Ad Widget

“ಕೇಂದ್ರದ ಬಿಜೆಪಿ ಸರ್ಕಾರ ಗ್ರಾಮೀಣ ಭಾಗದ ರೈತರ  ಮತ್ತು ಗ್ರಾಮಗಳ ಅಂತ್ಯದ ಕನಸು ಕಾಣುತ್ತಿದೆ” ; “ನರೇಗಾ ಯೋಜನೆ ಹೆಸರು ಬದಲಾಯಿಸಿ ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆಗೆ ಬಿಜೆಪಿ  ತಡೆಯೊಡ್ಡಿದೆ” ; “ಬಿಜೆಪಿಯ ವಿ.ಬಿ ರಾಂಜೀ ಕಾಯ್ದೆ ಕಾರ್ಮಿಕ ವರ್ಗ ಹಾಗೂ ಗ್ರಾಮಗಳ ಅಭಿವೃದ್ಧಿಗೆ  ಹೊಡೆತ ಕೊಡಲಿದೆ” – ಕಾರ್ಮಿಕ ಮುಖಂಡ ಕೆ.ಪಿ. ಜಾನಿ ಅವರಿಂದ ಪತ್ರಿಕಾಗೋಷ್ಠಿ

“ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷವು ಸಂಶೋದನೆ ಮಾಡಿ ಕಂಡುಕೊಂಡ ಮಹಾತ್ಮ ಗಾಂಧಿಯವರ ರಾಮರಾಜ್ಯದ ಪರಿಕಲ್ಪನೆಗೆ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ತಡೆಯೊಡ್ಡಿದ್ದು, ಕೃಷಿಕೂಲಿ ಕಾರ್ಮಿಕರನ್ನು ಮತ್ತು ಕಟ್ಟಡ ಕಾರ್ಮಿಕ ವರ್ಗ ಹಾಗೂ ಗ್ರಾಮೀಣ ಭಾಗದ ಬಡ ರೈತರ ಮತ್ತು ಗ್ರಾಮಗಳ ಅತ್ಯದ ಕನಸು ಕಾಣುತ್ತಿದೆ. ಈ ಮೂಲಕ ಬಿಜೆಪಿ ತಂದಿರುವ ವಿ.ಬಿ ರಾಂಜೀ ಕಾಯ್ದೆ ನೇರವಾಗಿ ಕಾರ್ಮಿಕ ವರ್ಗ ಮತ್ತು ಗ್ರಾಮಗಳ ಅಭಿವೃದ್ಧಿಗೆ, ದೀನ ದಲಿತರಿಗೆ ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ ದೊಡ್ಡ ಹೊಡೆತ ನೀಡಿದೆ” ಎಂದು ಕಾರ್ಮಿಕ ಮುಖಂಡ ಕೆ.ಪಿ. ಜಾನಿ ಅವರು ಜ.6ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆ.ಪಿ. ಜಾನಿ ಅವರು “ಕೇಂದ್ರದ ಬಿಜೆಪಿ ಸರ್ಕಾರದ ಕಳೆದ 11 ವರ್ಷದ ಆಡಳಿತ ಸಂಪೂರ್ಣ ವಿಫಲವಾಗಿದ್ದು, ಕೇವಲ ಕೋಮುವಾದದ ಮೂಲಕ ದ್ವೇಷ ಬಿತ್ತಿ ರಾಷ್ಡ್ರಪ್ರೇಮದ ಹೆಸರಿನಲ್ಲಿ ಒಂದುಗೂಡಿಸಬೇಕಾಗಿದ್ದ ಭಾರತೀಯರ ಮಧ್ಯೆ ಜಾತಿ – ಧರ್ಮದ ಹೆಸರಿನಲ್ಲಿ ಗುಂಪುಗೂಡುವಂತೆ ಮಾಡುತ್ತಿದೆ. ಈ ಮೂಲಕ ಭಾರತೀಯರ ಮಧ್ಯೆ ಕಂದಕ ಹೆಚ್ಚು ಮಾಡಿ ದೇಶ ಮತ್ಯಾವತ್ತೂ ಮೇಲೇಳದಂತೆ ಸಾಲದಲ್ಲಿ ಮುಳುಗಿಸಿದ್ದು, ಅನಿಯಮಿತ ಬೆಲೆ ಏರಿಕೆಯ ಸಾಧನೆ ಮಾಡಿದೆ. ಅಲ್ಲದೇ 54 ಲಕ್ಷ ಕೋಟಿ ಇದ್ದ ಸಾಲವನ್ನು 200 ಕೋಟಿ ಲಕ್ಷ ಕೋಟಿಗೆ ಏರಿಸಿದೆ” ಎಂದು ಹೇಳಿದರು.

“ಮಹಾತ್ಮ ಗಾಂಧೀಜಿಯವರು ಕನಸು ಕಂಡ ರಾಮರಾಜ್ಯ ಪರಿಕಲ್ಪನೆಯ ಭಾರತದ ಆತ್ಮ ಗ್ರಾಮಗಳಲ್ಲಿ ಅಡಕವಾಗಿದೆ. ಗ್ರಾಮ ಅಭಿವೃದ್ಧಿಗೊಂಸರೆ ರಾಷ್ಟ್ರ ಅಭಿವೃದ್ಧಿಗೊಂಡಂತೆ ಎಂಬ ಗಾಂದೀಜಿಯವರ ಹೇಳಿಕೆಗೆ ಬಿಜೆಪಿ ಅಡ್ಡಿ ಮಾಡಿದೆ.  ಕಾಂಗ್ರೆಸ್  ಸಂಶೋಧನೆ ಮಾಡಿ ಕಂಡುಕೊಂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ವಿ.ಬಿ ರಾಂಜೀ ಎಂದು ಬದಲಾಯಿಸಿ ದ್ವೇಷದ ರಾಜಕೀಯ ಮಾಡುತ್ತಿದೆ” ಎಂದು ಹೇಳಿದರು. 

“ಬಿಜೆಪಿಯವರಿಗೆ ಬಡವರ ಉದ್ಧಾರ ಆಗಬಾರದು. ಬದಲಾಗಿ ಅಂಬಾನಿ – ಅದಾನಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಇಡೀ ದೇಶದ ಜನಸಂಖ್ಯೆಯಲ್ಲಿನ ಕೇವಲ ಒಂದು ಶೇಕಡಾ ಇರುವ ಉದ್ಯಮಪತಿಗಳ ಮಾತ್ರ ಉದಯಕ್ಕಾಗಿ ಕೆಲಸ ಮಾಡುತ್ತಿರುವ ಕಾರಣ ಸರ್ವೇ ಜನ ಸುಖಿನೋಭವಂತು ಎನ್ನುವ ಆಶಯಕ್ಕೆ ಬಿಜೆಪಿ ವಿರುದ್ಧವಾಗಿದೆ. ಈ ಆಶಯವನ್ನು ದೇಶದಲ್ಲಿ ಮಾತ್ರವಲ್ಲ ದೇಶದ ಜನರ ಹೃದಯದಲ್ಲೂ ಅಳವಡಿಸಬೇಕೆಂದು ಬಯಸಿದ ಗಾಂಧಿಯವರ ನೆನಪುಗಳನ್ನು ಅಳಿಸಿ ಹಾಕುವ ತಂತ್ರಕ್ಕೆ ಬಿಜೆಪಿ ಮುಂದಾಗಿದ್ದು, ನರೇಗಾ ಯೋಜನೆಯಿಂದ ಗಾಂಧಿಯವರ ಹೆಸರನ್ನು ತೆಗೆದಿದ್ದಾರೆ. 
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರು ವಿ.ಬಿ ರಾಂಜೀ ಕಾಯ್ದೆ ಜಾರಿಗೆ ತರುವ ವೇಳೆ ರಾಜ್ಯ ಸರ್ಕಾರಗಳ ಅಭಿಪ್ರಾಯಗಳನ್ನೂ ಕೇಳಿಲ್ಲ. ನೇರವಾಗಿ ಹೊಸ ಕಾಯ್ದೆ ಜಾರಿಗೊಳಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದೆ” ಎಂದು ಕೆ.ಪಿ. ಜಾನಿ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ   ಜ್ಞಾನಶೀಲನ್ ರಾಜು, ಮಂಜುನಾಥ ಕಂದಡ್ಕ, ಲಲನ ಕೆ.ಆರ್, ಮಂಜುನಾಥ ಮಡ್ತಿಲ, ಪ್ರಮೀಳ ಪೆಲ್ತಡ್ಕ, ನಾಗಮುತ್ತು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading