Ad Widget

ಸುಳ್ಯ : ಜೂನಿಯರ್ ಕಾಲೇಜು ಅಮೃತ ಮಹೋತ್ಸವ ಅಂಗವಾಗಿ ಗುರುವಂದನೆ – “ಪ್ರೀತಿ ವಿಶ್ವಾಸ ಸಂಸ್ಕಾರ ಕಲಿಸಿದ ಶಾಲೆಗೆ ಕೀರ್ತಿ ಬಂದಿದೆ” – ಡಿ.ವಿ ಸದಾನಂದ ಗೌಡ

“ಪ್ರೀತಿ ವಿಶ್ವಾಸ ಸಂಸ್ಕಾರ ಕಲಿಸಿದ ಶಾಲೆಗೆ ಕೀರ್ತಿ ಬಂದಿದೆ. ವಿದ್ಯಾರ್ಥಿಗಳ ಸಾಧನೆ, ಕೀರ್ತಿ ಗುರುಗಳಿಗೆ ಸಲ್ಲುತ್ತದೆ. ಬಾಲ್ಯದ ಶಿಕ್ಷಣ ನೀಡಿದ ಶಿಕ್ಷಕರು ದೇವರಿಗೆ ಸಮಾನ” ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಹೇಳಿದರು.

ಅವರು ಡಿ.28 ರಂದು ಸುಳ್ಯ ಜೂನಿಯರ್ ಕಾಲೇಜು ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸನ್ಮಾನ ನೆರವೇರಿಸಿ ಮಾತಾನಾಡಿದರು. “ಶಿಕ್ಷಕರು ಈಗ ವಯೋಸಹಜವಾಗಿ ನಿಶ್ಯಕ್ತರಾಗಿದ್ದಾರೆ ಅಂದರೇ ಅವರ ಶಕ್ತಿಯನ್ನು ನಮಗೆ ಶಿಕ್ಷಣದ ಮೂಲಕ ಧಾರೆ ಎರೆದಿದ್ದಾರೆ. ನಾಯಕತ್ವ ಕಲಿಸಿಕೊಟ್ಟಿದ್ದಾರೆ” ಎಂದರು.  “ನಾವು ಮಾಡುವ ಕೆಲಸಕ್ಕೆ ಬದ್ಧತೆ ಬೆಳೆಸಿಕೊಳ್ಳಬೇಕಿದೆ, ಇಂದು ಮನುಷ್ಯತ್ವ ಕಡಿಮೆ ಆಗುತ್ತಿದೆ ಕಟ್ಟಡ ಗಟ್ಟಿಯಾಗಲು ಅಡಿಪಾಯ, ಕಬ್ಬಿಣ, ಸಿಮೆಂಟು ಹಾಕಿದರೆ ಸಾಲದು ಅದು ಸರಿಯಾಗಿ ಕ್ಯೂರಿಂಗ್ ಆಗಬೇಕು. ಅದರಂತೆ ಜೀವನದ ಬದುಕು ಯಶಸ್ಸು ಆಗಬೇಕಾದರೆ ಶಿಕ್ಷಕರ ಪಾಠ ನಮಗೆ ಅಡಿಪಾಯ, ಕ್ಯೂರಿಂಗ್ ಮಾಡಿದಂತೆ” ಎಂದರು. “ಕಷ್ಟ, ಅವಮಾನ ಹಾಗೂ ಸೋಲು ನಮ್ಮ ಮುಂದಿನ ದಾರಿಗೆ ನಿರ್ಣಯಕ್ಕೆ, ಯಶಸ್ಸಿಗೆ ಕಾರಣವಾಗುತ್ತದೆ” ಎಂದರು.


ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಎಸ್. ಅಂಗಾರ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಾಜ್, ವಿಶ್ರಾಂತ ಉಪಕುಲಪತಿ, ಡಾ. ಚಿದಾನಂದ ಗೌಡ ಕೊಳಂಬೆ, ನಿವೃತ್ತ ಐ.ಎಫ್.ಎಸ್ ಅಧಿಕಾರಿ ಸುಂದರ ನಾಯ್ಕ್ ಆಗಮಿಸಿದ್ದರು. ವೇದಿಕೆಯಲ್ಲಿ ಅಮೃತ ಮಹೋತ್ಸವ ಸಮಿತಿ  ಕಾರ್ಯಾಧ್ಯಕ್ಷ ಲಿಂಗಪ್ಪಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ್ ರೈ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಂಜುಳಾ ಬಡಿಗೇರ್, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಿವಪ್ರಕಾಶ್ ಕೇರ್ಪಳ ಉಪಸ್ಥಿರಿದರು. 

ಈ ಸಂದರ್ಭದಲ್ಲಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಗೌರವಿಸಲಾಯಿತು.
ಸುಧಾಕರ ರೈ ಸ್ವಾಗತಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading