Ad Widget

ಸುಳ್ಯ ಶಾಸಕರಿಗೆ ಸಾಮಾಜಿಕ ಜಾಲತಾಣ ದಲ್ಲಿ ಅವಮಾನ – ಮಂಡಲ ಬಿಜೆಪಿ ಖಂಡನೆ, ಪ್ರತಿಭಟನೆಯ ಎಚ್ಚರಿಕೆ

ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ರವರನ್ನು ಬಿಲ್ಲವ ಸಂದೇಶ್ ಎನ್ನುವ ಫೇಸ್ಬುಕ್ ಖಾತೆಯಲ್ಲಿ ತೀರಾ ಅವಮಾನಕರವಾಗಿ ಬರೆದು ಶ್ರದ್ದಾಂಜಲಿ ಸಲ್ಲಿಸಿರುವುದನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ಸುಳ್ಯ ಮಂಡಲ ಬಿಜೆಪಿ ಯು ಖಂಡಿಸಿದೆ.

. . . . . . . . .

ಸುಳ್ಯದ ಶಾಸಕರಾದ ಕು ಭಾಗೀರಥಿ ಮುರುಳ್ಯರವರು ಅತ್ಯಂತ ಕಡು ಬಡ ಕುಟುಂಬದಿಂದ ಬಂದವರಾಗಿದ್ದು ತಮ್ಮ ಸಂಘಟನಾ ಬದ್ಧತೆ ಹಾಗೂ ಕ್ರಿಯಾಶೀಲತೆಯಿಂದ ತಾಲೂಕು ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ ಜನಸೇವೆ ಸಲ್ಲಿಸಿ ಇದೀಗ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಶಾಸಕರಾಗಿ ಆಯ್ಕೆಯಾದ ದಿನದಿಂದ ನಿರಂತರವಾಗಿ ಕ್ಷೇತ್ರದಲ್ಲಿ ಓಡಾಡುತ್ತ, ವಿರೋಧ ಪಕ್ಷದ ಸದಸ್ಯರಾಗಿದ್ದರೂ, ಸಚಿವರುಗಳಿಗೆ ಮನವಿ ಸಲ್ಲಿಸಿ, ಬೆನ್ನು ಹಿಡಿದು ಓಡಾಡಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ನಿರಂತರ ಪ್ರಯತ್ನ ಪಡುತ್ತಿದ್ದಾರೆ. ದಲಿತರ ಸಮಸ್ಯೆಗಳಿಗೆ ನಿರಂತರ ಸ್ಪಂದಿಸುತ್ತಿದ್ದು, ಸುಳ್ಯದ ಅಂಬೇಡ್ಕರ್ ಭವನ ಪೂರ್ಣಗೊಳಿಸುವಲ್ಲಿಯೂ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

. . . . . . .

ಹೀಗಿರುವಾಗ ಯಾವುದೊ ವೈಯುಕ್ತಿಕ ತೀಟೆಗೋಸ್ಕರ ದಲಿತ ಶಾಸಕಿಯನ್ನು ಹಾಗೂ ನಮ್ಮ ಪಾರ್ಟಿಯನ್ನು ಅವಮಾನಿಸುವ ಹೀನ ಮನಃ ಪ್ರವೃತ್ತಿ ಯಿಂದ ಸಾಮಾಜಿಕ ಜಾಲತಾಣ ದಲ್ಲಿ ಈ ರೀತಿ ಬರೆಯುವ ಕೆಲಸವನ್ನು ಮಾಡಲಾಗುತ್ತಿದೆ. ದ ಕ ಜಿಲ್ಲೆಯ ಪೊಲೀಸ್ ಮುಖ್ಯಸ್ಥರು ಈ ಕುರಿತು ಕೂಡಲೇ ಕ್ರಮವಹಿಸಿ, ಸದ್ರಿ ವ್ಯಕ್ತಿಯ ಮೇಲೆ ಸುಮೊಟೊ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿ ಜೈಲಿಗಟ್ಟುವ ಕೆಲಸ ಮಾಡಬೇಕು ಎಂದು ಮಂಡಲ ಬಿಜೆಪಿ ಅಗ್ರಹಿಸುತ್ತದೆ.

ಇಂತಹ ರೋಗಗ್ರಸ್ತ ಮಾನಸಿಕತೆಯ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪಾರ್ಟಿ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading