Ad Widget

ಕೆ.ವಿ.ಜಿ. ಅಮರಜ್ಯೋತಿ ಪದವಿ ಪೂರ್ವ ಕಾಲೇಜು ವತಿಯಿಂದ “ಎಜೆ ಮ್ಯಾರಥಾನ್” ; “ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದು ಕೆವಿಜಿಯವರಿಗೆ ಸಂದ ಗೌರವ” : ಡಾ. ರೇಣುಕಾಪ್ರಸಾದ್ ಕೆ.ವಿ

ಸುಳ್ಯದ ಕೆವಿಜಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಪ್ರಯುಕ್ತ ಮ್ಯಾರಥಾನ್ ಸ್ಪರ್ಧೆಯು ಸುಳ್ಯದ ಪ್ರಮುಖ ರಸ್ತೆಯಲ್ಲಿ ಡಿ.26ರಂದು  ನಡೆಯಿತು.

ಕಾಲೇಜಿನ ದಶಮಾನೋತ್ಸವದ ಪೂರ್ವಭಾವಿಯಾಗಿ ಕಾಲೇಜು ಸ್ಥಾಪಕರಾದ ಡಾ.ಕುರುಂಜಿ ವೆಂಕಟರಮಣ ಗೌಡರ 97ನೇ ಜನ್ಮದಿನಾಚರಣೆಯ ಪ್ರಯುಕ್ತ  “ಆರೋಗ್ಯಕ್ಕಾಗಿ ಓಟ” ಎಂಬ ಮ್ಯಾರಥಾನ್ ಗೆ ಎ.ಒ.ಎಲ್.ಇ ಕಮಿಟಿ ‘ಬಿ’ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ ಅವರು ಚಾಲನೆ ನೀಡಿದರು.

ಮ್ಯಾರಥಾನ್‌ನಲ್ಲಿ ವಿವಿಧ ವಿಭಾಗದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಕೊನೆಯಲ್ಲಿ ನಡೆದ  ಸಮಾರೋಪ ಸಮಾರಂಭದಲ್ಲಿ ಡಾ.ರೇಣುಕಾಪ್ರಸಾದ್ ಕೆ.ವಿ ಅವರು ಮಾತನಾಡಿ “ಒಂದು ಸಾವಿರಕ್ಕೂ ಅಧಿಕ ಮಂದಿ ಕ್ರೀಡಾಪಟುಗಳು ಭಾಗವಹಿಸುವ ಮೂಲಕ ಎಜೆ ಮ್ಯಾರಥಾನ್ ಅತ್ಯಂತ ಯಶಸ್ವಿಯಾಗಿದೆ” ಎಂದರಲ್ಲದೆ  “ಈ ಯಶಸ್ಸು ಡಾ.ಕುರುಂಜಿಯವರಿಗೆ ಸಂದ ಗೌರವವಾಗಿದೆ” ಎಂದು‌ ಹೇಳಿದರು.

ಮುಖ್ಯ ಅತಿಥಿಗಳಾಗಿ  ಸುಳ್ಯ ಪೊಲೀಸ್ ಉಪನಿರೀಕ್ಷ ಸಂತೋಷ್ ಬಿ.ಪಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌‌‌ ಕಮಿಟಿ ಪ್ರಧಾನ ಕಾರ್ಯದರ್ಶಿ ಡಾ.ಜ್ಯೋತಿ ಆರ್.ಪ್ರಸಾದ್,
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌‌‌ ಕಮಿಟಿ ‘ಬಿ’ ಕಾರ್ಯನಿರ್ವಾಹಕ ನಿರ್ದೇಶಕ ಮೌರ್ಯ.ಆರ್ ಕುರುಂಜಿ,  ಕಮಿಟಿ ‘ಬಿ’ ನಿರ್ದೇಶಕಿ ಡಾ.ಅಭಿಜ್ಞಾ, ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯಶೋಧ ರಾಮಚಂದ್ರ, ಉಪ ಪ್ರಾಂಶುಪಾಲರಾದ ದೀಪಕ್ ವೈ.ಆರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ರಾಜೇಶ್, ಅಕ್ಷತಾ, ಪ್ರಶಾಂತ್, ಆಶಾ ಉಪಸ್ಥಿತರಿದ್ದು ಶುಭಹಾರೈಸಿದರು.

ಕಾಲೇಜು ಪ್ರಾಂಶುಪಾಲರಾದ ಯಶೋಧ ರಾಮಚಂದ್ರ ಸ್ವಾಗತಿಸಿ, ಅಕಾಡೆಮಿ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ ವಂದಿಸಿದರು. ಮಲ್ಲಿಕಾ ಹಾಗೂ ರೀತಾ ಕಾರ್ಯಕ್ರಮ ನಿರೂಪಿಸಿದರು.

ಮ್ಯಾರಥಾನ್ ಫಲಿತಾಂಶ ವಿವರ : ಮ್ಯಾರಥಾನ್ ಸ್ಫರ್ಧೆಯ
ಪುರುಷರ 10 ಕಿ.ಮೀ ಕಿಲೋಮೀಟರ್ ವಿಭಾಗದಲ್ಲಿ ರಂಗಣ್ಣ ಮಂಗಳೂರು ಪ್ರಥಮ, ದ್ವಿತೀಯ ಟಿಷನ್ ಮಾದಪ್ಪ ಮಡಿಕೇರಿ, ತೃತೀಯ ಅಕ್ಷಯ್ ಮಂಗಳೂರು, ಚತುರ್ಥ ನಿತಿನ್ ಯು.ಎಲ್ ಕೊಡಗು, ಐದನೇ ಸ್ಥಾನ ಲಾಮರಿ ಉಜಿರೆ  ಪಡೆದುಕೊಂಡರು.

ಐದು ಕಿಲೋಮೀಟರ್ ಮಹಿಳಾ ವಿಭಾಗದಲ್ಲಿ ನಂದಿನಿ ನಿಟ್ಟೆ ಪ್ರಥಮ, ಜಯಶ್ರೀ ಎಸ್.ಡಿ.ಎಂ ದ್ವಿತೀಯ, ದೀಕ್ಷಿತಾ ನಿಟ್ಟೆ ತೃತೀಯ, ಸಾಕ್ಷಿ ನಿಟ್ಟೆ ಚತುರ್ಥ, ಐದನೇ ಸ್ಥಾನ ಯೋಗಿತಾ ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ ಪಡೆದರು. ಕಿಲೋಮೀಟರ್ ಹುಡುಗರ ವಿಭಾಗದಲ್ಲಿ ಪ್ರಥಮ ಆದಿತ್ಯ ಎನ್.ಪಿ‌‌. ಎಸ್.ಡಿ.ಎಂ, ದ್ವಿತೀಯ ದಿಲನ್ ಅರುಣ ಚೇರಂಬಾಣೆ, ತೃತೀಯ ಶಾಶ್ವತ್ ನಿಟ್ಟೆ, ಚತುರ್ಥ ಲಿಖಿತ್.ಎನ್, ಐದನೇ ಸ್ಥಾನ ಜಿತೇಶ್ ಎನ್.ಎಂ.ಸಿ ಸುಳ್ಯ, ಮೂರು ಕಿಲೋಮೀಟರ್ ಮಹಿಳಾ ವಿಭಾಗದಲ್ಲಿ ಪ್ರಥಮ ಅನುಶ್ರೀ ಪಿ.ಎಸ್‌ ಆಳ್ವಾಸ್, ದ್ವಿತೀಯ ವಿಜಯಲಕ್ಷ್ಮಿ ಆಳ್ವಾಸ್, ತೃತೀಯ ಅನಘ ಆಳ್ವಾಸ್, ಚತುರ್ಥ ದೀಪಿಕಾ ನಿಟ್ಟೆ, ಐದನೇ ಸ್ಥಾನ ಮಲ್ಲಮ್ಮ ಆಳ್ವಾಸ್ ಪಡೆದುಕೊಂಡರು. 3 ಕಿಲೋಮೀಟರ್ ಪುರುಷರ ವಿಭಾಗದಲ್ಲಿ ಪ್ರಥಮ ವರ್ಷಿತ್ ನಿಟ್ಟೆ, ದ್ವಿತೀಯ ಪ್ರೇಕ್ಷಕ್ ಪ್ರಗತಿ ಕಾಣಿಯೂರು, ತೃತೀಯ ನಿತಿನ್, ಚತುರ್ಥ ಪುಟ್ಟರಾಜ, ಐದನೇ ಸ್ಥಾನ ಭುವನ್ ರಾವ್ ನಿಟ್ಟೆ ಪಡೆದುಕೊಂಡರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading