- Saturday
- March 7th, 2026
ಬೆಳ್ಳಾರೆ ಗ್ರಾಮದ ಅಕ್ಷಯ ಯುವಕ ಮಂಡಲ(ರಿ.) ನೆಟ್ಟಾರು, ಅಕ್ಷತಾ ಮಹಿಳಾ ಮಂಡಲ ನೆಟ್ಟಾರು ಹಾಗೂ ದ.ಕ.ಜಿ.ಪಂ ಹಿ.ಪ್ರಾ ಶಾಲೆ ನೆಟ್ಟಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಬೆಳ್ಳಿಹಬ್ಬ ಸಂಭ್ರಮ ಅಕ್ಷಯ ಪಥ ಕಾರ್ಯಕ್ರಮವು ಜ.3 ಮತ್ತು 4 ರಂದು ಅಕ್ಷಯ ಬಯಲು ರಂಗಮಂದಿರ ನೆಟ್ಟಾರಿನಲ್ಲಿ ಜರುಗಲಿದೆ.ಜ 3 ರಂದು ಪೂರ್ವಾಹ್ನ ಗಂಟೆ 9:00ಕ್ಕೆ...
ಡಿ.28ನೇ ಆದಿತ್ಯವಾರದಂದು ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ(ರಿ.) ಮಂಗಳೂರು ಇದರ ವತಿಯಿಂದ ಪುತ್ತೂರಿನ ಸ್ವಾಮಿ ಕಲಾಮಂದಿರದಲ್ಲಿ ನಡೆದ “ಮರಾಟಿ ಸಂಭ್ರಮ-2025” ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ವಿಜಯಕುಮಾರ್ ಸುಳ್ಯ ಇವರಿಗೆ “ಮರಾಟಿ ಸಾಧಕರು-2025” ಎಂಬ ಪುರಸ್ಕಾರವನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.
“ಮಕ್ಕಳ ವರ್ತನೆಗಳನ್ನು ಬದಲಾಯಿಸಿ ಉತ್ತಮ ಶಿಕ್ಷಣ ನೀಡುವುದು ಜವಾಬ್ದಾರಿಯುತ ಪೋಷಕರ ಹಾಗೂ ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಗಳು ತನ್ನ ಹೆತ್ತವರ ಹಾಗೂ ಗುರುಹಿರಿಯರ ಆದರ್ಶಗಳನ್ನು ಪಾಲಿಸಿದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ” ಎಂದು ಕೌನ್ಸಿಲಿಂಗ್ ತಜ್ಞ, ಮನೋವಿಶ್ಲೇಷಕ ಅನ್ಸರ್ ಮುಡಿಪು ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆದ ಹದಿಹರೆಯದವರ ಸಬಲೀಕರಣ ಮತ್ತು ಪೋಷಕರ...
ಕಾನೂನು ತೊಡಕುಗಳಿಂದ ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ 25 ಮನೆಗಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೊಳ್ಳದೆ 30ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ 6 ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣಗೊಳ್ಳುವುದರ ಮೂ ಲಕ 30ವರ್ಷಗಳ ಬಳಿಕ 25 ಮನೆಗಳ ಫಲಾನುಭವಿಗಳ ಕನಸು-ನನಸಾಗಿದ್ದು, ಸೋಮವಾರ ಅವರು ರಸ್ತೆಯನ್ನು ಉದ್ಘಾಟಿಸಿದರು.ಪೆರಾಜೆ ಗ್ರಾಮದ ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ 25 ಮನೆಗಳಿಗೆ ಸಂಪರ್ಕಿಸುವ ರಸ್ತೆಯನ್ನು ಸುಮಾರು...
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯದ ಪದಪ್ರದಾನ ಸಮಾರಂಭ ಡಿಸೆಂಬರ್ 30ರಂದು ಅರಂಬೂರಿನ ಗ್ರ್ಯಾಂಡ್ ರಸಪಾಕ ಸಭಾಂಗಣದಲ್ಲಿ ನಡೆಯಿತು.ಸಭಾ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಉದ್ಘಾಟಿಸಿ ಶುಭಹಾರೈಸಿದರು. ಸಭಾಧ್ಯಕ್ಷತೆಯನ್ನು ಫೋಟೋಗ್ರಾಫರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಮಾಜಿ ಗವರ್ನರ್ ಎಂ.ಬಿ...
ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಿತು.ಅಧ್ಯಕ್ಷರಾಗಿ ವಿಷ್ಣುಭಟ್ ಮೂಲೆತೋಟ ಮೂರನೇ ಬಾರಿಗೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ದೇವಿಪ್ರಸಾದ್ ಸುಳ್ಳಿ ಅವಿರೋಧವಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಶುಭಕರ ನಾಯಕ್, ಹರಿಪ್ರಸಾದ್ ಬಿ.ವಿ, ಸತ್ಯೇಶ್ ಚಂದ್ರೋಡಿ, ಕುಲದೀಪ್ ಹರ್ಲಡ್ಕ, ಉಮೇಶ್ ಪ್ರಭು, ಜಯಪ್ರಸಾದ್ ಸುಳ್ಳಿ, ಚಂದ್ರಶೇಖರ ಎಂ, ಸಂಧ್ಯಾ ಕೆ.ಎಲ್,...
ಹಳೆಯ ಮತದಾರರ ಗುರುತಿನ ಚೀಟಿ ಅಂದರೆ ಕಪ್ಪು-ಬಿಳುಪು(Black and White) ಫೋಟೋ ಇರುವ ಮತದಾರರ ಗುರುತಿನ ಚೀಟಿ ಹೊಂದಿರುವ ಎಲ್ಲಾ ಮತದಾರರು ತಮ್ಮ ಗುರುತಿನ ಚೀಟಿಯಲ್ಲಿ ಫೋಟೋ ಬದಲಾವಣೆ ಮಾಡಬೇಕು ಎಂದು ಚುನಾವಣಾ ಆಯೋಗ ಆದೇಶಿಸಿದ್ದು, ಎಲ್ಲರೂ ತಮ್ಮ ಕಲರ್ ಫೋಟೋ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಸಹಿಯೊಂದಿಗೆ ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಗೆ(B.L.O)...
