸುಳ್ಯ ಇದರ ಕಾರ್ಯದರ್ಶಿ ಧನುರಿತ್ವಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading