Ad Widget

ಕುಕ್ಕುಜಡ್ಕದಲ್ಲಿ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮತ್ತು ರಕ್ತದಾನ ಶಿಬಿರ

ಸುಳ್ಯ, ಡಿಸೆಂಬರ್ 28 : ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇದರ ಆಶ್ರಯದಲ್ಲಿ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಕುಕ್ಕುಜಡ್ಕ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಯೊಗದೊಂದಿಗೆ ಬೃಹತ್ ಆಧಾರ್ ನೋಂದಣಿ, ತಿದ್ದುಪಡಿ ಮತ್ತು ರಕ್ತದಾನ ಶಿಬಿರ ಅಮರ ಸಹಕಾರ ಸಭಾಭವನ ಕುಕ್ಕುಜಡ್ಕದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿಕಾಂತ್ ಮಿತ್ತೂರು, ಅಧ್ಯಕ್ಷರು ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇವರು ವಹಿಸಿ ಶುಭ ಹಾರೈಸಿದರು.  ಕೇಶವ ಗೌಡ ಕರ್ಮಜೆ, ಅಧ್ಯಕ್ಷರು ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ ಕುಕ್ಕುಜಡ್ಕ ಇವರು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ , ಮೋಹನ್ ಕುಮಾರ್ ಪೊಯ್ಯೆಮಜಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ ಕುಕ್ಕುಜಡ್ಕ, ರಾಧಾಕೃಷ್ಣ ಕೊರತ್ಯಡ್ಕ, ಸದಸ್ಯರು ಗ್ರಾಮ ಪಂಚಾಯತ್ ಅಮರಮುಡ್ನೂರು, ಲೋಹಿತ್ ಬಾಳಿಕಳ ಕೋಶಾಧಿಕಾರಿಗಳು ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ, ರಾಮಕೃಷ್ಣ ರಾವ್, ವೈದ್ಯಾಧಿಕಾರಿಗಳು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು, ಪ್ರಜ್ವಲ್.ಸಿ.ವಿ ಅಂಚೆ ಪಾಲಕರು ಬಾಳಿಲ ಕಾರ್ಯಕ್ರಮಕ್ಕೆ ಇವರುಗಳು ಶುಭ ಹಾರೈಸಿದರು.
ಕಾರ್ಯದರ್ಶಿ ಚೇತನ್ ಎಲಿಮಲೆ ಸ್ವಾಗತಿಸಿ. ನಿರ್ದೇಶಕ ಮಿಥುನ್ ಪೈಲಾರು ಧನ್ಯವಾದಗೈದರು, ಸ್ಥಾಪಕಾಧ್ಯಕ್ಷ ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಂಚಾಲಕರಾದ ಹರ್ಷಿತ್ ದಾತಡ್ಕ, ಗೌರವಾಧ್ಯಕ್ಷ ಶಿವಪ್ರಸಾದ್ ದೊಡ್ಡಿಹಿತ್ಲು, ನಿರ್ದೇಶಕರುಗಳಾದ ಪ್ರವೀಣ್ ಕುಲಾಲ್, ಕೀರ್ತನ್ ಪಾರೆ, ಪ್ರಸಾದ್ ಬೊಳ್ಳೂರು, ಮನೀಶ್ ಕಡಪಳ, ಅನಿತಾ ಮಂಜುನಾಥ್ ಕುಕ್ಕುಜಡ್ಕ, ಭಾನುಪ್ರಕಾಶ್ ಪೆಲತ್ತಡ್ಕ, ಹಿತೇಶ್ ನಾರ್ಕೊಡು, ಬಾಲಕೃಷ್ಣ ಹೊನ್ನೆಕಡ್ಪು, ಜಯಪ್ರಸಾದ್ ಸಂಕೇಶ ಇವರುಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading