Ad Widget

ಐನೆಕಿದು : ನವಗ್ರಾಮ ಸಂಪರ್ಕ ರಸ್ತೆ ಕಾಂಕ್ರೀಟೀಕರಣ ಉದ್ಘಾಟನೆ

ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ನವಗ್ರಾಮ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣವು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ನಿರ್ಮಾಣಗೊಂಡಿದ್ದು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಧನಂಜಯ ಕಾಂಕ್ರೀಟೀಕರಣವನ್ನು ಉದ್ಘಾಟನೆಗೊಳಿಸಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಜೇಶ್.ಎನ್.ಎಸ್, ಐನೆಕಿದು ಭಾಗದ ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ, ಶ್ರೀಮತಿ ಲಲಿತಾ ಗುಂಡಡ್ಕ ಶ್ರೀಮತಿ ಮೋಹಿನಿ ಅಂಗಣ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟೇಶ್ ಹೆಚ್.ಎಲ್, ಶ್ರೀಮತಿ ಭಾರತಿ ದಿನೇಶ್, ಶ್ರೀಮತಿ ದಿವ್ಯ ಯಶೋಧಕೃಷ್ಣ, ಈ ಭಾಗದ ಹಿರಿಯರಾದ ವಿಶ್ವನಾಥ್ ಬಿಳಿಮಲೆ, ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಐನೆಕಿದು ಭಾಜಪ ಶಕ್ತಿ ಕೇಂದ್ರ ಪ್ರಮುಖರಾದ ಜಯಪ್ರಕಾಶ್ ಕೊಜುಗೋಡು, ಬೂತ್ ಸಮಿತಿ ಅಧ್ಯಕ್ಷರಾದ ಯಶವಂತ ಕೊಪ್ಪಳಗದ್ದೆ, ಕಾರ್ಯದರ್ಶಿಅಜಿತ್ ಕಲ್ಲೇರಿ, ಪ್ರಮುಖರಾದ ರಮೇಶ್ ಕೊನಡ್ಕ, ಪ್ರಸಾದ್ ಕೋಡಿಯಡ್ಕ, ಶರತ್ ಕೂಜುಗೋಡು, ವಿನಯ ಅಂಗಣ ಹಾಗೂ ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading