Ad Widget

ಸುಳ್ಯ : 15 ಕಳೆದರೂ ಅಂಬೇಡ್ಕರ್ ಭವನ ಪೂರ್ಣಗೊಳ್ಳದಿರುವುದು ನಾಚಿಕೆಗೇಡು – ಶೀಘ್ರ ಕ್ರಮ  ; ಕುಂದುಕೊರತೆ ಮತ್ತು ಪ್ರಗತಿಪರಿಶೀಲನಾ ಸಭೆಯಲ್ಲಿ ಸಮುದಾಯಗಳ ಅಹವಾಲು ಸ್ವೀಕರಿಸಿ ಮಾತನಾಡಿದ ನಿಗಮ ಅಧ್ಯಕ್ಷೆ ಪಲ್ಲವಿ‌.ಜಿ

15 ವರ್ಷಗಳ ಹಿಂದೆ ಆರಂಭಗೊಂಡ ಅಂಬೇಡ್ಕರ್ ಭವನ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದು ನಾಚಿಕೆಗೀಡು ಎಂದು  ಪ.ಜಾತಿ ಮತ್ತು ಪ.ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.‌

ಅವರು ಸುಳ್ಯದಲ್ಲಿ ನಿಗಮದ ವತಿಯಿಂದ ಕುಂದುಕೊರತೆ ಮತ್ತು ಪ್ರಗತಿಪರಿಶೀಲನಾ ಸಭೆಯಲ್ಲಿ ಸಮುದಾಯಗಳ ಅಹವಾಲು ಸ್ವೀಕರಿಸಿ ಮಾತನಾಡಿದರು. ಅಂಬೇಡ್ಕರ್ ಭವನ ಕಾಮಗಾರಿ ಇಷ್ಟೂ ವರ್ಷದಿಂದ ಪೂರ್ಣಗೊಳ್ಳದಿರುವ ಬಗ್ಗೆ ನಿಮ್ಮ ನೋವು ನನಗೆ ಅರ್ಥವಾಗಿದೆ. ಇದು ನನಗೂ ನೋವಿನ ಸಂಗತಿ.‌ ಇಷ್ಟೂ ವರ್ಷದಿಂದ ನೀವು ಸಹಿಸಿಕೊಂಡದ್ದೇ ತಪ್ಪಾಗಿದೆ. ಅಂಬೇಡ್ಕರ್ ಭವನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅಧ್ಯಕ್ಷರು ಈ ಬಗ್ಗೆ ನಾನು ಸಚಿವರ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸಿ ಶೀಘ್ರ ಅಂಬೇಡ್ಕರ್ ಭವನ ಉದ್ಘಾಟನೆಗೆ ಕ್ರಮ ವಹಿಸುತ್ತೇನೆ ಎಂದರು

ಸಭೆ ಬಳಿಕ ಸುಬ್ರಹ್ಮಣ್ಯಕ್ಕೆ ಕಾರ್ಯಕ್ರಮ ರದ್ದುಗೊಳಿಸಿ ಅಂಬೇಡ್ಕರ್ ಭವನವೇ ನಮಗೆ ದೇವಸ್ಥಾನ ಅದರ ಕಾಮಗಾರಿ ವೀಕ್ಷಿಸಿ ತೆರಳಲು ತೀರ್ಮಾನಿಸಿದರು.

ಸಭೆಯಲ್ಲಿ ಪ್ರಮುಖವಾಗಿ ಮೂಲಜನಾಂಗ ಮಲೆ ಕುಡಿಯರಿಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಸ್ಥಾನಮಾನ ನೀಡಬೇಕು, ಡೀಮ್ಡ್ ಫಾರೆಸ್ಟ್ ನಿಂದಾಗಿ ಸಮದಾಯದವರಿಗೆ  ತೊಂದರೆ ಆಗಿರುವ ಬಗ್ಗೆ, ಬಾಳುಗೋಡಿನಲ್ಲಿ ಮಲೆ ಕುಡಿಯ ಸಮುದಾಯದ 13 ಮನೆಗಳಿಗೆ ರಸ್ತೆ ಸಮಸ್ಯೆ, ಅಕ್ರಮ ಸಕ್ರಮ ಮಂಜೂರಾತಿಯಾಗದಿರುವ ಬಗ್ಗೆ, ಆಲೆಟ್ಟಿ ಗ್ರಾಮದ ಮಾಣಿಮರ್ದು ಪ.ಪಂಗಡದ ನಿವಾಸಿಗಳಿಗೆ ವಿದ್ಯುತ್ ಹಾಗೂ ರಸ್ತೆ ಸಮಸ್ಯೆ ಬಗ್ಗೆ, ಅಂಬೇಡ್ಕರ್ ಭವನ ಕಾಮಗಾರಿ ಬಗ್ಗೆ, ಪಂಜ ಆಶ್ರಮ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸೊಳ್ಳೆ ಕಾಟದ ಬಗ್ಗೆ , ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಸುಳ್ಯ ನಗರದಲ್ಲಿರುವ ಕೊರಗ ಸಮದಾಯದ ಎರಡು  ಮನೆಗಳಿಗೆ ಶೌಚಾಲಯ ನಿರ್ಮಿಸುವ ಬಗ್ಗೆ, 2017 ರಲ್ಲಿ ತಾಲೂಕಿನ  ಒಟ್ಟು 7 ಕಡೆಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾತ್ರ ಮಾಡಿರುವ ಬಗ್ಗೆ ನಂದರಾಜ್ ಸಂಕೇಸ, ಸೀತರಾಮ ಬಾಳುಗೋಡು, ಶಶಿಧರ ಎಂ.ಜೆ., ಚಂದ್ರಶೇಖರ ಪಲ್ಲತ್ತಡ್ಕ, ಧರ್ಮಪಾಲ ಕೊಯಿಂಗಾಜೆ, ಚೇತನ್ ಕಜೆಗದ್ದೆ ಅಹವಾಲು ತೋಡಿಕೊಂಡರು.

ಈ ಎಲ್ಲಾ ಸಮಸ್ಯೆಗಳಿಗೆ ಅಧಿಕಾರಿಗಳು ವರದಿ ನೀಡುವಂತೆ ತಿಳಿಸಿದರು. ನಮ್ಮ ಸಮುದಾಯದ ಜನರಿಗೆ ಶಿಕ್ಷಣ ಕಡಿಮೆ ಇದೆ. ಅಧಿಕಾರಿಗಳೇ ಅವರ ಬಳಿಗೆ ತೆರಳಿ ಸವಲತ್ತು ಒದಗಿಸಬೇಕು. ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು.  ನಮ್ಮಲ್ಲಿ ಅನುದಾನದ ಕೊರತೆ ಇಲ್ಲ ಎಸ್ಟೀಮೇಟ್ ಮಾಡಿ ಗ್ರಾಮಸಭೆಯಲ್ಲಿ ಅನುಮೋದನೆ ಮಾಡಿ ಕಳುಹಿಸಿ, ಸಭೆಯಲ್ಲಿ ಪ್ರಸ್ತಾಪವಾದ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು, ಸ್ಥಳಕ್ಕೆ ಬೇಟಿ ನೀಡಿ ಪರೀಶೀಲಿಸಿಬೇಕು ಹಾಗೂ ಯಾವ ಆಗುವುದಿಲ್ಲ ಎಂಬ ಬಗ್ಗೆ ಯಾವ ಸಮಸ್ಯೆ ಇದೆ ಎಂದು  ಹಿಂಬರಹ ನೀಡಬೇಕು ಎಂದು ಸೂಚಿಸಿದರು. ಅಂಬೇಡ್ಕರ್ ಭವನಕ್ಕೆ ಸ್ಥಳ ಗುರುತಿಸದೇ ವಿವಿಧೆಡೆ ಶಂಕುಸ್ಥಾಪನೆ ಮಾಡಿರುವ ಬಗ್ಗೆ ಪರಿಶೀಲಿಸಿ ವರದಿ ಕೊಡಿ ದಿಕ್ಕು ತಪ್ಪಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.‌ ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮಸ್ಯೆಗಳ ಬಗ್ಗೆ ಬೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.

ಅರಣ್ಯದ ಮಧ್ಯೆ ಇರುವ ರಸ್ತೆ ಅಭಿವೃದ್ಧಿಗೆ ಅನುಮತಿ ಪಡೆಯಲು ಆನ್ ಲೈನ್ ಅರ್ಜಿ ಸಲ್ಲಿಸುವ ಬಗ್ಗೆ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು. ಆದರೇ ಇಲ್ಲಿವರೆಗೆ ತಾಲೂಕಿನಲ್ಲಿ ಎಲ್ಲಿ ಕೂಡ ಅರಣ್ಯ ಇಲಾಖೆ ಅನುಮತಿ ನೀಡಿದ ಉದಾಹರಣೆ ಇಲ್ಲ ಎಂದು ಭರತ್ ಮುಂಡೋಡಿ ಯವರು ಅಧ್ಯಕ್ಷರಿಗೆ ತಿಳಿಸಿದರು.

ಸಭೆಯಲ್ಲಿ ಅನಂತಕುಮಾರ್ ಏಕಲವ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ತಹಶೀಲ್ದಾರ್ ಮಂಜುಳಾ ಜಿ., ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್, ಮಹೇಶ್ ಬೆಳ್ಳಾರ್ಕರ್  ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading