Ad Widget

ಶಾಸಕರ ವಿರುದ್ದ ಅವಮಾನಕರ ಪೋಸ್ಟ್  ಅವರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ

. . . . . . . . .

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ‘ಬಿಲ್ಲವ ಸಂದೇಶ್’ ಎನ್ನುವ ಫೇಸ್ಟುಕ್ ಖಾತೆಯಲ್ಲಿ ತೀರಾ ಅವಮಾನಕರವಾಗಿ ಬರೆದು ಶ್ರದ್ಧಾಂಜಲಿ ಸಲ್ಲಿಸಿರುವುದನ್ನು ಅತ್ಯಂತ ಖಂಡನೀಯವಾಗಿದೆ. ಇದು ಆತನ ಮನಸ್ಥಿತಿಯನ್ನು ಬಿಚ್ಚಿಟ್ಟಿದ್ದು ಸಾಧ್ಯವಾದರೆ ಸೈದ್ಧಾಂತಿಕವಾಗಿ ಚರ್ಚೆಗೆ ಬರಲಿ ಅದು ಬಿಟ್ಟು ಹೇಡಿಗಳಂತೆ ಆಡಗಿ ಕುಳಿತು ಈ ರೀತಿಯ ಪೋಸ್ಟ್ ಮಾಡಿ ಹಿಟ್& ರನ್ ಮಾಡುವುದು ಶೋಭೆಯಲ್ಲ ಎಂದು ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಕೋಷ್ಠ ಸುಳ್ಯ ಮಂಡಲ ಪರವಾಗಿ ದ.ಕ ಜಿಲ್ಲಾ ಸಾಮಾಜಿಕ ಜಾಲಾತಾಣ ಪ್ರಕೋಷ್ಠದ ಸದಸ್ಯ ಪ್ರಸಾದ್ ಕಾಟೂರು ಖಂಡಿಸಿದ್ದಾರೆ‌.

. . . . . . .

ಸುಳ್ಯ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ಆಯ್ಕೆಯಾದ ದಿನದಿಂದ ನಿರಂತರವಾಗಿ ಕ್ಷೇತ್ರದಲ್ಲಿ ಓಡಾಡುತ್ತ, ಸಚಿವರಿಗೆ ಮನವಿ ಸಲ್ಲಿಸಿ, ಬೆನ್ನು ಹಿಡಿದು ಓಡಾಡಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ನಿರಂತರ ಪ್ರಯತ್ನ ಪಡುತ್ತಿದ್ದಾರೆ. ಸಮಸ್ಯೆಗಳಿಗೆ ನಿರಂತರ ಸ್ಪಂದಿಸುತ್ತಿದ್ದು ಅಧಿಕಾರಿಗಳನ್ನು ಕಛೇರಿಗೆ ಕರೆಸಿ ಕಾನೂನು ರೀತಿಯಲ್ಲಿ ದಲಿತರ ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ಕೊಡುತ್ತಿದ್ದಾರೆ.ಸುಳ್ಯದ ಅಂಬೇಡ್ಕರ್ ಭವನ ಪೂರ್ಣಗೊಳಿಸುವಲ್ಲಿಯೂ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ದಲಿತ ಶಾಸಕರನ್ನು ಹಾಗೂ ಬಿಜೆಪಿಯನ್ನು ಅವಮಾನಿಸುವ ಹೀನ ಮನೋ ಪ್ರವೃತ್ತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಹೀಯಾಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕೂಡಲೇ ಕ್ರಮ ವಹಿಸಿ, ಸದ್ರಿ ವ್ಯಕ್ತಿಯ ಮೇಲೆ ನೂತನ ಕಾಯ್ದೆ ದ್ವೇಷ ಭಾಷಣ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿ ಜೈಲಿಗಟ್ಟುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading