Ad Widget

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ನಕ್ಷತ್ರದಂದು 1,400 ಆಶ್ಲೇಷ ಬಲಿ ಸೇವೆ

ಸುಬ್ರಹ್ಮಣ್ಯ ಜನವರಿ 6 : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರವಾದ ಜ.06ರಂದು ದಾಖಲೆಯ 1,400 ಆಶ್ಲೇಷ ಬಲಿ ಸೇವೆಗಳು ನಡೆದವು. ಸುಬ್ರಹ್ಮಣ್ಯನಿಗೆ ಮಂಗಳವಾರ ವಿಶೇಷ ದಿನವೂ ಆಗಿದ್ದರಿಂದ ಆಶ್ಲೇಷ ನಕ್ಷತ್ರವು ಈ ದಿನವೇ ಬಂದಿದ್ದರಿಂದ ಅಧಿಕ ಸಂಖ್ಯೆಯಲ್ಲಿ ವಿವಿಧ ಭಾಗಗಳಿಂದ ಭಕ್ತರು ಸೇವೆಗಾಗಿ ಶ್ರೀ ಕ್ಷೇತ್ರಕ್ಕೆ ನಿನ್ನೆಯಿಂದಲೇ ಆಗಮಿಸುತ್ತಿದ್ದರು. ಬೆಳಗ್ಗೆ 6:30ಕ್ಕೆ ಆರಂಭವಾದ ಆಶ್ಲೇಷ ಬಲಿ ಸೇವೆ ನಿರಂತರವಾಗಿ ನಾಲ್ಕು ಐದು ಬ್ಯಾಚ್ ಗಳಲ್ಲಿ 11 ಗಂಟೆಯವರೆಗೆ ನಡೆಯಿತು. ಹಾಗೆಯೇ ಸಂಜೆ 5:00 ಗಂಟೆಯ ನಂತರ ಮತ್ತೊಂದು ಬ್ಯಾಚ್ ನಲ್ಲಿ ಆಶ್ಲೇಷ ಬಲಿ ಸೇವೆ ನಡೆಯಿತು.
ಕುಕ್ಕೆ ಕ್ಷೇತ್ರದ ಒಳಾಂಗಣ, ಹೊರಾಂಗಣ, ರಥಬೀದಿ ಹಾಗೂ ಎಲ್ಲೆಡೆಗಳಲ್ಲಿ ಭಕ್ತರು ತುಂಬಿದ್ದರು. ವಾಹನ ಪಾರ್ಕಿಂಗ್ ಸ್ಥಳಗಳೆಲ್ಲವೂ ವಾಹನಗಳಿಂದ ಪೂರ್ತಿಯಾಗಿತ್ತು.
ಶ್ರೀ ದೇವಳದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಭದ್ರತಾ ಸಿಬ್ಬಂದಿಗಳು, ಹೋಂ-ಗಾರ್ಡ್ಸ್ ಹಾಗೂ ಪೊಲೀಸ್ ಇಲಾಖೆ ಕ್ಷೇತ್ರಕ್ಕೆ ಬಂದಿರುವ ಭಕ್ತರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಶ್ರಮಿಸುತ್ತಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading