Ad Widget

ಸುಳ್ಯ : ಶಾಸಕರಿಗೆ ಅವಹೇಳನ – ಬಿ.ಜೆ.ಪಿ. ಎಸ್ಸಿ ಮೋರ್ಚಾ ವತಿಯಿಂದ ತಹಶೀಲ್ದಾರ್ ಹಾಗೂ ಠಾಣಾಧಿಕಾರಿಗಳಿಗೆ ದೂರು


ಸುಳ್ಯ ತಾಲೂಕು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಚುನಾಯಿತರಾಗಿರುವ ಶಾಸಕಿ ಆಗಿರುವ ಕು.ಭಾಗೀರಥಿ ಮುರುಳ್ಯರವರ ಕುರಿತು ಬಿಲ್ಲವ ಸಂದೇಶ್ ಎಂಬ ಹೆಸರಿನ ಪೇಸ್ಟುಕ್ ಖಾತೆಯಲ್ಲಿ ದಲಿತ ಸಮುದಾಯದ ಸುಳ್ಯ ಶಾಸಕರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಎಂದು ಹಾಕಿದ್ದಾರೆ. ಅವಹೇಳನ ಮಾಡಿದ ಬಿಲ್ಲವ ಸಂದೇಶ್ ಎಂಬ ವ್ಯಕ್ತಿಯನ್ನು ದಲಿತ ದೌರ್ಜನ್ಯ (Atrocity Case) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬಿ.ಜೆ.ಪಿ. ಎಸ್ಸಿ ಮೋರ್ಚಾ ವತಿಯಿಂದ ಸುಳ್ಯ ತಹಶೀಲ್ದಾರ್ ಹಾಗೂ ಠಾಣಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಿ.ಜೆ.ಪಿ. ಎಸ್ಸಿ ಮೋರ್ಚಾ ಅಧ್ಯಕ್ಷ ವಿಜಯ ಆಲಡ್ಕ, ಉಪಾಧ್ಯಕ್ಷ ಶಂಕರ್ ಪೆರಾಜೆ ಜಿಲ್ಲಾಬಿ.ಜೆ.ಪಿ. ಎಸ್.ಸಿ ಮೋರ್ಚಾ, ಜಿಲ್ಲಾ ಬಿ.ಜೆ.ಪಿ. ಕಾರ್ಯಕಾರಿಣಿ ಸದಸ್ಯ ಚನಿಯ ಕಲ್ಪಡ್ಕ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading