Ad Widget

ಫೆ.15 ಮತ್ತು 22 ರಂದು ಪಡ್ಡಂಬೈಲ್ ಕಪ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಅಜ್ಜಾವರ ಗ್ರಾಮದ ಪಡ್ಡಂಬೈಲ್ ಕುಟುಂಬಸ್ಥರ ನೇತೃತ್ವದಲ್ಲಿ ಫೆಬ್ರವರಿ 15 ಮತ್ತು 22 ರಂದು ಗೌಡ ಸಮುದಾಯ ಭವನ ಕೊಡಿಯಾಲಬೈಲು ಸುಳ್ಯ ಇದರ ಕ್ರೀಡಾಂಗಣದಲ್ಲಿ 32 ತಂಡಗಳ ಗೌಡ ಕುಟುಂಬಗಳ ಓವರ್ ಆರ್ಮ್ ಕ್ರಿಕೆಟನ್ನು ನಡೆಯಲಿದೆ.

ಪ್ರಥಮ ಬಹುಮಾನವಾಗಿ ರೂ. 30,000 ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 20,000 ನಗದು ಮತ್ತು ಆಕರ್ಷಕ ಟ್ರೋಫಿ, ತೃತೀಯ ಮತ್ತು ಚತುರ್ಥ ತಂಡಗಳಿಗೆ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು.

ಪಂದ್ಯ ಪುರುಷ, ಸರಣಿ ಪುರುಷ, ಅತ್ಯುತ್ತಮ ಬ್ಯಾಟ್ಸ್‌ಮನ್, ಅತ್ಯುತ್ತಮ ಬೌಲರ್, ಅತ್ಯುತ್ತಮ ಮಹಿಳಾ ಆಟಗಾರ್ತಿ, ಉದಯೋನ್ಮುಖ ಆಟಗಾರ ಮತ್ತು ಅತ್ಯಂತ ಶಿಸ್ತಿನ ತಂಡಕ್ಕೆ ವೈಯಕ್ತಿಕ ಬಹುಮಾನಗಳಿವೆ ಎಂದು ಕ್ರೀಡಾ ಸಂಚಾಲಕರು ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ  ಲೋಕೇಶ್ ಪಡ್ದಂಬೈಲ್ ಮೋ:+91 94805 94371 ಇವರನ್ನು ಸಂಪರ್ಕಿಸಬಹುದು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading