Ad Widget

ಮೋಹನ ಗೌಡ ನೇರ್ಪು ನಿಧನ

ಗುತ್ತಿಗಾರು ಗ್ರಾಮದ ಪೈಕ ನೇರ್ಪು ಮೋಹನ ಗೌಡ ಡಿ.17 ರಂದು ನಿಧನರಾದರು. ಮೃತರು  ಸಹೋದರ ಲೋಕಯ್ಯ ಗೌಡ ನೇರ್ಪು, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಸುಳ್ಯದ ಬಾಲ ಪ್ರತಿಭೆ ಅಶ್ವಿಜ್ ಅತ್ರೇಯ ಮಡಿಲಿಗೆ “ಕಾರಂತ ಬಾಲ ಪುರಸ್ಕಾರ”

ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರವನ್ನು ಸುಳ್ಯದ ಬಹುಮುಖ ಪ್ರತಿಭೆ ಅಶ್ವಿಜ್ ಅತ್ರೇಯ ಸುಳ್ಯ  ಪಡೆದುಕೊಂಡಿದ್ದಾರೆ.ಇದೇ ನವಂಬರ್ 30 ರಂದು ನಡೆದಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ವತಿಯಿಂದ ನೀಡುವ ಐದನೇ ವರ್ಷದ ಡಾ. “ಶಿವರಾಮ ಕಾರಂತ ಬಾಲ ಪುರಸ್ಕಾರ”ವನ್ನು ಸುಳ್ಯದ ಬಹುಮುಖ ಪ್ರತಿಭೆಯಾದ ಬಾಲನಟ ಬಾಲ ಗಾಯಕ ಅಶ್ವಿಜ್ ಅತ್ರೇಯ ಸುಳ್ಯ...
Ad Widget

ಚೊಕ್ಕಾಡಿ ಮಯೂರಿ ಯುವತಿ ಮಂಡಲದ ವತಿಯಿಂದ ಅಮರಪಡ್ನೂರು ಗ್ರಾಮದ ಅಂಗಡಿಗಳಿಗೆ ಸ್ವಚ್ಚತಾ ಜಾಗೃತಿ ಕರಪತ್ರ ವಿತರಣೆ

ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ (ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪಂಚಸಪ್ತತಿ ಸ್ವಚ್ಛತಾ ಅಭಿಯಾನ – 2025 ಕಾರ್ಯಕ್ರಮದ ಅಂಗವಾಗಿ ದಿನಾಂಕ ಡಿ.08ರಂದು ಅಮರಪಡ್ನೂರು ಗ್ರಾಮದ ಅಂಗಡಿಗಳಿಗೆ ಸ್ವಚ್ಛತೆಗೆ ಸಂಬಂಧಿಸಿದ ಜಾಗೃತಿ ಕರಪತ್ರಗಳನ್ನು ಹಂಚಲಾಯಿತು.ಈ ಸಂದರ್ಭದಲ್ಲಿ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರಿಗೆ ಸ್ವಚ್ಛತೆಯ ಮಹತ್ವವನ್ನು ವಿವರಿಸಿ,...

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 22ನೇ ಸ್ಥಾನ ಪಡೆದ ಹರ್ಷಿತಾ ಕೆ. ತಡಗಜೆ

ಕೆ -ಸೆಟ್(ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ) 2025 ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಬೆಳ್ಳಾರೆ ತಡಗಜೆ ಹರ್ಷಿತಾ ಕೆ ಇವರು ಶಿಕ್ಷಣ (Education) ವಿಷಯದಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ರಾಜ್ಯಕ್ಕೆ 22ನೇ ಸ್ಥಾನ ಪಡೆದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆದಿರುತ್ತಾರೆ.ದಿನಾಂಕ 29,30 ಮೇ 2025 ರಂದು ಕರ್ನಾಟಕ ರಾಜ್ಯ...

ಡಿ.30: ಚೊಕ್ಕಾಡಿಯಲ್ಲಿ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ ಸಮ್ಮೇಳನದ ಸ್ವಾಗತ ಸಮಿತಿ ಕುಕ್ಕುಜಡ್ಕ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನವು ಚೊಕ್ಕಾಡಿಯ ಡಾ. ಪೈಲೂರು ಗೋಪಾಲಕೃಷ್ಣ ವೇದಿಕೆಯ ಅಬಸಮ ಸಭಾಂಗಣದಲ್ಲಿ ಡಿ.30ರಂದು ನಡೆಯಲಿದೆ ಎಂದು ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ...

ಮೇದಿನಡ್ಕ ಧನುರ್ಮಾಸ ಭಜನಾ ಸಂಕೀರ್ತನೆ

ಅಜ್ಜಾವರ : ಮೇದಿನಡ್ಕ ಶ್ರೀ ರಾಮ ಭಜನಾ ಮಂದಿರದಲ್ಲಿ ಸುಮಾರು 40 ವರ್ಷಗಳಿಂದ ನಡೆಸಿಕೊಂಡು ಬಂದ ಮನೆ ಮನೆ ಭಜನಾ ಸಂಕೀರ್ತನೆಯು ಇಂದು ಶ್ರೀ ಮಹಾಗಣಪತಿ ಹೋಮದೊಂದಿಗೆ ಚಾಲನೆ ನೀಡಲಾಯಿತು. ಪೂಜಾ ವಿಧಿ ವಿಧಾನಗಳನ್ನು ಗಣೇಶ್ ಭಟ್ ಸುಳ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಊರ ಭಕ್ತವೃಂದ...

ಡಿ.29ರಂದು ಗುತ್ತಿಗಾರಿನಲ್ಲಿ ಆಸರೆ ಇಲೆಕ್ಟ್ರಾನಿಕ್ಸ್ ಹಾಗೂ ಹೋಂ ಅಪ್ಲೆಯನ್ಸ್‌ಸ್ ಶುಭಾರಂಭ

ಗುತ್ತಿಗಾರಿನ ಕೆನರಾ ಬ್ಯಾಂಕ್ ಮುಂಭಾಗದ ದೇವಮಾತ ಕಾಂಪ್ಲೆಕ್ಸ್ ನಲ್ಲಿ ಆಸರೆ ಇಲೆಕ್ಟ್ರಾನಿಕ್ಸ್ ಹಾಗೂ ಹೋಂ ಅಪ್ಲೆಯನ್ಸ್‌ಸ್ ಡಿ.29 ರಂದು  ಶುಭಾರಂಭಗೊಳ್ಳಲಿದೆ. ಆರಿಕೋಡಿ ಧರ್ಮದರ್ಶಿ ಹರೀಶ್ ಆರಿಕೋಡಿರವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.ಗಣ್ಯ ಅತಿಥಿಗಳು ಈ ಸಂದರ್ಭ ಉಪಸ್ಥಿತರಿರಲಿದ್ದಾರೆ.ಗುತ್ತಿಗಾರಿನ ಪ್ರಥಮ ಎಲೆಕ್ಟ್ರಾನಿಕ್ಸ್ ಹಾಗೂ ಹೋಂ ಅಪ್ಲೆಯನ್ಸ್‌ಸ್ ಮಳಿಗೆಯಾಗಿ ಆಸರೆ ಸಂಸ್ಥೆ ಶುಭಾರಂಭಗೊಳ್ಳಲಿದ್ದು, ಆ ಪ್ರಯುಕ್ತ ಎಲೆಕ್ಟ್ರಾನಿಕ್ಸ್ ಮತ್ತು ಗೃಹಪಯೋಗಿ...

ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕೊಳ್ಳಿ ಮುಹೂರ್ತ

ಕೊಲ್ಲಮೊಗ್ರು ಗ್ರಾಮದ ಕಲ್ಮಕಾರು ವಿಷ್ಣುನಗರ-ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಒತ್ತೆಕೋಲದ ಅಂಗವಾಗಿ ಡಿ.15ರಂದು ಕೊಳ್ಳಿ ಮುಹೂರ್ತ ನಡೆಯಿತು.ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಮತ್ತು ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ 10.82 ಕೋಟಿ ಅನುದಾನ

ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಸುಳ್ಯ ವಿಧಾನಸಭಾ ಕ್ಷೇತ್ರದ 21 ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ವಿಪತ್ತು ಉಪಶಮನ ನಿಧಿಯಿಂದ 10.82 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ರಸ್ತೆ ಮತ್ತು ಸೇತುವೆಗಳು ಹಾಗೂ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಲಾಗಿದೆ ಎಂದು ಶಾಸಕರ...

ಬಾಳಿಲದ ವಠಾರದಲ್ಲಿ ಬೀದಿ ನಾಯಿಗಳ ಹಾವಳಿ – ಮಕ್ಕಳು ಭಯದಿಂದಲೇ ಶಾಲೆಗೆ ಹೋಗುವ ಪರಿಸ್ಥಿತಿ ; ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಗ್ರಾಮಸ್ಥರು

ಬಾಳಿಲದ ವಠಾರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಶಾಲೆಗೆ ತೆರಳುವ ಸಂದರ್ಭದಲ್ಲಿ ಭಯದಿಂದಲೇ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮುಂದುವರೆದಲ್ಲಿ ಮುಂದೆ ಸಾರ್ವಜನಿಕರೂ ಕೂಡ ಭಯದಿಂದಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗುವ ಆತಂಕವಿದ್ದು, ಈ ಬೀದಿ ನಾಯಿಗಳು ಶಾಲಾ ಮಕ್ಕಳ ಮೇಲೆ ಅಥವಾ ಸಾರ್ವಜನಿಕರ ಮೇಲೆ ದಾಳಿ ಮಾಡಿ ಅವಘಡ ಸಂಭವಿಸುವ ಮೊದಲು ಸ್ಥಳೀಯ ಗ್ರಾಮ...
Loading posts...

All posts loaded

No more posts

error: Content is protected !!