Ad Widget

ಬಸ್ ರೂಟ್ ಕಡಿತ – ಎಬಿವಿಪಿ ಪ್ರತಿಭಟನೆ – ವಾರದೊಳಗೆ ಸರಿಪಡಿಸದಿದ್ದರೇ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಸುಳ್ಯದಿಂದ ಬಾಳುಗೋಡು, ಮರ್ಕಂಜ, ಪೇರಾಲು , ಉಬರಡ್ಕ- ಮಡಪ್ಪಾಡಿ ರೂಟ್ ನ ಬಸ್ ಗಳ ಸಂಚಾರ ಕಡಿತ ಹಾಗೂ ಇತರೆಡೆ ಬಸ್ ಇಲ್ಲದೇ ವಿದ್ಯಾರ್ಥಿಗಳಿಗಾಗುವ ಸಮಸ್ಯೆಗಳಿಂದ ಬೇಸತ್ತ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ಬದಲ್ಲಿ ಸುಳ್ಯ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣದಲ್ಲಿ ಜ.03 ರಂದು ಪ್ರತಿಭಟನೆ ನಡೆಸಿದರು. ವಿವಿಧ ಬೇಡಿಕೆಗಳನ್ನು ವಾರದೊಳಗೆ ಅಧಿಕಾರಿಗಳು ಸರಿಪಡಿಸದಿದ್ದರೇ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

. . . . . . . . .

ಪ್ರತಿಭಟನೆಯಲ್ಲಿ ಪ್ರಾಂತ ವಿದ್ಯಾರ್ಥಿನಿ ಪ್ರಮುಖ್ ಅಮೃತಾಂಬ, ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ಘಟಕದ ಅಧ್ಯಕ್ಷ ಸಾತ್ವಿಕ್ ಮುಳಿಯ, ನಗರ ಕಾರ್ಯದರ್ಶಿ ಪುನೀತ್, ಹೋರಾಟ ಪ್ರಮುಖ್ ಮನ್ವಿತ್, ಕೀರ್ತನ್, ಪ್ರೀತೇಶ್, ಶ್ರೀಶರಣ್, ಅಮಿತ್ ಸೇರಿದಂತೆ 100 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಿಪೋ ಮ್ಯಾನೇಜರ್ ಸತ್ಯಲತಾ ಅವರು ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading