Ad Widget

ಬೆಳ್ಳಾರೆ : ಜ.3 ಹಾಗೂ 4ರಂದು ನೆಟ್ಟಾರು ಶಾಲಾ ವಾರ್ಷಿಕೋತ್ಸವ ಮತ್ತು ಬೆಳ್ಳಿಹಬ್ಬ ಸಂಭ್ರಮ “ಅಕ್ಷಯ ಪಥ-2026”

ಬೆಳ್ಳಾರೆ ಗ್ರಾಮದ ಅಕ್ಷಯ ಯುವಕ ಮಂಡಲ(ರಿ.) ನೆಟ್ಟಾರು, ಅಕ್ಷತಾ ಮಹಿಳಾ ಮಂಡಲ ನೆಟ್ಟಾರು ಹಾಗೂ ದ.ಕ.ಜಿ.ಪಂ ಹಿ.ಪ್ರಾ ಶಾಲೆ ನೆಟ್ಟಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಬೆಳ್ಳಿಹಬ್ಬ ಸಂಭ್ರಮ ಅಕ್ಷಯ ಪಥ ಕಾರ್ಯಕ್ರಮವು ಜ.3 ಮತ್ತು 4 ರಂದು ಅಕ್ಷಯ ಬಯಲು ರಂಗಮಂದಿರ ನೆಟ್ಟಾರಿನಲ್ಲಿ ಜರುಗಲಿದೆ.
ಜ 3 ರಂದು ಪೂರ್ವಾಹ್ನ ಗಂಟೆ 9:00ಕ್ಕೆ ಶಾಲಾ ಧ್ವಜಾರೋಹಣ ಮತ್ತು ಮಕ್ಕಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ನೆಟ್ಟಾರು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಸಂತ ಗೌಡ ನೆಟ್ಟಾರು ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.
ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ   ಪ್ರೌಢಶಾಲೆ ಬೆಳಾಲಿನ ವಿಶ್ರಾಂತ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿ, ನೆಹರು ಯುವಕೇಂದ್ರ ಮಂಗಳೂರು ಅಧ್ಯಕ್ಷರಾದ ದೇವರಾಜ್ ಮುತ್ಲಾಜೆ, ದ.ಕ.ಜಿ.ಪಂ ಮಾಜಿ ಅಧ್ಯಕ್ಷರಾದ ಶ್ರೀಮತಿ ಆಶಾ ತಿಮ್ಮಪ್ಪ, ಬೆಳ್ಳಾರೆ ಕೆ.ಪಿ.ಎಸ್ ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷರಾದ ಹರ್ಷಾ ಜೋಗಿಬೆಟ್ಟು, ಕೆ.ಪಿ.ಎಸ್ ಬೆಳ್ಳಾರೆಯ ಕಟ್ಟಡ ಸಮಿತಿ ಅಧ್ಯಕ್ಷರಾದ ಶರತ್ ಪೂಗವನ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 1:30ರಿಂದ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 4:00 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಬೆಳ್ಳಿಹಬ್ಬದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಹಾಗೂ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ‌. ಸಭಾಧ್ಯಕ್ಷತೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಮಿತಾ ಎಲ್ ರೈ ವಹಿಸಲಿದ್ದಾರೆ‌. ಉದ್ಘಾಟನೆಯನ್ನು ಮಂಗಳೂರು ಲೋಕಸಭಾ ಕ್ಷೇತ್ರದ 
ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೆರವೇರಿಸಲಿದ್ದಾರೆ‌. ಸ್ಮರಣ ಸಂಚಿಕೆಯನ್ನು ಸುಳ್ಯ ಶಾಸಕಿ ಕು,ಭಾಗೀರಥಿ ಮುರುಳ್ಯ ಬಿಡುಗಡೆ
ಮಾಡಲಿದ್ದಾರೆ.
ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಎನ್.ಎಸ್.ಡಿ ವಿಠಲ್ ದಾಸ್, ಶ್ರೀಮತಿ ಶ್ವೇತಾ ಶೈಲೇಶ್, ಶ್ರೀಮತಿ ಗೌರಿ ನೆಟ್ಟಾರು, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೀತಲ್ ಯು.ಕೆ, ಬೆಳ್ಳಾರೆ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಅನುರಾಧ ಎ.ಆರ್, ಪ್ರಗತಿಪರ ಕೃಷಿಕರಾದ ಅರುಣ ಶಂಕರ ನೆಟ್ಟಾರು, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಆರ್.ಕೆ ಭಟ್ ಕುರುಂಬುಡೇಲು, ಸುಬ್ರಹ್ಮಣ್ಯ ಮಹಿಳಾ ವಿವಿದೋದ್ಧೇಶ ಸಹಕಾರಿ ನಿ.ಇದರ ಅಧ್ಯಕ್ಷರಾದ ಶ್ರೀಮತಿ ರಾಜೀವಿ ಆರ್.ರೈ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೆಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ರಾಜೇಶ್ ಶ್ಯಾನ್ಬೋಗ್ ಮಣಿಕ್ಕಾರ, ಬೆಳ್ಳಾರೆ ಆರಕ್ಷಕ
ಠಾಣೆಯ ಉಪ ನಿರೀಕ್ಷಕರಾದ ಈರಯ್ಯ ದೂಂತೂರು, ನೆಟ್ಟಾರು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಸಂತ ನೆಟ್ಟಾರು, ಸುಳ್ಯ ಯುವಜನ ಸಂಯುಕ್ತ ಮಂಡಳಿ(ರಿ‌.) ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ, ಬೆಳ್ಳಾರೆಯ ಬೆಳ್ಳಾರೆ ಕನ್ಸ್ಟ್ರಕ್ಷನ್ ನ ಆರೀಫ್ ಬೆಳ್ಳಾರೆ, ದ.ಕ ಜಿಲ್ಲಾ ಯುವಜನ ಒಕ್ಕೂಟ(ರಿ.) ಇದರ ಅಧ್ಯಕ್ಷರಾದ ಸುರೇಶ್ ರೈ ಸೂಡಿಮುಳ್ಳು, ಕರ್ನಾಟಕ ಅರೆಭಾಷೆ ಮತ್ತು ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ನೆಟ್ಟಾರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ.ಕೆ ಪಾಲ್ಗೊಳ್ಳಲಿದ್ದಾರೆ.
ಗೌರವ ಉಪಸ್ಥಿತರಾಗಿ ನೆಟ್ಟಾರು ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ನಳಿನಾಕ್ಷಿ, ಅಕ್ಷಯ ಯುವಕ ಮಂಡಲ(ರಿ.) ನೆಟ್ಟಾರು ಸ್ಥಾಪಕಾಧ್ಯಕ್ಷರಾದ
ದೇವದಾಸ್ ನೆಟ್ಟಾರು, ಅಕ್ಷಯ ಯುವಕ ಮಂಡಲ(ರಿ.) ನೆಟ್ಟಾರು ಗೌರವಾಧ್ಯಕ್ಷರಾದ
ಪದ್ಮನಾಭ ಕೋಡಿಬೈಲು ಭಾಗವಹಿಸಲಿದ್ದಾರೆ.

ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಪಿ.ಹೆಚ್.ಡಿ
ಪದವೀಧರರಾದ ಡಾ| ಅಶ್ವಿನ್ ಶೆಣೈ, ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ
ಕು,ಜ್ಯೋತಿಕಾ, ಹತ್ತನೆ ತರಗತಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ
ಕು,ನವ್ಯಶ್ರೀ, ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರದ ಸಾಧನೆಗಾಗಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಪ್ರಮೋದ್ ಕುಮಾರ್ ರೈ, ಹವ್ಯಾಸಿ ತಾಳಮದ್ದಳೆ ಅರ್ಥಧಾರಿಗಳಾದ ಶಶಾಂಕ್ ಭಟ್ ಅರ್ನಾಡಿ, ಚಿತ್ರಕಲೆ ತರಬೇತುದಾರರು ಬೆಳ್ಳಾರೆಯ ಕಲಾಸುಮ ಆರ್ಟ್ಸ್ ಮಾಲಕರಾದ ಪದ್ಮನಾಭ ಸರಸ್ವತಿಮೂಲೆ, ಬಹುಮುಖ ಪ್ರತಿಭೆ ಕೆಯ್ಯೂರು ಕೆ.ಪಿ.ಎಸ್ ನ ಉಪನ್ಯಾಸಕರಾದ ಶ್ವೇತಾ ನೆಟ್ಟಾರು, ಸಾಮಾಜಿಕ ಸೇವಾಕ್ಷೇತ್ರದ ಸಾಧನೆಗಾಗಿ ಶ್ರೀಮತಿ ಜಯಂತಿ ಸೀತಾರಾಮ ನೆಟ್ಟಾರು, ಶ್ರೀಮತಿ ಚಂದ್ರಾವತಿ ನವಗ್ರಾಮ, 35ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಶಿವಕುಮಾರ್ ರೈ ಮಣಿಕ್ಕಾರ, ಸರಕಾರಿ ಕ್ಷೇತ್ರದ ಸಾಧನೆಗಾಗಿ ನಿವೃತ್ತ ಅಂಚೆ ಮೇಲ್ವಿಚಾರಕರಾದ ದೇವದಾಸ್ ನೆಟ್ಟಾರು, ಕೆ.ಎಸ್.ಆರ್.ಟಿ.ಸಿ ಪುತ್ತೂರಿನ
ನಿವೃತ್ತ ಸಂಚಾರ ನಿಯಂತ್ರಕರಾದ ಸತ್ಯಶಂಕರ ಕಜೆ, ಪೆರ್ಲಂಪಾಡಿ ಶಾಖೆಯ
ಉತ್ತಮ ಅಂಚೆ ಪಾಲಕರಾದ ರಾಮಕೃಷ್ಣ
ರಾವ್ ಪೆರುವಾಜೆ ಇವರು ಸನ್ಮಾನವನ್ನು
ಸ್ವೀಕರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಅಕ್ಷಯ ಯುವಕ ಮಂಡಲದ ಪೂರ್ವಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಗೌರವ ಸಮರ್ಪಣೆ ಜರುಗಲಿದೆ.

ಸಂಜೆ ಗಂಟೆ 6:30ರಿಂದ ಕರಾವಳಿ ಕರ್ನಾಟಕದ ಖ್ಯಾತ ಹಿನ್ನೆಲೆ ಗಾಯಕ ಬಾಲಕೃಷ್ಣ ನೆಟ್ಟಾರು ಸಾರಥ್ಯದ ಅಂತರಾಷ್ಟ್ರೀಯ ಕಲಾವಿದರನ್ನೊಳಗೊಂಡ “ಮಧುರ” ಮ್ಯೂಸಿಕಲ್ಸ್ ಮಂಗಳೂರು ಸಾದರಪಡಿಸುವ “ನೆಟ್ಟಾರು ನೈಟ್ಸ್” ಅದ್ಧೂರಿ ಸಂಗೀತ ರಸಮಂಜರಿ ಜರುಗಲಿದೆ. ಚಿತ್ರನಟ ಮಂಜು ರೈ ಮೂಳೂರು ಆಗಮಿಸಲಿದ್ದಾರೆ.

ರಾತ್ರಿ ಗಂಟೆ 8:30 ರಿಂದ ಕಲಾಮಂದಿರ್ ಡ್ಯಾನ್ಸ್ ಕ್ರೀವ್ ಬೆಳ್ಳಾರೆ ಮತ್ತು ಪಂಜ ಶಾಖೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಪ್ರಮೋದ್ ಕುಮಾರ್ ರೈ ಬೆಳ್ಳಾರೆ ಸಂಯೋಜನೆಯಲ್ಲಿ ಅಶೋಕ್ ಕುಮಾರ್ ಬಸ್ತಿಗುಡ್ಡೆ ಬೆಳ್ಳಾರೆ ನಿರ್ದೇಶನದಲ್ಲಿ ಹಾಗೂ ಮಂಗಳೂರಿನ ಪ್ರಖ್ಯಾತ ನೃತ್ಯ ತಂಡದಿಂದ ನೃತ್ಯ ಸಂಭ್ರಮ ಜರುಗಲಿದೆ.

ಜ 4ರಂದು ಮಧ್ಯಾಹ್ನ ಗಂಟೆ 2:00 ರಿಂದ ಶ್ರೀ ರಾಮ ಜೋಯಿಸ ಬೆಳ್ಳಾರೆ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ
ಪೌರಾಣಿಕ ಯಕ್ಷಗಾನ ಬಯಲಾಟ “ನರಕಾಸುರ ಮೈಂದ ದ್ವಿವಿದ” ಜರುಗಲಿದೆ.
ಬೆಳಿಗ್ಗೆ ಗಂಟೆ 9:30 ರಿಂದ ಬೆಳ್ಳಿಹಬ್ಬ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ. ಅಧ್ಯಕ್ಷತೆಯನ್ನು ಅಕ್ಷಯ ಯುವಕ ಮಂಡಲ(ರಿ.) ನೆಟ್ಟಾರು ಇದರ ಅಧ್ಯಕ್ಷರಾದ ಭಾಸ್ಕರ ನೆಟ್ಟಾರು ವಹಿಸಲಿದ್ದಾರೆ.
ಅತಿಥಿಗಳಾಗಿ ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥರಾದ ದುರ್ಗಾಕುಮಾರ್ ನಾಯರ್‌ಕೆರೆ, ಬೆಳ್ಳಾರೆ ಮೆಸ್ಕಾಂ ಕಿರಿಯ ಅಭಿಯಂತರಾದ ಪ್ರಸಾದ್ ಕತ್ಲಡ್ಕ, ಸುಳ್ಯ ಯುವಜನ ಸಂಯುಕ್ತ ಮಂಡಳಿ(ರಿ.) ನಿರ್ದೇಶಕರಾದ ಸಂಜಯ್ ನೆಟ್ಟಾರು, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಭಾಗ ಮುಖ್ಯಸ್ಥರು ಮತ್ತು ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಯಾದ ಪದ್ಮನಾಭ ಕೆ.ನೆಟ್ಟಾರು, ನೆಟ್ಟಾರು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಸಂತ ನೆಟ್ಟಾರು ಭಾಗವಹಿಸಲಿದ್ದಾರೆ.
ಗೌರವ ಉಪಸ್ಥಿತರಾಗಿ ಬೆಳ್ಳಾರೆ ಜೆ.ಸಿ.ಐ ಅಧ್ಯಕ್ಷರಾದ ಪ್ರದೀಪ್ ಕುಮಾರ್ ರೈ ಬೀಡು, ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಕೊಳಂಬಳ, ಬೆಳ್ಳಾರೆ ಲಯನ್ಸ್‌ ಕ್ಲಬ್ ಜಲದುರ್ಗಾ ಬೆಳ್ಳಾರೆ ಟೌನ್ ಅಧ್ಯಕ್ಷರಾದ
ಯತೀಶ್ ಭಂಡಾರಿ, ನೇಸರ ಯುವಕ ಮಂಡಲ ಮುಕ್ಕೂರು ಅಧ್ಯಕ್ಷರಾದ ರಮೇಶ್ ಕಾನಾವು, ಭಾವೈಕ್ಯ ಯುವಕ ಮಂಡಲ(ರಿ.) ಪೆರುವಾಜೆ ಅಧ್ಯಕ್ಷರಾದ ಜಯಚಂದ್ರ ಪೆರುವಾಜೆ, ಆಸರೆ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ನೆಟ್ಟಾರು ಇದರ ಅಧ್ಯಕ್ಷರಾದ ಚಂದ್ರಶೇಖರ ಚಾವಡಿಬಾಗಿಲು, ಸೌರವ ಬ್ಯಾಡ್ಮಿಂಟನ್ ಕ್ಲಬ್ ಬೆಳ್ಳಾರೆ ಅಧ್ಯಕ್ಷರಾದ
ಲೋಕೇಶ್ ಬೆಳ್ಳಾರೆ, ಫ್ರೆಂಡ್ಸ್ ಕ್ಲಬ್ ನೆಟ್ಟಾರು ಅಧ್ಯಕ್ಷರಾದ ಬಶೀರ್, ಆರ್.ಕೆ.ಫ್ರೆಂಡ್ಸ್ ಕೊಳಂಬಳ ಅಧ್ಯಕ್ಷರಾದ ಪ್ರದೀಪ್ ಪೂಜಾರಿ, ಬೆಳ್ಳಾರೆ ಸ್ನೇಹಿತರ ಕಲಾ ಸಂಘ(ರಿ.) ಅಧ್ಯಕ್ಷರಾದ ವಸಂತ ಗೌಡ ಪಡ್ಪು,ಬೆಳ್ಳಾರೆ, ವಿರಾಟ್ ಫ್ರೆಂಡ್ಸ್ ಅಧ್ಯಕ್ಷರಾದ ಸಂತೋಷ್ ಮಣಿಯಾಣಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ ಗಂಟೆ
11:30 ರಿಂದ ಯುವಕ ಮಂಡಲ, ಮಹಿಳಾ ಮಂಡಲ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಸಂಜೆ ಗಂಟೆ 5:30 ರಿಂದ ಕು,ಶ್ವೇತಾ ನೆಟ್ಟಾರು ಸಂಯೋಜನೆಯಲ್ಲಿ ನಾದಾಂತರಂಗ ನೃತ್ಯ ತಂಡ  ನೆಟ್ಟಾರು ಇದರ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಜರುಗಲಿದೆ‌.
ರಾತ್ರಿ ಗಂಟೆ 7:00 ರಿಂದ ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶನದಲ್ಲಿ ಅಭಿನಯ ಕಲಾವಿದರು ಉಡುಪಿ ಅಭಿನಯಿಸುವ ಸಾಮಾಜಿಕ ನಾಟಕದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಅದ್ಧೂರಿ ರಂಗ ವಿನ್ಯಾಸದ ಕುತೂಹಲ ಭರಿತ ತುಳು ಹಾಸ್ಯಮಯ ನಾಟಕ “ಶಾಂಭವಿ ತೌಳವಗುತ್ತು” ನಡೆಯಲಿದೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading