Ad Widget

ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ ಕನಸಿನ ರಸ್ತೆಗೆ 30ವರ್ಷಗಳ ಬಳಿಕ  ಕಾಂಕ್ರೀಟೀಕರಣ- ವಿರಾಜಪೇಟೆ ಶಾಸಕ ಪೊನ್ನಣ್ಣರಿಂದ ಉದ್ಘಾಟನೆ

ಕಾನೂನು ತೊಡಕುಗಳಿಂದ ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ 25 ಮನೆಗಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೊಳ್ಳದೆ 30ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ 6 ಲಕ್ಷ  ಅನುದಾನದಲ್ಲಿ ಕಾಂಕ್ರೀಟೀಕರಣಗೊಳ್ಳುವುದರ ಮೂ ಲಕ 30ವರ್ಷಗಳ ಬಳಿಕ 25 ಮನೆಗಳ ಫಲಾನುಭವಿಗಳ ಕನಸು-ನನಸಾಗಿದ್ದು, ಸೋಮವಾರ ಅವರು ರಸ್ತೆಯನ್ನು ಉದ್ಘಾಟಿಸಿದರು.

ಪೆರಾಜೆ ಗ್ರಾಮದ ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ 25 ಮನೆಗಳಿಗೆ ಸಂಪರ್ಕಿಸುವ ರಸ್ತೆಯನ್ನು ಸುಮಾರು 30 ವರ್ಷಗಳಿಂದ ಅಭಿವೃದ್ದಿ ಕಾಣದೇ ಇದ್ದು, ಈ ರಸ್ತೆ ಅಭಿವೃದ್ಧಿ ಕಾಣದೆ ಸರಕು ಸಾಗಾಟನೆಗೆ ಮತ್ತು ಶಾಲಾ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.  ಈ ಬಗ್ಗೆ ಮುಖಂಡ ಮನು ಪೆರುಮುಂಡ ಅವರು ಮನಗಂಡು, ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿಯಾದ ಹಿನ್ನಲೆಯಲ್ಲಿ 6 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿ, ಕಾನೂನಾತ್ಮಕ ಅಡೆತಡೆಗಳನ್ನು ಬಗೆಹರಿಸಿದರು. ಸೋಮವಾರ ಶಾಸಕ ಎ.ಎಸ್.ಪೊನ್ನಣ್ಣ ಅವರು ರಸ್ತೆಯನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ 25 ಮನೆಗಳ ಫಲಾನುಭವಿಗಳ ಜತೆಯಲ್ಲಿ ನಿಂತು ರಸ್ತೆಗೆ ಕಾಂಕ್ರೀಟೀಕರಣ ಮಾಡಲು ಶ್ರಮ ವಹಿಸಿದ ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ  ಮನು ಪೆರುಮುಂಡ ಹಾಗೂ ರಸ್ತೆಗೆ ಅನುದಾನ ಮತ್ತು ಕಾನೂನಾತ್ಮಕ ಅಡೆತಡೆ ನಿವಾರಿಸಿದ ಶಾಸಕರನ್ನು ಫಲಾನುಭವಿಗಳು ಸ್ಥಳದಲ್ಲೆ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪೆರಾಜೆ ಗ್ರಾ.ಪಂ.ಸದಸ್ಯ ಸುರೇಶ್ ಪೆರುಮುಂಡ, ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಪೆರಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಜಯರಾಮ ಪೆರುಮುಂಡ, ಕಾರ್ಯದರ್ಶಿ ಹರಿಪ್ರಸಾದ ಪೆರಂಗಜೆ, ಮುಖಂಡರಾದ ಅಬೂಬಕ್ಕರ್ ಪೆರಾಜೆ, ಹನೀಫ್ ಕೊಯನಾಡು, ಚಿದಾನಂದ ಪೀಚೆ, ಹಿಮಕರ ವ್ಯಾಪಾರೆ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading