Ad Widget

ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವ ; “ಕ್ರೀಡೆ ದೈಹಿಕ  ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ” : ಟಿ.ಎಂ ಶಹೀದ್

ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ ವಿಜೃಂಭಣೆಯಿಂದ ಜರುಗಿತು.
ಕ್ರೀಡಾಕೂಟದ ಉದ್ಘಾಟನೆ ಯಯನ್ನು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ಉದ್ಘಾಟಿಸಿ ಕ್ರೀಡಾಳುಗಳ ವಂದನೆ ಸ್ವೀಕರಿಸಿದರು.
ನಂತರ ಮಾತನಾಡಿದ ಟಿ.ಎಂ. ಶಹೀದ್ ರವರು ಮಾತನಾಡಿ “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ ಮಾನಸಿಕ ಮತ್ತು ದೈಹಿಕ ಕ್ಷಮತೆಗೆ  ಸಹಕಾರಿ” ಎಂದರು.
ಅನ್ಸಾರಿಯಾ ಎಜುಕೇಶನ್  ಸೆಂಟರ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ ಧ್ವಜಾರೋಹಣಗೈದರು.
ಮುಖ್ಯ ಶಿಕ್ಷಕರಾದ ಇಲ್ಯಾಸ್. ಕೆ ಕಾಶಿಪಟ್ಟಣ ಸ್ವಾಗತಿಸಿದರು. ಗ್ರೀನ್ ವ್ಯೂ ಸಂಸ್ಥೆಯ  ಸಂಚಾಲಕ ಕೆ.ಎಂ ಮುಸ್ತಫ ಪ್ರಸ್ತಾವನೆಗೈದರು.
ಅಧ್ಯಕ್ಷ ಅಬ್ದುಲ್ ಮಜೀದ್ ಬಣ್ಣಬಣ್ಣದ ಬಲೂನ್ ಗಳನ್ನು ಬಾನೆತ್ತರಕ್ಕೆ ಹಾರಿಸಿ ಶುಭ ಕೋರಿದರು.
ವೇದಿಕೆಯಲ್ಲಿ ಶಾಲಾ ಸಂಯೋಜಕರಾದ ಕೆ.ಎಸ್. ಉಮ್ಮರ್, ಶಾಫಿ ಕುತ್ತಾಮೊಟ್ಟೆ, ಆಡಳಿತ ಸಮಿತಿ ಸದಸ್ಯರು ಗಳಾದ ಎಸ್.ಎಂ. ಅಬ್ದುಲ್ ಹಮೀದ್, ಉಬೈದುಲ್ಲಾ ಸಾಲಿ ಕಟ್ಟೆಕ್ಕಾರ್ಸ್, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಎನ್.ಎ.ಅಬ್ದುಲ್ಲ, ಸದಸ್ಯ ಎಸ್.ಪಿ. ಅಬೂಬಕ್ಕರ್, ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯ ಸಿದ್ದೀಕ್ ಕೊಕ್ಕೋ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಪೀರ್ ಸಾಬ್ ಪಥ ಸಂಚಲನದ ಉಸ್ತುವಾರಿ ವಹಿಸಿದ್ದರು.
ಶಾಲಾ ವಿದ್ಯಾರ್ಥಿ ನಾಯಕ
ಅಲ್ಲಾವುದ್ದೀನ್ ಪ್ರತಿಜ್ಞಾ ವಿಧಿ ಬೋದಿಸಿದರು, ಶಿಕ್ಷಕಿ ಫಾತಿಮ ವಂದಿಸಿದರು.
ಶಿಕ್ಷಕರುಗಳಾದ ರಮ್ಯಾ, ಅಶ್ವಿನಿ ಮತ್ತು ರಂಜಿತ್ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading