Ad Widget

ಮೇದಿನಡ್ಕದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಅಜ್ಜಾವರ : ಸುಳ್ಯ ಆರೋಗ್ಯ ಇಲಾಖೆ ಮತ್ತು ಅಂಗನವಾಡಿ ಕೇಂದ್ರ ಮೇದಿನಡ್ಕ ಮುತ್ತು ಶ್ರೀ ಫ್ರೆಂಡ್ಸ್ ಕ್ಲಬ್ ಸಹಯೋಗದೊಂದಿಗೆ ಮೇದಿನಡ್ಕ ಅಂಗನವಾಡಿ ಕೇಂದ್ರದಲ್ಲಿ ಡಿ.30 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಆಸ್ಪತ್ರೆ ಆಪ್ತ ಸಮಾಲೋಚಕರಾದ ಬಾಲಕೃಷ್ಣ, ಜಯಶೀಲ.ಎಸ್ ಆರೋಗ್ಯಾಧಿಕಾರಿ ಆಯುಷ್ಮಾನ್ ಆರೋಗ್ಯ ಕೇಂದ್ರ ಅಜ್ಜಾವರ,  ನೂರುನ್ನೀಸಾ ಕೆ.ಎಸ್ ಲ್ಯಾಬ್ ತಂತ್ರಜ್ಞರು, ರೂಪಶ್ರೀ ಕೆ.ಎ ಕ್ಷೇತ್ರ ಮೇಲ್ವಿಚಾರಕರು ಹೆಚ್.ಕೆ.ಎನ್.ಎಸ್ ಮಂಗಳೂರು, ರಾಜೀವಿ ಫೀರ್ ಎಜ್ಯುಕೇಶನಲ್ ಹೆಚ್.ಕೆ.ಎನ್.ಎಸ್ ಮಂಗಳೂರು, ಆಶಾಕಾರ್ಯಕರ್ತರಾದ ಜಯಶ್ರೀ, ಲಕ್ಷ್ಮಿ ಡಿ.ಎಸ್  ಶಿಬಿರದ ನೇತೃತ್ವ ವಹಿಸಿದ್ದರು.

ರಕ್ತ ಪರೀಕ್ಷೆ, ಶುಗರ್ ಲೆವೆಲ್, ಹಿಮೋಗ್ಲೋಬಿನ್ ಹಾಗೂ ಇನ್ನಿತರ ವೈದ್ಯಕೀಯ ಪರೀಕ್ಷೆಯ ಜೊತೆಗೆ ಆರೋಗ್ಯ ಸಲಹೆ ನೀಡಲಾಯಿತು. ಸ್ಥಳೀಯ ಸಾರ್ವಜನಿಕರು ಆರೋಗ್ಯ ಸೇವೆಯಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading