Ad Widget

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವರ “ಶರಣು ಶ್ರೀ ಸುಬ್ರಹ್ಮಣ್ಯಂ” ಕನ್ನಡ ಭಕ್ತಿಗೀತೆ ಬಿಡುಗಡೆ

ಪ್ರಸಿದ್ಧ ನಾಗಾರಾಧನೆಯ  ಸಾನಿಧ್ಯವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ “ಶರಣು ಶ್ರೀ ಸುಬ್ರಹ್ಮಣ್ಯಂ” ಎಂಬ ಕನ್ನಡ ಭಕ್ತಿಗೀತೆಯು ಶ್ರೀ ಕ್ಷೇತ್ರದಲ್ಲಿ ಡಿ.26 ರಂದು ಕಿರು ಷಷ್ಠಿಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು. ಈ ಭಕ್ತಿಗೀತೆಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಭರತ್ ಮುಂಡೋಡಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಹಾಗೂ ಇನ್ನಿತರ ಗಣ್ಯರ ಜೊತೆಗೆ ಭಕ್ತಿಗೀತೆ ತಂಡದ ನಿರಂಜನ್ ಕಡ್ಲಾರು, ಧನಂಜಯ ಆಚಾರ್ಯ ಕಡ್ಲಾರು, ಶ್ರೀಮತಿ ಶ್ರಾವಣಿ ಧನಂಜಯ ಕಡ್ಲಾರು ಉಪಸ್ಥಿತರಿದ್ದರು.

“ಶರಣು ಶ್ರೀ ಸುಬ್ರಹ್ಮಣ್ಯಂ” ಎಂಬ ಭಕ್ತಿ ಗೀತೆಯನ್ನು ನಿರಂಜನ್ ಕಡ್ಲಾರು ರಚಿಸಿ ನಿರ್ವಹಣೆ ಮಾಡಿದ್ದು, ಶರತ್ ಬಿಳಿನೆಲೆ ಇವರ ಸಂಗೀತವಿದೆ. ಮಿಥುನ್ ರಾಜ್ ವಿದ್ಯಾಪುರ ಇವರ ಗಾಯನಕ್ಕೆ ದಿವ್ಯ ನಿಧಿ ರೈ ರವರ ಸಹಗಾಯನವಿದೆ. ಸುದ್ದಿ ಮೀಡಿಯಾ ಸುಳ್ಯ ಇವರ ವಿಡಿಯೋ ಕೃಪೆ ಇದ್ದು, ಇಂದುಧರ್ ಹಳೆಯಂಗಡಿಯವರ ಸಂಕಲನವಿದೆ. ಈ ಭಕ್ತಿಗೀತೆಯನ್ನು NA Times ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading